ಬಳ್ಳಾರಿ: ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು (Kuvempu) ಮತ್ತು ಸಿ. ಅಶ್ವತ್ಥ್ (C. Ashwath) ಅವರು ಅದ್ವಿತೀಯ ಸಾಧನೆ ಮಾಡಿದ ಮಹನೀಯರು ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ತಿಳಿಸಿದರು.
ನಗರದ ಬ್ಯಾಂಕ್ ಕಾಲೋನಿಯಲ್ಲಿ ವಿಸ್ತಾರ ನ್ಯೂಸ್ ಮತ್ತು ಕನ್ನಡ ಪ್ರಭ ಸಹಯೋಗದಲ್ಲಿ ಮಹಾದಾಸೋಹಿ ವೈ. ಮಹಾಬಲೇಶ್ವರಪ್ಪ ವೇದಿಕೆಯಲ್ಲಿ ಶ್ರೀ ವಾಮದೇವ ಶಿವಾಚಾರ್ಯ ಕಲಾ ಟ್ರಸ್ಟ್ ಹಾಗೂ ಶ್ರೀ ಮಂಜುನಾಥ ಲಲಿತ ಕಲಾ ಬಳಗ ಸಹಯೋಗದೊಂದಿಗೆ ರಾಷ್ಟ್ರಕವಿ ಕುವೆಂಪು ಹಾಗೂ ಸಿ. ಅಶ್ವತ್ಥ್ ಅವರ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಗಾನ ಮಂಜುಳ (ಸುಮಧುರ ಕಾವ್ಯಗೀತ ಗಾಯನ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುವೆಂಪು ಅವರ ಮೇರು ಸಾಹಿತ್ಯ ಇಡೀ ದೇಶಕ್ಕೆ ಅನುಕರಣೀಯ ಎಂದ ಅವರು, ಕುವೆಂಪು ಅವರು ರಚಿಸಿದ ನಾಡಗೀತೆಯಲ್ಲಿ ಅವರ ನಾಡಪ್ರೇಮ, ದೇಶಭಕ್ತಿ, ಸೌಹಾರ್ದತೆಯ ಮಹತ್ವ, ಕನ್ನಡ ನೆಲದ ಸಾಂಸ್ಕೃತಿಕ ಹಾಗೂ ಸಾಹಿತ್ಯ ಹಿರಿಮೆ ಕಾಣಬಹುದು ಎಂದು ತಿಳಿಸಿದರು.
ಇದನ್ನೂ ಓದಿ: New Trains : ರಾಜ್ಯದ ಮೂರು ಹೊಸ ರೈಲುಗಳಿಗೆ ಮೋದಿ ಚಾಲನೆ; ಎಲ್ಲಿಂದ ಎಲ್ಲಿಗೆ ಓಡುತ್ತೆ?
ಸಮಾರಂಭದಲ್ಲಿ ಎಮ್ಮಿಗನೂರಿನ ಶ್ರೀ ವಾಮದೇವ ಮಹಾಂತ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹರಗಿನಡೋಣಿ ಪಂಚವಣಿಗಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ, ಮಾತನಾಡಿದರು.
ಉದ್ಯಮಿ ಮಸೀದಿಪುರ ಸಿದ್ದರಾಮನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ವಕೀಲ ಹಾಗೂ ವೀವಿ ಸಂಘದ ಮಾಜಿ ಅಧ್ಯಕ್ಷ ಉಡೇದ ಬಸವರಾಜ್, ವಕೀಲ ಕೆ.ಜಿತೇಂದ್ರ, ವಿಸ್ತಾರ ನ್ಯೂಸ್‌ನ ಕಲ್ಯಾಣ ಕರ್ನಾಟಕ ಬ್ಯೂರೋ ಮುಖ್ಯಸ್ಥ ಶಶಿಧರ ಮೇಟಿ, ವಕೀಲ ಕಾಂಡ್ರಾ ಸತೀಶ್ ಕುಮಾರ್, ವೀವಿ ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ, ಹಿರಿಯ ವೈದ್ಯ ಡಾ.ಅರವಿಂದ ಪಾಟೀಲ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇದೇ ವೇಳೆ ಹಿರಿಯ ಪತ್ರಕರ್ತ ಸಿ.ಜಿ.ಹಂಪಣ್ಣನವರಿಗೆ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ವಾಮದೇವ ಶಿವಾಚಾರ್ಯ ಕಲಾ ಟ್ರಸ್ಟ್ ಅಧ್ಯಕ್ಷ ಸಿದ್ದರಾಮೇಶ್ವರ ಗೌಡ ಕರೂರು, ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜಿನ ವಿದ್ಯಾರ್ಥಿಗಳಾದ ಶಿಲ್ಪಾ ಹಾಗೂ ಶ್ರವಣ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಇದನ್ನೂ ಓದಿ: Bigg Boss 17: ಈ ದಿನ ʻಬಿಗ್ ಬಾಸ್ʼ ಫಿನಾಲೆ; ಇದು ವಿಸ್ತರಣೆಯಾಗುತ್ತಿಲ್ಲ!
ಬಳಿಕ ಜರುಗಿದ ಗಾನ ಮಂಜುಳ ಸಂಗೀತ ಕಾರ್ಯಕ್ರಮದಲ್ಲಿ ಯಲ್ಲನಗೌಡ ಶಂಕರಬಂಡೆ, ರೇಣುಕಾ, ಜಡೇಶ್ ಎಮ್ಮಿಗನೂರು, ಹನುಮಯ್ಯ ತಿಮ್ಮಲಾಪುರ ಅವರು ಕುವೆಂಪು ರಚನೆಯ ಗೀತೆಗಳನ್ನು ಪ್ರಸ್ತುತಪಡಿಸಿ, ಮನ ರಂಜಿಸಿದರು.