Site icon Vistara News

Baby Bump | ಹಾರ್ಲೇ ಡೇವಿಡ್ಸನ್ ಬೈಕ್ ರೈಡ್‌ ಮಾಡಿದ ಗರ್ಭಿಣಿ; ಬೇಬಿ ಬಂಪ್‌ ಫೋಟೊ ಶೂಟ್‌ ವೈರಲ್‌

baby bump

ಶಿವಮೊಗ್ಗ: ಇತ್ತೀಚೆಗೆ ಬೇಬಿ ಬಂಪ್‌ (Baby Bump) ಫೋಟೊ ಶೂಟ್‌ ಮಾಡಿಸುವ ಕ್ರೇಜ್‌ ಹೆಚ್ಚಾಗುತ್ತಿದೆ. ವಿಭಿನ್ನ ಫೋಟೊ ಶೂಟ್‌ ಮಾಡಿಸಲು ಭಾವಿ ತಾಯಂದಿರು ಮುಂದಾಗುತ್ತಿದ್ದಾರೆ. ಇದೀಗ ಮಲೆನಾಡಿನ ೭ ತಿಂಗಳ ಗರ್ಭಿಣಿಯೊಬ್ಬರು ಭಾರೀ ತೂಕದ ಐಷಾರಾಮಿ ಬೈಕ್‌ವೊಂದನ್ನು ರೈಡ್‌ ಮಾಡುವ ಮೂಲಕ ತಾಯ್ತನವನ್ನು ಎಂಜಾಯ್‌ ಮಾಡಿದ್ದಾರೆ.

ಶಿವಮೊಗ್ಗದ ಮಾಚೇನಹಳ್ಳಿಯ ರಕ್ಷಿತಾ ಎಂಬುವವರು, ತಮ್ಮ ಪತಿಯ ಸಹಕಾರದಿಂದ ಕಪ್ಪು ಬಣ್ಣದ ಹಾರ್ಲೇ ಡೇವಿಡ್ಸನ್‌ ಬೈಕ್‌ ಓಡಿಸಿದ್ದು, ಇದರ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಮೊದಲು ಮಿಸ್ ಕರ್ನಾಟಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ರಕ್ಷಿತಾ, ತಮ್ಮ ಗರ್ಭಿಣಿ ಅವಧಿಯಲ್ಲೂ ವಿಭಿನ್ನವಾಗಿ ಏನಾದರೂ ಮಾಡಬೇಕೆಂದು, ಈ ರೀತಿಯ ಫೋಟೊ ಶೂಟ್ ಮಾಡಿಸಿಕೊಂಡಿದ್ದಾಗಿ ಹೇಳಿದ್ದಾರೆ.

ಪ್ರೆಗ್ನೆಂಟ್‌ ಸಮಯದಲ್ಲಿ ಕೆಲವರು ಭಾರದ ವಸ್ತುವನ್ನು ಎತ್ತುವ ಇಲ್ಲವೇ ಆಯಾಸದ ಕೆಲಸಗಳನ್ನು ಮಾಡದೆ ವಿಶ್ರಾಂತಿಯಲ್ಲಿರುತ್ತಾರೆ. ಇನ್ನೂ ಈ ಸಂದರ್ಭದಲ್ಲಿ ಪ್ರಯಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತಾರೆ. ಆದರೆ 7 ತಿಂಗಳ ಗರ್ಭಿಣಿಯಾಗಿರುವ ರಕ್ಷಿತಾ ಬ್ಲೂ ಜೀನ್ಸ್‌ ಹಾಗೂ ಬ್ಲಾಕ್‌ ಟೀ ಶರ್ಟ್‌ ಜತೆಗೆ ಜರ್ಕಿನ್‌ ಧರಿಸಿ ಫೋಟೊ ಶೂಟ್‌ ಮಾಡಿಸಿದ್ದಾರೆ. ಕೊರೊನಾ ಲಾಕ್‌ಡೌನ್ ವೇಳೆ ಹಲವರಿಗೆ ಸಹಕಾರ ನೀಡಿ, ಅಗತ್ಯವುಳ್ಳವರಿಗೆ ಆಹಾರದ ಕಿಟ್ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈಗ ತಮ್ಮ ಬೇಬಿ ಬಂಪ್‌ ಫೋಟೊ ವೈರಲ್‌ ಮೂಲಕ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ | ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ ಸಿಗದ ಪ್ಯಾಕೇಜ್‌; 2ನೇ ಹಂತದ ಪಾದಯಾತ್ರೆಗೆ ಮಹಿಳೆಯರು ಸಜ್ಜು

Exit mobile version