Site icon Vistara News

Bengaluru Metro : ಬೈಯಪ್ಪನಹಳ್ಳಿ-ಕೆಆರ್‌ಪುರ ಮೆಟ್ರೋ ಓಡಾಟಕ್ಕೆ ಸೆಪ್ಟೆಂಬರ್‌ನಲ್ಲಿ ಚಾಲನೆ

kr puram to baiyappanahalli metro station

ಬೆಂಗಳೂರು: ಬೈಯಪ್ಪನಹಳ್ಳಿ – ಕೆಆರ್‌ಪುರ ಮಾರ್ಗದ (Baiyappanahalli – KR Puram metro line) ಮೆಟ್ರೋ ಕನೆಕ್ಟಿವಿಟಿ (Bengaluru Metro) ಯಾವಾಗಪ್ಪ ಪೂರ್ಣಗೊಳ್ಳುತ್ತದೆ ಎಂದುಕೊಂಡಿದ್ದ ಜನರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿಯೊಂದನ್ನು (Good News) ನೀಡಿದ್ದಾರೆ. ನೇರಳೆ ಮಾರ್ಗದ ಬೈಯಪ್ಪನಹಳ್ಳಿ – ಕೆಆರ್‌ಪುರ 2 ಕಿ.ಮೀ ಮೆಟ್ರೋ ಮಾರ್ಗವು ಸೆಪ್ಟೆಂಬರ್ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಟ್ರ್ಯಾಕ್ ಜೋಡಣೆ, ವೇಗ ಮತ್ತು ಸಿವಿಲ್ ಇಂಟರ್ಫೇಸ್ ಮತ್ತು ಇತರ ತಾಂತ್ರಿಕ ಸವಾಲುಗಳನ್ನು ಪರಿಶೀಲಿಸಲು ಪ್ರಾಯೋಗಿಕ ಪ್ರಾಯೋಗಿಕ ಸಂಚಾರವು ಕಳೆದ ಜು. 22ರಂದು ನಡೆದಿದೆ. ಪ್ರಾಯೋಗಿಕ ಸಂಚಾರದಲ್ಲಿ ಸಮಸ್ಯೆಗಳೇನಾದರೂ ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಿ ಬಳಿಕ ಕಮೀಷನರ್ ಫಾರ್ ಮೆಟ್ರೋ ರೈಲ್ ಸೇಫ್ಟಿಗೆ ಮುಂದಿನ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಮೊದಲು ಆಗಸ್ಟ್ 15ರೊಳಗೆ ಲೋಕಾರ್ಪಣೆ ಮಾಡಲಾಗುತ್ತದೆ ಎನ್ನಲಾಗಿತ್ತು. ಇದೀಗ ಮೆಟ್ರೋ ಮಾರ್ಗವು ವಿಳಂಬವಾಗಿದ್ದು ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.

ಇದನ್ನೂ ಓದಿ: Road Accident : ಧ್ವಜಾರೋಹಣಕ್ಕೆ ತೆರಳುತ್ತಿದ್ದ ಶಿಕ್ಷಕ ರಸ್ತೆ ಅಪಘಾತದಲ್ಲಿ ಸಾವು

ಬೆಂಗಳೂರು ಮೆಟ್ರೋ ಪ್ರಸ್ತುತ 69.66 ಕಿ.ಮೀ. ಕಾರ್ಯಾಚರಣೆ ನಡೆಸುತ್ತಿದ್ದು, ಪ್ರತಿದಿನ 6.1 ಲಕ್ಷ ಪ್ರಯಾಣಿಕರು ಮೆಟ್ರೋ ರೈಲು ಸೇವೆಯನ್ನು ಪಡೆಯುತ್ತಿದ್ದಾರೆ. 2023ರ ಸೆಪ್ಟೆಂಬರ್‌ನಲ್ಲಿ ಬೈಯಪ್ಪನಹಳ್ಳಿ-ಕೃಷ್ಣರಾಜಪುರ ಮಾರ್ಗ ಸೇರಿ ಕೆಂಗೇರಿ-ಚಲ್ಲಘಟ್ಟ ಮಾರ್ಗ ವಿಸ್ತರಣೆ ಆಗಲಿದೆ. ಡಿಸೆಂಬರ್ ವೇಳೆಗೆ ನಾಗಸಂದ್ರ-ಮಾದಾವರ ಮಾರ್ಗವು ವಿಸ್ತರಣೆಗೊಳ್ಳಲಿದೆ.

ಡಿಸೆಂಬರ್‌ ಅಂತ್ಯಕ್ಕೆ ಆರ್‌ವಿ ರಸ್ತೆ-ಬೊಮ್ಮನಹಳ್ಳಿ ನೂತನ ಮಾರ್ಗ

ಡಿಸೆಂಬರ್‌ ವೇಳೆಗೆ ಆರ್.ವಿ. ರಸ್ತೆ-ಬೊಮ್ಮನಹಳ್ಳಿ ಹೊಸಮಾರ್ಗ ಕಾರ್ಯಾಚರಣೆ ಪ್ರಾರಂಭಿಸಲಾಗುತ್ತದೆ. 2026ರ ವೇಳೆಗೆ ಬೆಂಗಳೂರಿನಲ್ಲಿ 175.55 ಕಿ.ಮೀ. ಮೆಟ್ರೋ ಜಾಲ ಕಾರ್ಯಾಚರಣೆ ನಡೆಸಲಿದೆ. ಈಗ ಬೆಂಗಳೂರಿನ ಮೆಟ್ರೋ ಜಾಲವು ದೇಶದಲ್ಲಿ ಎರಡನೆ ಸ್ಥಾನದಲ್ಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version