Site icon Vistara News

Bagalkot News | ನಾಲ್ಕು ಕರುಗಳಿಗೆ ಏಕಕಾಲಕ್ಕೆ ಜನ್ಮ ನೀಡಿದ ನಾಲ್ಕು ವರ್ಷದ ಹಸು

cow

ಬಾಗಲಕೋಟೆ: ಇಲ್ಲಿನ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ (Bagalkot News) ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದೆ. ಆಸಂಗಿ ಗ್ರಾಮದ ರವೀಂದ್ರ ಬಾಳಪ್ಪ ಶಿರಹಟ್ಟಿ ಎಂಬುವವರಿಗೆ ಸೇರಿ ಆಕಳು ನಾಲ್ಕು ಕರುಗಳಿಗೆ ಜನ್ಮ ನೀಡಿರುವ ವಿಶೇಷ ಹಸು ಎನಿಸಿಕೊಂಡಿದೆ.

ಎರಡು ಹೆಣ್ಣು ಹಾಗೂ ಎರಡು ಗಂಡು ಕರುಗಳಿದ್ದು, ಹಸು ಸೇರಿದಂತೆ ಕರುಗಳು ಆರೋಗ್ಯದಿಂದ ಇವೆ ಎಂದು ಪಶುವೈದ್ಯರು ತಿಳಿಸಿದ್ದಾರೆ. ಇನ್ನು ನಾಲ್ಕು ಕರುಗಳಿಗೆ ಏಕಕಾಲಕ್ಕೆ ಜನ್ಮ ನೀಡಿದ ಹಸುವಿನ ವಯಸ್ಸು ನಾಲ್ಕು ವರ್ಷವಾಗಿದೆ.

ರವೀಂದ್ರ ಅವರ ಕುಟುಂಬದವರು ಹೈನುಗಾರಿಕೆ ಮಾಡಿಕೊಂಡು ಬರುತ್ತಿದ್ದು, ಇದೇ ಮೊದಲ ಬಾರಿಗೆ ಹಸುವೊಂದು ನಾಲ್ಕು ಕರುವಿಗೆ ಜನ್ಮ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Elephant attack | ಮುಂದುವರಿದ ಕಾಡಾನೆಗಳ ಉಪಟಳ; ಶೆಡ್‌ಗೆ ನುಗ್ಗಿ ಹಸುವಿನ ಮೇಲೆ ದಾಳಿ ಮಾಡಿದ ಗಜಪಡೆ

Exit mobile version