Site icon Vistara News

ಬಾಗಲಕೋಟೆಯಲ್ಲಿ ಮೊಸಳೆ ಪಾರ್ಕ್‌ ಆರಂಭಿಸಿ ಎಂದು ಅಂಗಲಾಚುತ್ತಿರುವ ಜನರು

ಬಾಗಲಕೋಟೆ: ಜಿಲ್ಲೆಯಲ್ಲಿ ಜನ‌ಜಾನುವಾರುಗಳ ಮೇಲೆ ಮೊಸಳೆಗಳು ಯಾವಾಗ ದಾಳಿ ಮಾಡುತ್ತವೆಯೋ ಎಂದು ಭಯದಲ್ಲಿ ಬದುಕುವಂತಾಗಿದೆ. ಕಾಳಿ ನದಿ ತೀರದ ಗ್ರಾಮಸ್ಥರಿಗೆ ಇನ್ನಿಲ್ಲದ ಭಯ ಸೃಷ್ಟಿಯಾಗುತ್ತಿದೆ.
ಇನ್ನು ಕೆಲವು ಕಡೆ ಗ್ರಾಮಕ್ಕೆ ನುಗ್ಗಿದಾಗ ಜನರ ಕೈಯಲ್ಲಿ ಸಿಕ್ಕು ಮೊಸಳೆಗಳು ಕೂಡ ಸಾವನ್ನಪ್ಪಿವೆ. ಕಳೆದ ಎರಡು ದಿನದ ಹಿಂದೆಯಷ್ಟೇ ಹುನಗುಂದ ತಾಲೂಕಿನ ರಾಮಥಾಳ ಗ್ರಾಮದಲ್ಲಿ 6 ಅಡಿ ಉದ್ದದ ಬೃಹತ್ ಮೊಸಳೆಯೊಂದು ರಾತ್ರೋರಾತ್ರಿ ನದಿ ಬಿಟ್ಟು ಹೊಲಕ್ಕೆ ನುಗ್ಗಿದ್ದು, ರೈತರು ಅದನ್ನು ಕಂಡು ಆತಂಕಕ್ಕೆ ಒಳಗಾದ್ರು. ತಕ್ಷಣ ರೈತರೆಲ್ಲಾ ಸೇರಿ ಮೊಸಳೆ ಕಟ್ಟಿ ಹಾಕಿ ಸುರಕ್ಷಿತ ತಾಣಕ್ಕೆ ಬಿಡಲು ಮುಂದಾದ್ರು. ಈ ಮಧ್ಯೆ ನದಿ ನೀರು ಕಡಿಮೆಯಾಗುತ್ತಿದ್ದಂತೆ ಮೊಸಳೆ ಬಗೆಗಿನ ಆತಂಕ ಮಾತ್ರ ತಪ್ಪಿಲ್ಲ.

ಬಾಗಲಕೋಟೆ ಜಿಲ್ಲೆ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಮೂರು ನದಿಗಳನ್ನು ಹೊಂದಿರುವ ಜಿಲ್ಲೆ. ಕಾಳಿ ನದಿಯ ದಡದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ನಿರ್ಮಾಣ ಕಾರ್ಯಗಳು 2019 ರಲ್ಲಿ ಪ್ರಾರಂಭವಾಯಿತು ಮತ್ತು ಜೂನ್ 2021 ರಲ್ಲಿ ಪೂರ್ಣಗೊಂಡಿತು. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ಪ್ರಾರಂಭ ಮಾಡುವ ಕಾರ್ಯಕ್ಕೆ ವಿಘ್ನ ಉಂಟಾಗಿದೆ.

ಇದನ್ನೂ ಓದಿ: ನನ್ನ ಟ್ರಿಪ್‌ ವಿವರವನ್ನು ಟಿವಿ, ಪೇಪರ್‌ನಲ್ಲಿ ನೋಡಿ ಎಂದಿದ್ದ ಆರೋಪಿ ನಾಗೇಶ

ಒಟ್ಟಾರೆ ನದಿ ತೀರದ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಪ್ರವಾಹ ಭೀತಿ ಇದ್ದರೆ. ಇದರಿಂದ ನದಿ ತೀರದ ಗ್ರಾಮಸ್ಥರಿಗೆ ಇನ್ನಿಲ್ಲದ ಭಯ ಸೃಷ್ಟಿಯಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಮೊಸಳೆ ಪಾರ್ಕ್ ಪೂರ್ಣಗೊಳಿಸಿ ಅದನ್ನು ಆರಂಭಿಸಿ ಜನ ಜಾನುವಾರುಗಳನ್ನು ರಕ್ಷಣೆ ಮಾಡೋದರ ಜೊತೆಗೆ ಮೊಸಳೆಗಳನ್ನು ರಕ್ಷಣೆ ಮಾಡುವ ಕಾರ್ಯವಾಗಬೇಕಾಗಿದೆ ಎನ್ನುವುದು ಜಿಲ್ಲೆಯ ನಾಗರಿಕರ ಅಭಿಪ್ರಾಯ.

Exit mobile version