Site icon Vistara News

B.C Nagesh | ಒಂದೇ ಆವರಣದೊಳಗೆ 2 ಶಾಲೆ ನಡೆಸುವಂತಿಲ್ಲ; ಶಿಕ್ಷಣ ಸಚಿವರ ಸೂಚನೆ

ಶಿಕ್ಷಣ ಇಲಾಖೆ ಮೌಲ್ಯ ಶಿಕ್ಷಣ ಸಮಾಲೋಚನಾ ಸಭೆ

ಬೆಂಗಳೂರು: ರಾಜ್ಯದಲ್ಲಿ ಒಂದೇ ಆವರಣದೊಳಗೆ ಒಂದೇ ಮಾಧ್ಯಮದ 2ಕ್ಕೂ ಹೆಚ್ಚು ಪ್ರಾಥಮಿಕ/ ಪ್ರೌಢಶಾಲೆಗಳು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ನಡೆಯುತ್ತಿರುವುದು ಕಂಡು ಬಂದಿದೆ. ಹೀಗಾಗಿ ಒಂದು ಆವರಣದಲ್ಲಿ ಎರಡು ಶಾಲೆಗಳನ್ನು ನಡೆಸದಂತೆ ಶಿಕ್ಷಣ ಸಚಿವ ನಾಗೇಶ್‌ (B.C Nagesh) ಸೂಚನೆ ನೀಡಿದ್ದಾರೆ.

ಈ ಕುರಿತು ಟಿಪ್ಪಣಿ ಹೊರಡಿಸಿರುವ ಶಿಕ್ಷಣ ಸಚಿವ ನಾಗೇಶ್‌, ಒಂದೇ ಆವರಣದಲ್ಲಿ ಎರಡು ಶಾಲೆಗಳು ನಡೆಯುವುದರಿಂದ ಗುಣಾತ್ಮಕ ಶಿಕ್ಷಣ ನೀಡಲು ಪೂರಕ ವಾತಾವರಣ ಇರುವುದಿಲ್ಲ.

ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಒಂದೇ ಆವರಣದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಶಾಲೆಗಳು ನಡೆಯುತ್ತಿರುವ ಪ್ರಕರಣಗಳನ್ನು ಗುರುತಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಒಂದೇ ಶಾಲೆಯಾಗಿ ನಡೆಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು / ಉಪನಿರ್ದೇಶಕರುಗಳು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಈ ಶಾಲೆಗಳಿಗೆ ಇರುವ ಪ್ರತ್ಯೇಕ U-DISE ಕೋಡ್‌ಗಳಿಗೆ ಬದಲಾಗಿ ಒಂದು U-DISE ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ತಕ್ಷಣ ಕ್ರಮ ಕೈಗೊಂಡು, ಈ ಬಗ್ಗೆ ವರದಿಯನ್ನು ಕಡತದಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

ಇದನ್ನೂ ಓದಿ | Mysore Dasara | ಕಾಡಿನ ಮಕ್ಕಳ ಜತೆ ಹೆಜ್ಜೆ ಹಾಕಿದ ಶಿಕ್ಷಣ ಸಚಿವ ನಾಗೇಶ್‌

Exit mobile version