ಬೆಂಗಳೂರು: ನೇರಳೆ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ನಿಂದ ಗುಡ್‌ನ್ಯೂಸ್ ಸಿಕ್ಕಿದೆ. ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ನಿಲ್ದಾಣ (Namma Metro) ನಡುವೆ ಬಾಕಿ ಉಳಿದಿರುವ 2 ಕಿ.ಮೀ ಮಾರ್ಗದ ಕಾಮಗಾರಿ ಪೂರ್ಣಗೊಂಡಿರುವುದರಿಂದ ಅ.2ರಂದು ಗಾಂಧಿ ಜಯಂತಿ ದಿನ ಮೆಟ್ರೋ ರೈಲು ವಾಣಿಜ್ಯ ಸೇವೆಗೆ ಚಾಲನೆ ಸಿಗುವ ನಿರೀಕ್ಷೆ ಇದೆ.
ಹೌದು, ಬೈಯಪ್ಪನಹಳ್ಳಿ- ಕೆ.ಆರ್.ಪುರ ಮೆಟ್ರೋ ಮಾರ್ಗದ ಉದ್ಘಾಟನೆಗೆ ಮೂಹೂರ್ತ ಕೂಡಿಬಂದಿದೆ. ಸೆ. 21ಕ್ಕೆ ದೆಹಲಿಯ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಿದ್ದರು. ವಾಣಿಜ್ಯ ಸೇವೆ ಆರಂಭಿಸಲು ಅವರು ಹಸಿರು ನಿಶಾನೆ ನೀಡಿರುವುದರಿಂದ ಕೆಂಗೇರಿಯಿಂದ ತಡೆರಹಿತವಾಗಿ ವೈಟ್‌ಫೀಲ್ಡ್‌ವರೆಗೆ ಸಂಚಾರಕ್ಕೆ ಅನುಕೂಲವಾಗಲಿದೆ.
ಇದನ್ನೂ ಓದಿ | Single Document: ನಾಳೆಯಿಂದ ಒಂದು ದೇಶ, ಒಂದೇ ದಾಖಲೆ! ಆಧಾರ್‌ನಿಂದ ಡಿಎಲ್‌ವರೆಗೆ ಎಲ್ಲಾ ಮಾಡಿಸಲು ಅ.1ರಿಂದ ಇದೊಂದೇ ಸಾಕು!
ಕೆಂಗೇರಿಯಿಂದ ಹಾಗೂ ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಿಂದ ಸಾವಿರಾರು ಟೆಕ್ಕಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದರಿಂದ ಐಟಿ ಉದ್ಯೋಗಿಗಳಿಗೆ ಕಷ್ಟಪಡುತ್ತಿದ್ದರು. ಬೆಳಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಈ ಮಾರ್ಗದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುತ್ತಾರೆ. ಈ ಮಾರ್ಗದ ಮೆಟ್ರೋ ಆರಂಭವಾದರೆ ಹೆಚ್ಚಿನ ಮಂದಿ ಮೆಟ್ರೋ ಅವಲಂಭಿಸಲಿದ್ದು, ಟ್ರಾಫಿಕ್ ದಟ್ಟಣೆ ಕೂಡ ಕಡಿಮೆಯಾಗಲಿದೆ. ಇದರಿಂದ ಐಟಿ ಉದ್ಯೋಗಿಗಳಿಗೆ ತುಸು ನೆಮ್ಮದಿ ಸಿಕ್ಕಂತಾಗಲಿದೆ.
ಕೆಂಗೇರಿಯಿಂದ ವೈಟ್ ಫೀಲ್ಡ್ ಕಡೆಗೆ ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿ.ಮೀ. ಬಸ್‌ನಲ್ಲಿ ಸಾಗುತ್ತಿದ್ದ ಪ್ರಯಾಣಿಕರು. ಮತ್ತೆ ಕೆ.ಆರ್.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಸಾಗಬೇಕಿತ್ತು, ಇದರಿಂದ ಮೆಟ್ರೊ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಆಗುತ್ತಿತ್ತು.
ಇದನ್ನೂ ಓದಿ | Money Guide: ಇದು ಖುಷಿಯ ಸುದ್ದಿ… ಐದು ವರ್ಷದ ಆರ್‌ಡಿ ಖಾತೆ ಬಡ್ಡಿ ದರ ಶೇ.6.7ಕ್ಕೆ ಹೆಚ್ಚಳ!
ಮಾರ್ಚ್ 25ರಂದು ಕೆ.ಆರ್.ಪುರ- ವೈಟ್ ಫೀಲ್ಡ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಆದರೆ, ವೈಟ್ ಫೀಲ್ಡ್ – ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಕೆ.ಆರ್. ಪುರದಲ್ಲಿ ಇಳಿದು ಇತರೆ ಸಾರಿಗೆಯನ್ನು ಅವಲಂಬಿಸಬೇಕಿತ್ತು. ಈಗ ಗಾಂಧಿ ಜಯಂತಿಯಂದು ಈ ಹೊಸ ಮಾರ್ಗ ಉದ್ಘಾಟನೆಗೆ ಬಿಎಂಆರ್‌ಸಿಎಲ್ ತಯಾರಿ ನಡೆಸುತ್ತಿದೆ.