ಬಾಗಲಕೋಟೆ: ರಾಜ್ಯದಲ್ಲಿ ಭ್ರೂಣ ಹತ್ಯೆ ಜಾಲದ ಕರಾಳ ಮುಖಗಳು ಒಂದೊಂದೇ ಬಯಲಾಗುತ್ತಿವೆ. ಈಗಾಗಲೇ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಯನ್ನು ಕಾನೂನು ಬಾಹಿರ ಎಂದು ಘೋಷಿಸಿ, ಕಠಿಣ ಕ್ರಮಗಳ ಕಾನೂನು ಇದ್ದರೂ ಇದನ್ನು ತಡೆಯಲಾಗದಿರುವ (Foeticide Case) ಬಗ್ಗೆ ಈಗ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದೆಲ್ಲದರ ನಡುವೆ ಬಾಗಲಕೋಟೆಯಲ್ಲಿ ಮತ್ತೊಂದು ಭ್ರೂಣ ಹತ್ಯೆ ಪ್ರಕರಣ ಬಯಲಾಗಿದೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಭ್ರೂಣ ಹತ್ಯೆ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಭ್ರೂಣ ಹತ್ಯೆ ಆಗಿದೆ. ನಗರದ ಹೊರ ವಲಯದ ಕಸದ ರಾಶಿ ನಡುವೆ ನವಜಾತ ಶಿಶುವಿನ ಶವ ಕಂಡುಬಂದಿದೆ.
ಕೆಲವು ದಿನಗಳ ಹಿಂದೆಯಷ್ಟೇ ಬಾಲಕೋಟೆಯ ಮಹಾಲಿಂಗಪುರದಲ್ಲಿ ಮೂರನೇ ಮಗು ಹೆಣ್ಣು ಎಂಬದನ್ನು ಪತ್ತೆ ಮಾಡಿಸಿ ಮನೆಯಲ್ಲಿಯೇ ಗರ್ಭಪಾತ ಮಾಡಿಸಿದ ಘಟನೆ ಬೆಳಕಿಗೆ ಬಂದಿತ್ತು. ಘಟನೆಯಲ್ಲಿ ಮಹಾರಾಷ್ಟ್ರ ಮೂಲದ ಗರ್ಭಿಣಿ ಮೃತಪಟ್ಟಿದ್ದರು. ಪೊಲೀಸರು ನರ್ಸ್ ಸೇರಿದಂತೆ ಹಲವರನ್ನು ಬಂಧನ ಮಾಡಿದ್ದರು. ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಭ್ರೂಣ ಹತ್ಯೆಯ ಎರಡನೇ ಪ್ರಕರಣ ಇದು. ಇದರಿಂದಾಗಿ ಜನ ಜಿಲ್ಲೆಯ ಅಧಿಕಾರಿಗಳ ಕಾರ್ಯವೈಖರಿಗೆ ಛೀಮಾರಿ ಹಾಕುತ್ತಿದ್ದಾರೆ.
ಇದನ್ನೂ ಓದಿ: Weather Updates:ಇಡೀ ರಾತ್ರಿ ಭಾರೀ ಮಳೆ; ಮುಂಗಾರು ಆರಂಭದಲ್ಲೇ ಬೆಂಗಳೂರು ಅಸ್ತವ್ಯಸ್ತ
ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ಭೇಟಿ ಬೆನ್ನಲ್ಲೇ ಜಿಲ್ಲೆಯಲ್ಲಿ ವ್ಯಾಪಕವಾಗಿ ಭ್ರೂಣ ಹತ್ಯೆಯ ಜಾಲಗಳು ಕಾಣಿಸುತ್ತಿವೆ. ನಗರದ ಹೊರ ವಲಯದ ಕಸದ ರಾಶಿ ನಡುವೆ ನವಜಾತ ಶಿಶುವಿನ ಶವ ಕಂಡುಬಂದಿದೆ. ಈಗಾಗಲೇ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಯನ್ನು ಕಾನೂನು ಬಾಹಿರ ಎಂದು ಘೋಷಿಸಿ, ಕಠಿಣ ಕ್ರಮಗಳ ಕಾನೂನು ಇದ್ದರೂ ಇದನ್ನು ತಡೆಯಲಾಗದಿರುವ ಬಗ್ಗೆ ಈಗ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮತ್ತೆ ಇಂಥ ಪ್ರಕರಣಗಳು ಆಗದಂತೆ ಕಾನೂನನ್ನು ಮತ್ತಷ್ಟು ಕಠಿಣ ಮಾಡಬೇಕು ಎಂದು ಜನರೂ ಕೂಡ ಒತ್ತಾಯಿಸುತ್ತಿದ್ದಾರೆ.
ಜಾಲಕ್ಕೆ ಅಧಿಕಾರಿಗಳು ಬೆಂಗಾವಲು?
ಇಷ್ಟೂ ಪ್ರಕರಣಗಳು ಆದರೂ ಆರೋಗ್ಯ ಇಲಾಖೆ, ಡಿಸಿಪಿಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಾಢ ನಿದ್ರೆಯಲ್ಲಿದೆಯಾ? ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಲಿಂಗ ಪತ್ತೆ ,ಗರ್ಭಪಾತ,ಭ್ರೂಣ ಹತ್ಯೆ ಜಾಲಕ್ಕೆ ಅಧಿಕಾರಿಗಳು ಬೆಂಗಾವಲಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಇನ್ನು ವರದಿಗಳ ಪ್ರಕಾರ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ದಕ್ಷಿಣ ಭಾರತದ ರಾಜ್ಯಗಳು ಈ ಹೆಣ್ಣು ಭ್ರೂಣ ಹತ್ಯೆ ತಡೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿವೆ. ಮಧ್ಯ ಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢಗಳಲ್ಲಿ ಈ ಪ್ರಕರಣಗಳು ಹೆಚ್ಚು ಆದರೂ, ಈಗ ಹೊರ ಬಿದ್ದಿರುವ ಮಾಹಿತಿಯನ್ನು ನೋಡುತ್ತಿದ್ದರೆ ಕರ್ನಾಟಕವೂ ಏನೂ ಕಡಿಮೆಯಿಲ್ಲ ಎನ್ನುವಂತಾಗುತ್ತಿದೆ. ಈ ಕಳಂಕವನ್ನು ನಾವು ತೊಡೆದುಕೊಳ್ಳಬೇಕಿದೆ. ಕಾನೂನು ಜಾರಿ, ಜಾಗೃತಿ ಜತೆಗೆ ತಂದೆ-ತಾಯಿಗಳ ಮನೋಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು.