ಹರಪನಹಳ್ಳಿ: ಶಿಕ್ಷಕರು (Teachers) ಮಕ್ಕಳಿಗೆ ಗುಣಮಟ್ಟದ ಶಿಕ್ಷಣ (Education) ನೀಡಿ, ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ (Good citizen) ರೂಪಿಸಬೇಕು ಎಂದು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ತಿಳಿಸಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶನಿವಾರದ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿ, ಬಳಿಕ ಅವರು ಮಾತನಾಡಿದರು.
ನಾನು ಇದೇ ಶಾಲೆಯಲ್ಲಿ ಓದಿದ್ದೇನೆ, ಈಗ ಈ ಶಾಲೆಗೆ 100 ವರ್ಷ ತುಂಬಿದೆ, ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Koppala News: ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಯುವ ಉತ್ಸವಕ್ಕೆ ಚಾಲನೆ
ಸಂಸದರ ಅನುದಾನದಲ್ಲಿ 5 ನೇ ತರಗತಿಯಿಂದ 10 ನೇ ತರಗತಿ ಮಕ್ಕಳಿಗೆ ಹಾಸ್ಟೆಲ್ ಮುಂಜೂರು ಮಾಡಲಾಗಿದೆ, ಈ ಶಾಲೆಗೆ ನಾಲ್ಕು ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, ಹೊಸದಾಗಿ ಶೌಚಾಲಯ, ಅಡುಗೆ ಕೋಣೆ ಮುಂಜೂರಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Aditya L1 Mission: ಸೂರ್ಯನೆಡೆ ನಮ್ಮ ನಡೆ; ನಾಳೆ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ; ಇಲ್ಲಿ ವೀಕ್ಷಿಸಿ!
ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಡಿ. ಹನುಮಂತಪ್ಪ, ಉಪಾಧ್ಯಕ್ಷೆ ಅನಿತಾ, ಸದಸ್ಯ ವೈ.ರಂಗಪ್ಪ, ಮುಖಂಡರಾದ ಅಬ್ದುಲ್ ಸಾಹೇಬ್, ಶಾಲಾ ಪ್ರಭಾರಿ ಮುಖ್ಯ ಗುರು ಹಾಲಪ್ಪ, ಸಹ ಶಿಕ್ಷಕರಾದ ಬಂದಮ್ಮ, ಮಾಲತೇಶ್ ಪಾಟೀಲ್, ಕೆಂಪಪ್ಪ, ರೇಣುಕಾ, ಚೇತನ, ಗಿರಿಜಾ, ತಾಸೀನಾ ಬೇಗಂ ಹಾಗೂ ಸೌಜನ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.