ಬಳ್ಳಾರಿ: ಯೋಗ (Yoga) ಯಾವುದೇ ಧರ್ಮಕ್ಕೆ (Religion) ಸೀಮಿತವಾಗಿಲ್ಲ, ಜಾತ್ಯತೀತವಾದ (Secularism) ಜೀವನಕ್ರಮವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ನಗರದ ನೆಹರು ಕಾಲೊನಿಯಲ್ಲಿನ ಸಾಧನಾ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸಾ ಕೇಂದ್ರದಲ್ಲಿ ವಿಸ್ತಾರ ನ್ಯೂಸ್ ಸಹಯೋಗದೊಂದಿಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: 2nd PUC Supplementary Result 2023 : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ
ಯೋಗ ಬಗ್ಗೆ ವಿಶ್ವದಲ್ಲಿನ ಹಲವು ದೇಶಗಳು ಒಲವು ತೋರುತ್ತಿರುವುದು ಭಾರತೀಯರಿಗೆ ಹೆಮ್ಮೆ ಪಡುವ ವಿಷಯವಾಗಿದೆ. ಯೋಗದಲ್ಲಿನ ಎಂಟು ಆಸನಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ನಮ್ಮ ಸಂಸ್ಕೃತಿಯನ್ನು ವಿದೇಶದಲ್ಲಿ ಅನುಸರಿಸುತ್ತಿದ್ದಾರೆ. ಎಲ್ಲರು ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರು ಯೋಗ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಹಾಗೂ ಇಂತಹ ವಿನೂತನ ಕಾರ್ಯಕ್ರಮಗಳನ್ನು ವಿಸ್ತಾರ ನ್ಯೂಸ್ ಸಹಯೋಗದೊಂದಿಗೆ ಮಾಡುವದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಾಧನ ಯೋಗಾ ಮತ್ತು ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ನಿರ್ದೇಶಕಿ ರೂಪಾ ಮುರಳೀಧರ ಮಾತನಾಡಿ, ಇಂದಿನ ಒತ್ತಡದ ಜೀವನಕ್ಕೆ ಯೋಗ ಅತ್ಯಗತ್ಯವಾಗಿದೆ. ಯೋಗ ಜೀವನ ಶೈಲಿಯಾದರೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಇದನ್ನೂ ಓದಿ: ಹಲೋ ಸಚಿವರೇ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆ ವಿಸ್ತಾರ ಫೋನ್ ಇನ್ ಇಂದು; ಕರೆ ಮಾಡಿ ಪ್ರಶ್ನೆ ಕೇಳಿ
80ಕ್ಕೂ ಅಧಿಕ ಜನರು ಯೋಗಭ್ಯಾಸ ಮಾಡಿದರು. ಈ ಸಂದರ್ಭದಲ್ಲಿ ಯೋಗ ಕೇಂದ್ರದ ಶಿಕ್ಷಕ ಶ್ರೀಧರ, ವಿಸ್ತಾರ ನ್ಯೂಸ್ ಬ್ಯೂರೋ ಹೆಡ್ ಶಶಿಧರ ಮೇಟಿ ಹಾಗೂ ಇತರರಿದ್ದರು.