Site icon Vistara News

Ballari News: ಗೋ ಪ್ರೇಮ ಮೆರೆಯುತ್ತಿರುವ ಕಂಪ್ಲಿಯ ಕೇಸರಿ ಗೋ ಸೇವಾ ಪಡೆ

Go Seva by the youth of the Kompli Kesari Go Seva pade

ಕಂಪ್ಲಿ: ಪಟ್ಟಣದಲ್ಲಿ ಅಪಘಾತಕ್ಕೊಳಗಾಗಿ ಸೂಕ್ತ ಚಿಕಿತ್ಸೆ ಇಲ್ಲದೆ ನರುಳುವ ಆಕಳು, ಗೂಳಿ, ಕರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಸ್ಥಳೀಯ ಕೇಸರಿ ಗೋ ಸೇವಾ ಪಡೆಯ ಯುವಕರು ಗೋ ಪ್ರೇಮ (Ballari News) ಮೆರೆದಿದ್ದಾರೆ.

ಇಲ್ಲಿನ ಯುವಕರ ತಂಡವೊಂದು ನಿತ್ಯ ರಾತ್ರಿ, ರಜೆ ದಿನಗಳು ಹಾಗೂ ಬಿಡುವಿನ ಸಮಯದಲ್ಲಿ ಗಾಯಗೊಂಡ ಹಾಗೂ ಕಾಯಿಲೆಗಳಿಂದ ನರಳುವಂತಹ ಗೋವು, ಗೂಳಿ, ಎತ್ತು ಹಾಗೂ ಕರುಗಳನ್ನು ಹುಡುಕಿ ಅವುಗಳಿಗೆ ಚಿಕಿತ್ಸೆ ನೀಡುವ ಮೂಲಕ ಗೋವುಗಳ ಸಂರಕ್ಷಣೆಗೆ ಪಣತೊಟ್ಟಿದ್ದಾರೆ.

ಯುವಕರ ಗುಂಪೊಂದು ಕೇಸರಿ ಗೋ ಸೇವಾ ಪಡೆ ಎನ್ನುವಂತಹ ತಂಡವನ್ನು ಕಟ್ಟಿಕೊಂಡು ಗೋ ಸೇವೆಗೆ ಟೊಂಕ ಕಟ್ಟಿ ನಿಂತಿದೆ.

ಇದನ್ನೂ ಓದಿ: Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆಗೆ ತಿದ್ದುಪಡಿ; ಹೊಸ ಅಧಿಸೂಚನೆಯಲ್ಲಿ ಏನಿದೆ?

ಪಟ್ಟಣದಲ್ಲಿ ನಿತ್ಯ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ರಸ್ತೆ ಮಧ್ಯೆ, ನಿಲುಗಡೆ ಮಾಡಿದ ವಾಹನಗಳ ಕೆಳಗಡೆ ದನಗಳು ಮಲಗುತ್ತಿವೆ, ಅವುಗಳ ಮಾಲೀಕರಂತೂ ಬೆಳಗ್ಗೆ, ಸಂಜೆ ಆಕಳುಗಳಿಂದ ಹಾಲನ್ನು ಕರೆದುಕೊಂಡು ರಸ್ತೆಗೆ ಬಿಟ್ಟುಬಿಡುತ್ತಾರೆ. ಇನ್ನು ಪುರಸಭೆಯವರು ಸಹ ಇದಕ್ಕೆ ತಲೆ ಕೆಡೆಸಿಕೊಳ್ಳುತ್ತಿಲ್ಲ. ಇದರ ಮಧ್ಯೆ ರಸ್ತೆಗಳಲ್ಲಿ ವೇಗವಾಗಿ ಚಲಿಸುವ ವಾಹನಗಳಿಂದ ಅಪಘಾತಕ್ಕೆ ಗುರಿಯಾಗಿ ಅನೇಕ ಮೂಕ ಪ್ರಾಣಿಗಳು ಗಾಯಗೊಂಡು, ನರಳಿ ಪ್ರಾಣ ಬಿಡುತ್ತಿವೆ.

ನಿತ್ಯ ಅಪಘಾತಕ್ಕೆ ಒಳಗಾಗಿ ರೋಧಿಸುವ ಜಾನುವಾರುಗಳನ್ನು ಕಂಡಂತಹ ಯುವಕರ ಗುಂಪೊಂದು ಕೇಸರಿ ಗೋ ಸೇವಾ ಪಡೆ ಎಂಬ ತಂಡವನ್ನು ಕಟ್ಟಿ ಗೋ ಸೇವೆಯನ್ನು ಆರಂಭಿಸಿದೆ. ನಿತ್ಯ ಎಲ್ಲಾದರೂ ಅಪಘಾತಕ್ಕೆ ಒಳಗಾದ ಅಥವಾ ಯಾವುದಾದರು ಕಾಯಿಲೆಯಿಂದ ನರಳುವಂತಹ ಗೋವು ಕಂಡಲ್ಲಿ ಗುರುತಿಸಿ, ಅದಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಅಲ್ಲದೇ ಗಾಯ ಅಥವಾ ಕಾಯಿಲೆ ಸಂಪೂರ್ಣವಾಗಿ ಗುಣ ಮುಖವಾಗುವವರೆಗೂ ನಿತ್ಯ ಅದರ ಉಪಚಾರ ಮಾಡುತ್ತಾರೆ.

ಮೃತ ಗೋವುಗಳಿಗೆ ಅಂತ್ಯ ಸಂಸ್ಕಾರ

ಅಪಘಾತದಿಂದ ಅಥವಾ ಅನಾರೋಗ್ಯದಿಂದ ಮೃತಪಟ್ಟ ಕರು, ಗೋವುಗಳಿಗೆ ಪೂಜೆ ಸಲ್ಲಿಸಿ, ಅಂತಿಮ ವಿಧಿ ವಿಧಾನವನ್ನು ನೆರವೇರಿಸುವ ಕಾರ್ಯವನ್ನು ಈ ತಂಡ ಮಾಡಿಕೊಂಡು ಬಂದಿದೆ. ಈ ಮೂಲಕ ತಂಡ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: Sri Sai Gold Palace : ಗೋಲ್ಡ್ ಹಬ್ಬಕ್ಕೆ ಸಜ್ಜಾಗಿದೆ ಸಾಯಿ ಗೋಲ್ಡ್ ಪ್ಯಾಲೇಸ್​

ಪ್ರತಿಯೊಬ್ಬ ಮನುಷ್ಯನ ಎರಡನೇ ತಾಯಿ ಎಂದರೆ ಅದು ಗೋ ಮಾತೆ. ಅಂತಹ ಗೋವುಗಳ ಸಂರಕ್ಷಣೆ ನಮ್ಮ ಹೊಣೆ. ನಿಸ್ವಾರ್ಥದಿಂದ ಗೋವುಗಳ ಚಿಕಿತ್ಸೆಗೆ ಹಾಗೂ ಲಾಲನೆ-ಪಾಲನೆಗೆ ಮುಂದಾಗಿದ್ದೇವೆ. ಮುಂಬರುವ ದಿನಗಳಲ್ಲಿ ಗೋವುಗಳ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯಕ್ರಮ ಕೈಗೊಳ್ಳಲಿದ್ದೇವೆ.

– ಕೇಸರಿ ಗೋ ಸೇವಾ ಪಡೆಯ ಯುವಕರು, ಕಂಪ್ಲಿ

Exit mobile version