Site icon Vistara News

ಮೊಟ್ಟೆ ಎಸೆತ | ಬಿಜೆಪಿ ಕಾರ್ಯಕರ್ತರಿಗೆ ರಾತ್ರೋರಾತ್ರಿ ಜಾಮೀನು

siddu

ಮಡಿಕೇರಿ: ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣದಲ್ಲಿ ಬಂಧಿತರಾದ ಬಿಜೆಪಿ ಕಾರ್ಯಕರ್ತರಿಗೆ ಜಾಮೀನು ದೊರೆತಿದೆ.

ಕಾರಿಗೆ ಮೊಟ್ಟೆ ಎಸೆದ ಹತ್ತು ಬಿಜೆಪಿ‌ ಕಾರ್ಯಕರ್ತರನ್ನು ಗುರುವಾರವೇ ವಶಕ್ಕೆ ಪಡೆದಿದ್ದ ಪೊಲೀಸರು ರಾತ್ರಿಯೇ ಹತ್ತೂ ಮಂದಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಸುದ್ದಿ ತಿಳಿದು ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರು ಠಾಣೆಗೆ ದೌಡಾಯಿಸಿದ್ದರು. ಶಾಸಕ ರಂಜನ್‌ ಅವರು ಕಾರ್ಯಕರ್ತರಿಗೆ ಜಾಮೀನು ನೀಡಿ ಬಿಡುಗಡೆ ಮಾಡಿಸಿದ್ದರು. ಕಾರ್ಯಕರ್ತರ ಬಂಧನ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಕಳೆದ ರಾತ್ರಿ ಕುಶಾಲನಗರ ಠಾಣೆ ಎದುರು ಜಮಾಯಿಸಿದ್ದರು.

Exit mobile version