Site icon Vistara News

Constitution Day: ಸಂವಿಧಾನದ ಉಳಿವಿಗಾಗಿ ಅಸಿಸ್ಟೆಂಟ್ ಕಮಾಂಡೆಂಟ್ ರಾಜೀನಾಮೆ

Suhail Ahmed

ಬೆಂಗಳೂರು: ಸಂವಿಧಾನ ದಿನದಂದು (Constitution Day) ಸಂವಿಧಾನದ ಉಳಿವಿಗಾಗಿ ಪೊಲೀಸ್ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ಕರ್ನಾಟಕ ಪೊಲೀಸ್‌ನ ಇಂಡಸ್ಟ್ರಿಯಲ್‌ ಸೆಕ್ಯೂರಿಟಿ ವಿಂಗ್‌ನ ಅಸಿಸ್ಟೆಂಟ್ ಕಮಾಂಡೆಂಟ್ ಸುಹೇಲ್ ಅಹಮದ್ ಅವರು ತಮ್ಮ ಹುದ್ದೆ ತೊರೆದಿದ್ದಾರೆ.

ಡಿವೈಎಸ್‌ಪಿ ರ‍್ಯಾಂಕ್‌ ಅಧಿಕಾರಿ ಸುಹೇಲ್ ಅಹಮದ್ ಅವರು, ಸದ್ಯ ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾದ ಭದ್ರತಾ ವಿಭಾಗದ ಮುಖ್ಯಸ್ಥರಾಗಿದ್ದರು. ಇವರು ಮೈಸೂರು ಜಿಲ್ಲೆಯ ಹುಣಸೂರು ಮೂಲದವರಾಗಿದ್ದಾರೆ. ಸಂವಿಧಾನ ಕಾರ್ಯಕಲ್ಪ ಕಾರ್ಯಕ್ಕಾಗಿ ಅಸಿಸ್ಟೆಂಟ್‌ ಕಮಾಂಡೆಂಟ್‌ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಸುಹೇಲ್ ಅಹಮದ್ ತಿಳಿಸಿದ್ದಾರೆ.

ಇದನ್ನೂ ಓದಿ | ಸೈಬರ್‌ ಸೇಫ್ಟಿ ಅಂಕಣ: ನಿಮ್ಮ ಸೋಶಿಯಲ್‌ ಮೀಡಿಯಾದಿಂದಲೇ ನಿಮ್ಮ ಸುರಕ್ಷತೆಗೆ ಅಪಾಯ!

ಈ ಬಗ್ಗೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ ಸುಹೇಲ್ ಅಹಮದ್ ಪತ್ರ ಬರೆದಿದ್ದು, ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ತತ್ವಗಳು ಅಪಾಯದಲ್ಲಿರುವುದರಿಂದ ಸಂವಿಧಾನ ನನಗೆ ಕೊಡುಗೆಯಾಗಿ ನೀಡಿರುವ ಅಸಿಸ್ಟೆಂಟ್‌ ಕಮಾಂಡೆಂಟ್‌ ಹುದ್ದೆಯನ್ನು, ಈ ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ದಿನದಂದು ರಾಜೀನಾಮೆ ನೀಡುತ್ತಿದ್ದೇನೆ. ಸಂವಿಧಾನ ಕಾಯಕಲ್ಪ ಉದ್ದೇಶದೊಂದಿಗೆ ಈ ನಿರ್ಧಾರ ಕೈಗೊಂಡಿದ್ದು, ರಾಜೀನಾಮ ಪತ್ರವನ್ನು ಅಂಗೀಕರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version