ಶಿರಸಿ: ನಗರದ ಬಾಲಕರ ಬಾಲಮಂದಿರ ಆವರಣದಲ್ಲಿ ಮೂರು ತಿಂಗಳ ಹಸುಗೂಸೊಂದನ್ನು (Baby found) ಅಪರಿಚಿತರು ಸುರಕ್ಷಿತವಾಗಿ ಬಿಟ್ಟುಹೋಗಿದ್ದು, ಮಂಗಳವಾರ ರಾತ್ರಿ (ಡಿ.೨೦) ೯ ಗಂಟೆಯ ಸುಮಾರಿಗೆ ಪತ್ತೆಯಾಗಿದೆ.
ಮಗು ಅಳುವ ಧ್ವನಿ ಕೇಳಿದ ಬಾಲಮಂದಿರದ ಮೇಲ್ವಿಚಾರಕರು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸುರಕ್ಷಿತವಾದ ರೀತಿಯಲ್ಲಿ ಮಗುವನ್ನು ಆವರಣದಲ್ಲಿ ಬಿಟ್ಟು ಯಾರಿಗೂ ಗೊತ್ತಾಗದಂತೆ ಹೋಗಿರುವುದು ಕಂಡು ಬಂದಿದೆ.
ಅವರು ತಕ್ಷಣ ಮಕ್ಕಳ ಸುರಕ್ಷಾ ಕಮಿಟಿ ಸದಸ್ಯರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಮಕ್ಕಳ ಸುರಕ್ಷಾ ಕಮಿಟಿ ಅಧ್ಯಕ್ಷೆ ಅನಿತಾ ಪರ್ವತೆಕರ್ ಮತ್ತು ಸದಸ್ಯೆ ಅಂಜನಾ ಭಟ್ಟ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಬಾಲಮಂದಿರದೊಳಗೆ ಕರೆದೊಯ್ದು ಮಗುವಿಗೆ ಲಾಲನೆ-ಪಾಲನೆ ಮಾಡಿದ್ದಾರೆ. ನಂತರ ಆರೋಗ್ಯ ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ | Hiremath Samsthan Bhalki | ಡಿ.22ರಂದು ಶ್ರೀ ಡಾ. ಚನ್ನಬಸವ ಪಟ್ಟದ್ದೇವರ 133ನೇ ಜಯಂತ್ಯುತ್ಸವ, ವಿದ್ಯಾಚೇತನ ಸಮಾವೇಶ