ಬಾಗಲಕೋಟೆ : ಜಿಲ್ಲೆಯ (Bagalkote News) ಬಾದಾಮಿ ತಾಲೂಕಿನ ಕೆರೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಕೆರೂರು ಚಲೋ ಪ್ರತಿಭಟನೆ ಸೋಮವಾರ (ಸೆ.10) ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಖಾಕಿ ಸರ್ಪಗಾವಲು ಹಾಕಿದೆ.
ಸೆ. 6ರಂದು ಗಣೇಶ ವಿಸರ್ಜನೆ ವೇಳೆ ಪೋಲಿಸರ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಸಿಪಿಐ ಪಿಐ ಕರೆಪ್ಪ ಬನ್ನೆ ʻಬೇಗ ಮುಂದೆ ಸಾಗಿʼ ಅಂದಿದಕ್ಕೆ ಗಲಾಟೆ ನಡೆದಿತ್ತು. ಸುರೇಶ ಮತ್ತು ರಮೇಶ್ ಎಂಬ ಇಬ್ಬರು ಪೇದೆಗಳ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಸಿಪಿಐ ಮೂಗಿಗೆ ಪೆಟ್ಟು ಬಿದ್ದು ರಕ್ತಸ್ರಾವ ಆಗಿತ್ತು. ಈ ಹಿನ್ನೆಲೆಯಲ್ಲಿ ಶರಣು ಸಜ್ಜನ, ಮಹಾಂತೇಶ ಪಟ್ಟಣಶೆಟ್ಟಿ, ಸಿದ್ದೇಶ, ಸಚಿನ್, ಗಂಗಾಧರ, ಬಸವರಾಜ್ ಸೇರಿ ೧೧ ಜನರನ್ನು ಪೊಲೀಸರು ಬಂಧಿಸಿದ್ದರು. ಆ ಘಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಶರಣು ಸಜ್ಜನ ಇರಲೇ ಇಲ್ಲ. ಆದರೂ ಪೊಲೀಸರು ಅಮಾನುಷವಾಗಿ ನಡೆಸಿಕೊಂಡಿದ್ದಾರೆಂದು ಕಾರ್ಯಕರ್ತರು ಆರೋಪಿಸಿದ್ದರು.
ಇದನ್ನೂ ಓದಿ | ಕೆರೂರು ಘರ್ಷಣೆ ಖಂಡಿಸಿ ಪ್ರತಿಭಟಿಸದವರಿಗೆ ಬಂತು ಜೀವ ಬೆದರಿಕೆ ಕರೆ
ಮೇಲಿನ ಹಲ್ಲೆ ಖಂಡಿಸಿ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸುಳ್ಳು ಕೇಸ್ ದಾಖಲಿಸಿ, ದೌರ್ಜನ್ಯ ನಡೆಸಿರುವುದಾಗಿ ಹಿಂದೂ ಸಂಘಟನೆ ಆರೋಪಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆರೂರು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ೩ ಡಿವೈಎಸ್ಪಿ, ೯ ಇನ್ಸ್‌ಪೆಕ್ಟರ್, ೧೫ ಸಬ್ ಇನ್ಸ್‌ಪೆಕ್ಟರ್, ೩೦೦ ಪೇದೆಗಳು, ಎರಡು ಕೆಎಸ್ಆರ್‌ಪಿ ತುಕಡಿ, ೬ ಡಿಎಆರ್ ಹಾಗೂ ಒಂದು ಕ್ಯೂಆರ್‌ಟಿ ನಿಯೋಜಿಸಿದ್ದಾರೆ.
ಇದನ್ನೂ ಓದಿ | ಕೆರೂರು ಗಲಭೆ | ಹಿಂದುಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಬೈಕ್ ರ‍್ಯಾಲಿ