Site icon Vistara News

Missing case | ಪಂಪ್‌ಸೆಟ್ ತರಲು ಹೊಲಕ್ಕೆ ಹೋದ ಯುವಕ ಮಲಪ್ರಭಾ ನದಿಯಲ್ಲಿ ನಾಪತ್ತೆ

Rain News

ಬಾಗಲಕೋಟೆ : ಪಂಪ್‌ಸೆಟ್ ತರಲು ಹೊಲಕ್ಕೆ ಹೋದ ಯುವಕ ಮಲಪ್ರಭಾ ನದಿಯಲ್ಲಿ (Rain News) ನಾಪತ್ತೆ ಆಗಿದ್ದಾನೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇ ಮಳಗಾವಿ ಗ್ರಾಮದ ದೇವಪ್ಪ ಕಮ್ಮಾರ (20) ನಾಪತ್ತೆಯಾದ ಯುವಕನಾಗಿದ್ದಾನೆ. ಮಲಪ್ರಭಾ ನದಿ ಪಾತ್ರದಲ್ಲಿ ಯುವಕನಿಗಾಗಿ ಹುಡುಕಾಟ ನಡೆಸಲಾಗಿದೆ.

ಮಲಪ್ರಭಾ ನದಿ ದಡದಲ್ಲಿ ಹೊಲವಿದ್ದು, ಹೊಲದಲ್ಲಿನ ಮೋಟಾರ್ ತರಲು ಹೋದ ವೇಳೆ ಯುವಕ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಬುಧವಾರ (ಸೆ.7) ಸಂಜೆ ಘಟನೆ ಸಂಭವಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರಿಂದ ಹುಡುಕಾಟ ನಡೆಸಲಾಗಿದೆ. ಆದರೂ ಯುವಕ ಇನ್ನೂ ಪತ್ತೆಯಾಗಿಲ್ಲ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ | Boat tragedy | ಗಂಗಾ ನದಿಯಲ್ಲಿ ದೋಣಿ ಮಗುಚಿ ದುರಂತ, 10 ಮಂದಿ ಕಾರ್ಮಿಕರು ನಾಪತ್ತೆ

Exit mobile version