ಬಳ್ಳಾರಿ: ನಾವು ಭಕ್ತರಿಂದ ಬಂಗಾರ (Gold) ಮತ್ತು ಬೆಳ್ಳಿ (Silver), ಹಣ (Money) ಅಪೇಕ್ಷೆ ಮಾಡುವುದಿಲ್ಲ, ಅಂಧ ಮಕ್ಕಳು (Blind Children) , ಕಾಲಿಲ್ಲದ ಮಕ್ಕಳನ್ನು ನಮ್ಮ ವೀರೇಶ್ವರ ಪುಣ್ಯಾಶ್ರಮಕ್ಕೆ ನೀಡಿದರೆ, ಅದುವೆ ನಮಗೆ ಭಕ್ತರ ದೊಡ್ಡ ಕಾಣಿಕೆ ಆಗಲಿದೆ ಎಂದು ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ. ಶ್ರೀ ಪಂಡಿತ ಕಲ್ಲಯ್ಯಜ್ಜನವರು ತಿಳಿಸಿದರು.
ನಗರದ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ ಶ್ರೀ ಕುಮಾರೇಶ್ವರ ಸಂಗೀತ ಹಾಗೂ ಸಾಂಸ್ಕೃತಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗಾನಯೋಗಿ ಶಿವಯೋಗಿ ಪದ್ಮಭೂಷಣ ಡಾ॥ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ 13ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ಡಾ. ಪಂ. ಕಲ್ಲಯ್ಯಜ್ಜನವರ ತುಲಾಭಾರ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವು ಅಂಧರ ಬದುಕಿಗೆ ವೀರೇಶ್ಚರ ಪುಣ್ಯಶ್ರಮ ನೆಲೆ ನೀಡಿದೆ ಎಂದು ಹೇಳಿದರು.
ಬಳ್ಳಾರಿ ಕಲ್ಯಾಣಸ್ವಾಮಿ ಮಠದ ಕಲ್ಯಾಣಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ಇಂದಿನ ಒತ್ತಡದ ಬದುಕಿಗೆ ಸಂಗೀತ ಮತ್ತು ಅಧ್ಯಾತ್ಮ ಅಗತ್ಯವಾಗಿದೆ. ಅಧ್ಯಾತ್ಮಿಕತೆ ಜೀವನಕ್ಕೆ ಶಾಂತಿ ನೀಡಿದರೆ, ಸಂಗೀತ ಮನಸ್ದಿಗೆ ಮುದ ನೀಡುತ್ತದೆ. ಸಂಗೀತದ ಮೂಲವನ್ನು ಸಾಮವೇದದಲ್ಲಿ ಕಾಣುತ್ತೇವೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಬೇಕಾಗಿದೆ. ಸಂಗೀತ ನಮ್ಮ ಜೀವನದ ಭಾಗವಾಗಿದೆ ಎಂದರು.
ಇದನ್ನೂ ಓದಿ: Double- Decker Bus: ಬೆಂಗಳೂರಿನಲ್ಲಿ ಈ ವರ್ಷದ ಅಂತ್ಯದಲ್ಲಿ ಓಡಾಡಲಿವೆ ಡಬಲ್ ಡೆಕ್ಕರ್ ಬಸ್ಸುಗಳು!
ಕಾರ್ಯಕ್ರಮದಲ್ಲಿ ರಾಜೂರಿನ ಅಭಿನವ ಪಂಚಾಕ್ಷರಿ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿದರು.
ಕಲ್ಲಯ್ಯಜ್ಜನವರಿಗೆ ಸಿದ್ದಲಿಂಗಮೂರ್ತಿ, ಶಿವಚಿತ್ತಯ್ಯ ವಸ್ತ್ರದ್, ಹಾವಿನಾಳ ಶರಣಪ್ಪ, ಎಳಂಜಿ ಮಲ್ಲಿಕಾರ್ಜುನ, ಮಾರುತಿ ಸಂಗನಕಲ್ಲು ಅವರು ತುಲಾಭಾರ ಮಾಡಿದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು. ಸಂಗೀತ ಶಾಲೆಯ ಮಕ್ಕಳಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಪುಟ್ಟರಾಜ ಹಿರೇಮಠ್ ಅವರಿಂದ ಸುಗಮ ಸಂಗೀತ, ಸುರಯ್ ಬೇಗಂ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ನಾಡಿನ ಹೆಸರಾಂತ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: Drought in Karnataka : ಕರ್ನಾಟಕಕ್ಕೆ ʼಬರʼ ಸಿಡಿಲು; ಬರ್ಬರ ಕ್ಷಾಮಕ್ಕೆ ತುತ್ತಾಯ್ತು 223 ತಾಲೂಕು!
ಈ ಸಂದರ್ಭದಲ್ಲಿ ರಾಜ್ಯ ಸಂಗೀತ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಹಂತಯ್ಯ ಕೋಟ್ನೂರು, ನಿರ್ದೇಶಕ ಮಲ್ಲಿಕಾರ್ಜುನ ಹೊಸಪೇಟೆ, ಬಿಇಓ ಸಿದ್ದಲಿಂಗಮೂರ್ತಿ, ಗುರ್ರಪ್ಪ ಎಚ್., ಕುಮಾರೇಶ್ವರ ಟ್ರಸ್ಟ್ ಅಧ್ಯಕ್ಷೆ ವೀರಮ್ಮ, ಉಪಾಧ್ಯಕ್ಷ ಸಿದ್ದರಾಮಯ್ಯ ಹಿರೇಮಠ, ಕಾರ್ಯದರ್ಶಿ ಶರಣಯ್ಯ ಕಲ್ಲೂರು, ಸಂಗೀತ ಶಿಕ್ಷಕ ದೊಡ್ಡಯ್ಯ ಗವಾಯಿಗಳು, ಪತ್ರಕರ್ತ ಶಶಿಧರ್ ಮೇಟಿ ಸೇರಿದಂತೆ ಇತರರು ಇದ್ದರು. ಶಿವಪ್ರಕಾಶ್ ವಸ್ತ್ರದ್, ಡಾ. ಸುರೇಶ್, ಸಣ್ಣ ದುರ್ಗಪ್ಪ ಅವರು ಕಾರ್ಯಕ್ರಮ ನಿರ್ವಹಿಸಿದರು.