ವಯನಾಡ್: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ (Wayanad Landslide) ಸಂತ್ರಸ್ತರಾದವರಿಗೆ, ಎನ್‌ಎಸ್‌ಯುಐ ರಾಷ್ಟೀಯ ಅಧ್ಯಕ್ಷ ವರುಣ್ ಚೌಧರಿ ಹಾಗೂ ಎನ್‌ಎಸ್‌ಯುಐ ಜನರಲ್ ಸೆಕ್ರೆಟರಿ, ರಾಜ್ಯ ಕಾಂಗ್ರೆಸ್ ಯುವ ಮುಖಂಡ ಧ್ರುವ ಜತ್ತಿ ಅವರು ದಿನಬಳಕೆಗೆ ಬೇಕಾಗುವ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದರು.
ಕೇರಳದ ವಯನಾಡಿನ ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡಿದ ಎನ್‌ಎಸ್‌ಯುಐ ರಾಷ್ಟೀಯ ಅಧ್ಯಕ್ಷ ವರುಣ್ ಚೌಧರಿ ಹಾಗೂ ಎನ್‌ಎಸ್‌ಯುಐ ಜನರಲ್ ಸೆಕ್ರೆಟರಿ, ರಾಜ್ಯ ಕಾಂಗ್ರೆಸ್ ಯುವ ಮುಖಂಡ ಧ್ರುವ ಜತ್ತಿ ಅವರು, ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿ, ದಿನಬಳಕೆಗೆ ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು.
ಇದನ್ನೂ ಓದಿ: Rajya Sabha Election: 9 ರಾಜ್ಯಗಳ 12 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಘೋಷಣೆ; ಸೆ.3ಕ್ಕೆ ಮತದಾನ
ಕೇರಳದ ವಯನಾಡ್ ಕ್ಷೇತ್ರದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ನೂರಾರು ಜನ ಮೃತಪಟ್ಟು ಹಲವಾರು ಕುಟುಂಬಗಳು ನಿರ್ಗತಿಕರಾಗಿರುವುದು ಬಹಳ ದುಃಖದ ಸಂಗತಿ. ನೆಲೆಯನ್ನು ಕಳೆದುಕೊಂಡ ಕುಟುಂಬಗಳಿಗೆ ಆದಷ್ಟು ಬೇಗ ಆಶ್ರಯ ದೊರೆಯುವಂತಾಗಲಿ. ನಿರ್ಗತಿಕ ಕುಟುಂಬಗಳು ಈ ನೋವಿನಿಂದ ಹೊರಬಂದು ಎಲ್ಲರಂತೆ ಸಹಜವಾಗಿ ಬದುಕುವಂತಾಗಲಿ ಎಂದು ಈ ವೇಳೆ ಅವರು ತಿಳಿಸಿದರು.