ಬಾಗಲಕೋಟೆ: ಡ್ರೋನ್ ಕ್ಯಾಮೆರಾದಲ್ಲಿ ಮತದಾನ ಜಾಗೃತಿ ಕಾರ್ಯ ಸೆರೆಯಾಗಿದೆ. ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಕ್ಷರ ಮಾಲೆಯ ರೂಪದಲ್ಲಿ ಮತದಾನದ ಘೋಷ ವಾಕ್ಯಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಜಿಲ್ಲಾ ಸ್ವೀಪ್ ಸಮಿತಿಯಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಂದಿಕೇಶ್ವರ ಗ್ರಾಮದ ಕೆರೆ ಅಭಿವೃದ್ದಿ ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಮತದಾನದ ಜಾಗೃತಿ ಮೂಡಿಸಲಾಯಿತು. ಪ್ರಜಾಪ್ರಭುತ್ವದ ಸುಭದ್ರತೆಗಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಕೂಲಿ ಕಾರ್ಮಿಕರಿಗೆ ಕರೆ ನೀಡಲಾಯಿತ್ತು. ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವ ಹಕ್ಕನ್ನು ಪಡೆದಿದ್ದು, ಯಾವುದೇ ಒತ್ತಡಕ್ಕೆ ಮಣಿಯದೇ ಮುಕ್ತವಾಗಿ, ನಿರ್ಭಯವಾಗಿ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ, ಒತ್ತಡಕ್ಕೆ ಮಣಿಯದೇ ವಿವೇಕಚಿತ್ತರಾಗಿ ತಮ್ಮ ಮತ ಚಲಾಯಿಸಲು ತಿಳಿಸಿದರು.
ಇದನ್ನೂ ಓದಿ: Lok Sabha Election 2024: ಲೋಕಸಭಾ ಚುನಾವಣೆ ಹಿನ್ನೆಲೆ; ಚೆಕ್‍ಪೋಸ್ಟ್‌ಗೆ ಕೊಡಗು ಡಿಸಿ ಸರ್ಪೈಸ್ ವಿಸಿಟ್
ಭವಿಷ್ಯ ಪ್ರಜೆಗಳಿಗೆ ಮತದಾನದ ಜಾಗೃತಿ
ಕೊಡಗು: ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗುವ ಮಕ್ಕಳಿಗೆ ಮತದಾನದ ಜಾಗೃತಿ (Voter awareness) ಮೂಡಿಸಲಾಯಿತು. ಚುನಾವಣಾಧಿಕಾರಿಗಳು ಶಿಕ್ಷಕರಾಗಿ ಮಕ್ಕಳಿಗೆ ಮತದಾನದ ಪಾಠವನ್ನು ಮಾಡಿದರು. ಮತದಾನ ಜಾಗೃತಿ ಅಭಿಯಾನ (Voter awareness) ಅಂಗವಾಗಿ ಭಾರತೀಯ ಚುನಾವಣಾ ಆಯೋಗ ಹಾಗೂ ಕೊಡಗು ಜಿಲ್ಲಾಡಳಿತ, ಮಡಿಕೇರಿ ನಗರಸಭೆಯ ವತಿಯಿಂದ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಕಾಲೇಜಿನಲ್ಲಿ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಸೃಜನಶೀಲ ಅಭಿವ್ಯಕ್ತಿಗೆ ರೂಪ ನೀಡಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲು ಮತ್ತು ಅಭಿಯಾನದ ಅಂಗವಾಗಿ ಪರಿಶೀಲನೆ ನಡೆಸಲಾಯಿತು. ಮುಖ್ಯ ಲೆಕ್ಕಾಧಿಕಾರಿಗಳಾದ ಜ಼ುವೆಲ್ ಖಾನ್ , ನಗರಸಭೆಯ ಕಮಿಷನರ್ ವಿಜಯ, ಎಇಇ ಸೌಮ್ಯ , ಕಂದಾಯ ಅಧಿಕಾರಿಗಳಾದ ತಾಹಿರ್ ಹಾಗೂ ಬೂತ್ ಮಟ್ಟದ ಅಧಿಕಾರಿಗಳು, ನಗರಸಭೆ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವತಿಯಿಂದ ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ ಅವರು, ಸಹ ಪ್ರಠ್ಯ ಚಟುವಟಿಕೆಯ ಸಂಯೋಜಕರಾದ ಡಾ. ರೇಣುಶ್ರೀ ಅವರು ಕಾಲೇಜಿನ ಅಧ್ಯಾಪಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ವೇಳೆ ಮತದಾನ ಪ್ರತಿಜ್ಞಾವಿಧಿಯನ್ನು ನಗರಸಭೆಯ ಕಮಿಷನರ್ ವಿಜಯ ಬೋಧಿಸಿದರು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಇದನ್ನೂ ಓದಿ: HD Kumaraswamy: ಡಿಕೆಶಿ ನೋಟು, ಡಾಕ್ಟರ್‌ಗೆ ವೋಟು; ಬಾವನ ಗೆಲ್ಲಿಸಲು ಎಚ್‌ಡಿಕೆ ಪ್ಲಾನ್!
ರಂಗೋಲಿ ಸ್ಪರ್ಧೆಯ ವಿಜೇತರು
ಶಿವ – ದ್ವಿತೀಯ ಎಂಕಾಂ ( ಪ್ರಥಮ)
ಯೋಗಿನಿ ದ್ವಿತೀಯ ಬಿಕಾಂ ( ದ್ವಿತೀಯ)
ಯಶೋಧ ದ್ವಿತೀಯ ಎಂ ಎ ( ತೃತೀಯ)
ಚಿತ್ರಕಲೆ ಸ್ಪರ್ಧೆ
ರೋಹಿತ್ ಪಿ ವಿ ದ್ವಿತೀಯ ಬಿಸಿಎ (ಪ್ರಥಮ)
ಭೀಮಾ ಪ್ರಥಮ ಬಿ ಎ ( ದ್ವಿತೀಯ)
ಮೋನಿಕಾ ದ್ವಿತೀಯ ಬಿಸಿಎ ( ತೃತೀಯ)
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ