ಬಳ್ಳಾರಿ: ವೈದ್ಯರಿಗೆ ಮಾದರಿಯಾದ, ಹಲವರಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ (Free eye surgery) ಮೂಲಕ ಕಣ್ಣಿನ ಡಾಕ್ಟರ್ (Eye physician) ಎಂದು ಖ್ಯಾತಿಯಾದ ಮೇಲುಮಾಳಿಗೆ ಕೊಂಡ್ಲಹಳ್ಳಿ ಡಾ.ನಾಗರಾಜ್ ಅವರು ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಪುತ್ರರಾದ ನೇತ್ರ ವೈದ್ಯ ಡಾ.ವಿಜಯ, ಎಂಜಿನೀಯರ್ ವಿನಯ್ ಸೇರಿದಂತೆ ಅಪಾರ ಬಂಧು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ವಿಮ್ಸ್‌ನಲ್ಲಿ 1994 ರಿಂದ 2005 ರವರೆಗೆ ಪ್ರಾಧ್ಯಾಪಕರು ಮತ್ತು ವೈದ್ಯರಾಗಿ ಕೆಲಸ ನಿರ್ವಹಿಸಿದ್ದರು. ವಿಮ್ಸ್‌ನಲ್ಲಿ ಇವರು ಬಂದ ನಂತರವೇ ಮಸೂರ ಅಳವಡಿಕೆ ಶುರು ಮಾಡಿದ್ದು ಇವರ ಹೆಗ್ಗಳಿಕೆ. ವಿಮ್ಸ್ ನಲ್ಲಿ ಇವರ ಅವಧಿಯಲ್ಲಿಯೇ ಅತ್ಯಂತ ಹೆಚ್ಚಿನ ಶಸ್ತ್ರಚಿಕಿತ್ಸೆ ನಡೆದಿವೆ ಎಂಬುದು ಇವರ ಕರ್ತವ್ಯ ನಿಷ್ಟತೆಗೆ ಹಿಡಿದ ಕೈಗನ್ನಡಿಯಾಗಿದೆ.
ಇದನ್ನೂ ಓದಿ: Hero Xtreme : ಹೆಚ್ಚು ತೂಕ, ಹೊಸ ಲುಕ್! ಇನ್ನೇನಿವೆ ಹೊಸ ಹೀರೊ ಎಕ್ಸ್ಟ್ರೀಮ್ 160 ಆರ್4 ವಿ ಬೈಕ್ನಲ್ಲಿ?
ನೇತ್ರ ವೈದ್ಯ ವೃತ್ತಿಯನ್ನೆ ಉಸಿರಾಗಿಸಿಕೊಂಡಿದ್ದ ಡಾ.ನಾಗರಾಜ್, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಅಪಾರ ಉಚಿತ ಶಸ್ತ್ರಚಿಕಿತ್ಸೆ ಮಾಡಿರುವುದು ಇವರ ಸಾಮಾಜಿಕ ಕಳಕಳಿಯನ್ನು ಎತ್ತಿತೋರಿಸುತ್ತಿದೆ. ಕೊಂಡ್ಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಿರಂತರವಾಗಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಚಿರಪರಿಚಿತರಾಗಿದ್ದರು.
ಇದನ್ನೂ ಓದಿ: Theft Case: ಪ್ರಯಾಣಿಕರ ಹಣ ಕದ್ದ ಕಳ್ಳನ ಬೆನ್ನಟ್ಟಿದ ಕೆಎಸ್‌ಆರ್‌ಟಿಸಿ ಡ್ರೈವರ್-ಕಂಡಕ್ಟರ್
ಮೃತರ ಅಂತ್ಯಕ್ರಿಯೆ ಜೂ.16ರಂದು ಮಧ್ಯಾಹ್ನ 1 ಗಂಟೆಗೆ ಸ್ವ ಗ್ರಾಮ ಕೊಂಡ್ಲಹಳ್ಳಿಯಲ್ಲಿ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.