ಬಾಗಲಕೋಟೆ: ಜತ್ತಿ ಫೌಂಡೇಶನ್ ವತಿಯಿಂದ “ವಿಷನ್ ಬಾಗಲಕೋಟೆ 2040” ಯೋಜನೆ ಅಡಿ ಜಿಲ್ಲೆಯ ತೇರದಾಳ ಕ್ಷೇತ್ರದ ಗೋಲಭಾವಿ ಮತ್ತು ಕಾಲತಿಪ್ಪಿ ಗ್ರಾಮದ ಸರ್ಕಾರಿ ಶಾಲೆಗಳ (Government Schools) ನವೀಕರಣ (Renovated) ಕಾರ್ಯ ಪೂರ್ಣಗೊಳಿಸಿ, ಶಾಲೆಗಳಿಗೆ ಹೊಸರೂಪ ನೀಡಲಾಗಿದೆ.
ಹಂಗಾಮಿ ರಾಷ್ಟ್ರಪತಿಯಾಗಿದ್ದ ದಿ. ಬಿ.ಡಿ. ಜತ್ತಿ ಅವರ ಮರಿ ಮೊಮ್ಮೊಗ ಧ್ರುವ ಜತ್ತಿ ಅವರು “ಪ್ರಾಜೆಕ್ಟ್ ವಿದ್ಯಾದೇಗುಲ” ಎನ್ನುವ ಕಾರ್ಯಕ್ರಮದೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಈ ಕಾರ್ಯ ಕೈಗೊಂಡಿದ್ದು, ಫ್ರಾನ್ಸ್ ನ 12 ಜನ ವಿದ್ಯಾರ್ಥಿಗಳ ಜೊತೆಗೂಡಿ ಜಿಲ್ಲೆಯ ತೇರದಾಳ ಕ್ಷೇತ್ರದ ಗೋಲಭಾವಿ ಮತ್ತು ಕಾಲತಿಪ್ಪಿ ಗ್ರಾಮದ ಸರ್ಕಾರಿ ಶಾಲೆಗಳ ನವೀಕರಣ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ: IND vs WI: ಟಿ20 ತಂಡದಲ್ಲಿ ಮುಗಿಯಿತು ಸೀನಿಯರ್‌ಗಳ ಆಟ; ವಿಶ್ವಕಪ್ಗೆ ಯಂಗ್ ಇಂಡಿಯಾ ರೆಡಿ
ಸುಮಾರು 22 ದಿನಗಳ ಕಾಲ ಈ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಹದಗೆಟ್ಟ ಶಾಲಾ ಕೊಠಡಿಗಳ ಮರು ನಿರ್ಮಾಣ, ಸಂಪೂರ್ಣ ಶಾಲೆಗೆ ಬಣ್ಣ ಬಳೆಯುವುದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಕೈಗೊಳ್ಳುವ ಮೂಲಕ ಗ್ರಾಮಸ್ಥರಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ.
ಪ್ರಾಜೆಕ್ಟ್ ವಿದ್ಯಾದೇಗುಲ ಉದ್ಘಾಟನೆ
ಗೋಲಭಾವಿಯ ಸಮುದಾಯ ಭವನದಲ್ಲಿ ಪ್ರಾಜೆಕ್ಟ್ ವಿದ್ಯಾದೇಗುಲ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಡಿಡಿಪಿಐ ಕೆ.ಡಿ. ಬಡಿಗೇರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜತ್ತಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಶಾಲೆಗಳ ನವೀಕರಣ ಕಾರ್ಯವನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಇದನ್ನೂ ಓದಿ: Karnataka Politics : ಟೊಮ್ಯಾಟೊಗೆ 130 ರೂ, ಎಂಜಿನಿಯರ್‌ಗೆ 5 ಕೋಟಿ ರೂ; Shadow CM ಪ್ರಕಟಣೆ ಎಂದ ಬಿಜೆಪಿ!
ಬಳಿಕ ಜತ್ತಿ ಫೌಂಡೇಶನ್ ನ ಮುಖ್ಯಸ್ಥ ಧ್ರುವ ಜತ್ತಿ ಮಾತನಾಡಿ, ಜಿಲ್ಲೆಯಲ್ಲಿ ಜತ್ತಿ ಫೌಂಡೇಶನ್ ವತಿಯಿಂದ “ವಿಷನ್ ಬಾಗಲಕೋಟೆ 2040” ಯೋಜನೆ ಅಡಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೌಶಲ್ಯ ತರಬೇತಿ ಮತ್ತು ಶಿಕ್ಷಣ ನೀಡುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಪ್ರಭು ಮಹಾಸ್ವಾಮೀಜಿ ಸಾನ್ನಿಧ್ಯತೆ ವಹಿಸಿಕೊಂಡಿದ್ದರು. ಇದೇ ವೇಳೆ ಫ್ರಾನ್ಸ್ ನ 12 ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಹಾಗೂ ಗೋಲಭಾವಿ ಮತ್ತು ಕಾಲತಿಪ್ಪಿ ಗ್ರಾಮಸ್ಥರು ಗೌರವಿಸಿ, ಸನ್ಮಾನಿಸಿದರು.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ತುಂತುರು ಹನಿಗಳ ಲೀಲೆ; ಕರಾವಳಿ, ಮಲೆನಾಡಲ್ಲಿ ವರುಣಾರ್ಭಟ
ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಬಸಕುಮಾರ್, ಗೋಲಭಾವಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ್ ಹೂಗಾರ್, ಮುಖಂಡ ನಿಂಗರಾಜ್ ಸಿಂಧಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.