ತೀರ್ಥಹಳ್ಳಿ: ಇಲ್ಲಿನ ಪುರುಷೋತ್ತಮ ಕೃಷಿ ಸಂಶೋಧನಾ ಪ್ರತಿಷ್ಠಾನದಿಂದ ಕುರುವಳ್ಳಿ ಎಂ. ಪುರುಷೋತ್ತಮ ರಾವ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯ ಪ್ರದಾನ (Award Ceremony) ಕಾರ್ಯಕ್ರಮ ಶುಕ್ರವಾರ (ಜ.೨೭) ನಡೆಯಿತು.
ಗುಜರಾತ್‌ನ ಸಾವಯವ ಕೃಷಿಕ ಮಗನ್ ಭಾಯ್ ಮತ್ತು ಧನು ಬೆನ್ ದಂಪತಿಗೆ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪುರುಷೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಮಾತನಾಡಿದ ಆರ್‌ಎಸ್‌ಎಸ್‌ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ, ʻʻಪುರುಷೋತ್ತಮ ಪ್ರಶಸ್ತಿ ನೀಡಿದ್ದು ವ್ಯಕ್ತಿಗಲ್ಲ, ವಿಚಾರಕ್ಕೆ. ಪುರುಷೋತ್ತಮ ರಾಯರು ಸಾವಯವ ಕೃಷಿ ಆರಂಭಿಸಿದಾಗ ಹುಚ್ಚ ಅಂದಿರಬಹುದು. ಆಗಿನ ಕಾಲದಲ್ಲಿ ರಾಸಾಯನಿಕ ಬಳಕೆ ಯಥೇಚ್ಛವಾಗಿತ್ತು. ಈಗ ಜಾಗೃತಿ ಉಂಟಾಗಿದೆ, ಸರ್ಕಾರವು ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆʼʼ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರತಿಷ್ಠಾನದ ಉಪಾಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕೃಷಿಕರು ರಾಸಾಯನಿಕ ಕೃಷಿಯಿಂದ ಮುಕ್ತರಾಗಿ ಸಾವಯವ ಕೃಷಿಯತ್ತ ಸಾಗುವುದು ಅನಿವಾರ್ಯ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.
ಇದನ್ನೂ ಓದಿ Vishnuvardhan: ವಿಷ್ಣು ಸ್ಮಾರಕದ ಮುಂದೆ ಅಭಿಮಾನಿಗಳ ಆಕ್ರೋಶ; ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿರುವ ದಾದಾ ಫ್ಯಾನ್ಸ್!
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಗನ್ ಭಾಯ್, ಭೂಮಿಯನ್ನು ತಾಯಿಯಂತೆ ಕಾಣಬೇಕು. ಗೌರವ, ಪ್ರೀತಿಯ ಜೊತೆಗೆ ಅದರ ಇತರ ಅಗತ್ಯಗಳನ್ನು ಗಮನಿಸಬೇಕು. ಆಗ, ಭೂಮಾತೆ ಕೈಬಿಡದೆ ನಮ್ಮನ್ನು ಕಾಪಾಡುತ್ತಾಳೆ ಎಂದು ಹೇಳಿದರು. ಗುಜರಾತ್ ರಾಜ್ಯದ ಕಛ್ ಜಿಲ್ಲೆಯಲ್ಲಿ ಮರು ಭೂಮಿಯಂತಿದ್ದ ತಮ್ಮ ಜಮೀನಿನಲ್ಲಿ ತಮ್ಮ ಇಡೀ ಕುಟುಂಬ ಕೃಷಿ ಮಾಡಿ ಯಶಸ್ವಿಯಾದ ಕಥನವನ್ನು ಬಿಚ್ಚಿಟ್ಟರು.
ಪ್ರತಿಷ್ಠಾನದ ಅಧ್ಯಕ್ಷ ವರದಾಚಾರ್ ಎಸ್. ಅಧ್ಯಕ್ಷೀಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಗನ್ ಭಾಯ್ ಕುಟುಂಬದ ಕೃಷಿ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಸಾಧಕ-ಸಾಧನೆ ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಮಗನ್ ಭಾಯ್ ಅವರ ಇಡೀ ಕುಟುಂಬವನ್ನು ತೀರ್ಥಹಳ್ಳಿಯವರೆಗೆ ಆಹ್ವಾನಿಸಿ, ಕುಟುಂಬದ ಎಲ್ಲ ಸದಸ್ಯರ ಸಮ್ಮುಖದಲ್ಲಿ ಮಗನ್ ಭಾಯ್ ಧನುಬೆನ್ ದಂಪತಿಯನ್ನು ಗೌರವಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ | Pathaan Movie: ಮುಂಬೈ ಐಕಾನಿಕ್ ಗೈಟಿ ಗ್ಯಾಲಕ್ಸಿ ಥಿಯೇಟರ್‌ಗೆ ಭೇಟಿ ಕೊಟ್ಟ ದೀಪಿಕಾ ಪಡುಕೋಣೆ: ವಿಡಿಯೊ ಇಲ್ಲಿದೆ