ಬಾಗಲಕೋಟೆ: ಕಬ್ಬಿಗೆ ಯೋಗ್ಯ ದರ ಘೋಷಣೆ ಮಾಡಲು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಕಲ್ಲು ಬಿದ್ದು, ರಬಕವಿ ಬನಹಟ್ಟಿ ಪೊಲೀಸ್ ವೃತ್ತ ನಿರೀಕ್ಷಕ ಗಾಯಗೊಂಡಿದ್ದಾರೆ.
ರಬಕವಿ ಬನಹಟ್ಟಿ ಸಿಪಿಐ ಈರಯ್ಯ ಮಠಪತಿ ಗಾಯಾಳು. ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಮೀರವಾಡಿಯಲ್ಲಿ ಸಕ್ಕರೆ ಕಾರ್ಖಾನೆ ಎದುರು ಕಬ್ಬಿಗೆ ಯೋಗ್ಯ ದರ ಘೋಷಿಸಬೇಕು ಎಂದು ಆಗ್ರಹಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೆಲವರು ಕಲ್ಲು ತೂರಾಟ ಮಾಡಿದ್ದರಿಂದ ಭದ್ರತೆಗೆ ಬಂದಿದ್ದ ಎದೆಗೆ ಕಲ್ಲು ಬಿದ್ದು ಸಿಪಿಐ ಈರಯ್ಯ ಮಠಪತಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮಹಾಲಿಂಗಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದಕ್ಕೂ ಮುನ್ನ ಪ್ರತಿಭಟನೆ ವೇಳೆ ಕಾರ್ಖಾನೆ ಕಚೇರಿಗೆ ನುಗ್ಗಿದ್ದ ಕೆಲವರು ಕಿಟಕಿಗಳ ಗಾಜು ಧ್ವಂಸ ಮಾಡಿದ್ದಾರೆ. ನಂತರ ಕಚೇರಿಗೆ ಕಲ್ಲು, ಗಾಜಿನ ಬಾಟಲ್‌ಗಳ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ, ಟನ್ ಕಬ್ಬಿಗೆ 2900 ರೂಪಾಯಿ ಘೋಷಣೆ ಮಾಡಿದೆ.
ಇದನ್ನೂ ಓದಿ | ಸಿನಿಮಾ ಚಿತ್ರೀಕರಣ ವೇಳೆ ಹೆಜ್ಜೇನು ದಾಳಿ, ಇಬ್ಬರು ಲೈಟಿಂಗ್ ಸಹಾಯಕರ ಸ್ಥಿತಿ ಗಂಭೀರ