Site icon Vistara News

Ballari News: ಇ ಅಂಡ್‌ ಇ ಎಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಪಡೆದ ಬಳ್ಳಾರಿಯ ಬಿಐಟಿಎಂ ವಿದ್ಯಾರ್ಥಿ ಸಂಪತ್ ಕುಮಾರ್

Ballari BITM student Sampath Kumar who got first rank in EE Engineering

ಬಳ್ಳಾರಿ: ನಗರದ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ (BITM) ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (Electrical and Electronics Engineering) ವಿಭಾಗದ ವಿದ್ಯಾರ್ಥಿ ಸಂಪತ್ ಕುಮಾರ್ ಪ್ರಥಮ ರ‍್ಯಾಂಕ್ (First rank) ಪಡೆಯುವ ಮೂಲಕ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

2022-23 ಶೈಕ್ಷಣಿಕ ವರ್ಷದ ಎಂಜಿನಿಯರಿಂದ ಫಲಿತಾಂಶದಲ್ಲಿ ಬಿಐಟಿಎಂ ಕಾಲೇಜಿಗೆ ಎರಡು ರ್ಯಾಂಕ್‌ಗಳು ಲಭಿಸಿದ್ದು, 2022-23 ಶೈಕ್ಷಣಿಕ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಪತ್ ಕುಮಾರ್ ಪ್ರಥಮ ರ‍್ಯಾಂಕ್ ಪಡೆದಿದ್ದಾನೆ, ಇನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ‌ದಲ್ಲಿ ವಿದ್ಯಾರ್ಥಿ ಕರಣಂ ಭಾರ್ಗವ್ 5ನೇ ರ‍್ಯಾಂಕ್ ಪಡೆದಿದ್ದಾನೆ.

ಇದನ್ನೂ ಓದಿ: Vijayanagara News: ಗುಡೇಕೋಟೆಯಲ್ಲಿ ಎರಡೇ ಕಾಲುಗಳಿರುವ ಕರುವಿನ ಜನನ

ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಯಶವಂತ್ ಭೂಪಾಲ್, ಉಪನಿರ್ದೇಶಕ ವೈ.ಜೆ. ಪೃಥ್ವಿರಾಜ್, ಪ್ರಾಚಾರ್ಯ ಡಾ. ಯಡವಳ್ಳಿ ಬಸವರಾಜ್, ವಿಭಾಗ ಮುಖ್ಯಸ್ಥರು, ಡೀನ್‌ಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Exit mobile version