ಕುರುಗೋಡು: ಆಕಸ್ಮಿಕವಾಗಿ ಬೆಂಕಿ ತಗುಲಿ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಭಾಗಶಃ ಸುಟ್ಟು ಕರಕಲಾದ ಘಟನೆ (Accidental fire) ತಾಲೂಕಿನ ಮುಷ್ಟಗಟ್ಟೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸಣ್ಣ ನಾಗಪ್ಪ ಎನ್ನುವ ರೈತನಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ಬೆಳೆದಿದ್ದ, ಬೆಳೆ ಇನ್ನೇನು ಕಟಾವು ಮಾಡಿ ಮಾರಾಟಕ್ಕೆ ಸಿದ್ಧವಾಗಿತ್ತು. ಆದರೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದೆ.
ಇದನ್ನೂ ಓದಿ: K Sudhakar: ರಂಜಾನ್ ಹಿನ್ನೆಲೆ ಈದ್ಗಾ ಮೈದಾನಕ್ಕೆ ತೆರಳಿದ ಸಚಿವ ಸುಧಾಕರ್‌ಗೆ ವಿರೋಧ? ಗಲಾಟೆ ನಡೆದಿದ್ದು ಏಕೆ?
ಘಟನೆ ವಿವರ
ಮುಷ್ಟಗಟ್ಟೆ ಗ್ರಾಮದ ಸಣ್ಣ ನಾಗಪ್ಪ ಎಂಬ ರೈತ ಇರುವ ತಮ್ಮ ಮೂರು ಎಕರೆ ಭೂಮಿಯಲ್ಲಿ ಅರ್ಧ ಎಕರೆ ಬೇರೆ ಬೆಳೆ ಬೆಳೆದು ಇನ್ನುಳಿದ ಜಮೀನಿನಲ್ಲಿ ಬೋರ್‌ವೆಲ್ ನೀರಿನ ಮೂಲಕ ನೀರು ಹಾಯಿಸಿ ಮೆಕ್ಕೆಜೋಳ ಬೆಳೆ ಬೆಳೆದಿದ್ದರು. ಶುಕ್ರವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿದೆ ಎನ್ನಲಾಗಿದೆ. ಈ ವೇಳೆ ಬೆಂಕಿ ನಂದಿಸಲು ರಾತ್ರಿಯಾದ್ದರಿಂದ ಯಾರು ಜಮೀನಿನಲ್ಲಿ ಇರಲಿಲ್ಲ. ಹೀಗಾಗಿ ಬೆಂಕಿ ತನ್ನ ಕೆನ್ನಾಲಿಗೆಯಿಂದ ಭಾಗಶಃ ಬೆಳೆಯನ್ನು ಆಹುತಿ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.