ಬಳ್ಳಾರಿ: ದೂರು ದಾಖಲು ವಿಳಂಬ, ಅನಾವಶ್ಯಕ ದಂಡ ವಿಧಿಸುವುದು ಸೇರಿದಂತೆ ಸಾರ್ವಜನಿಕರಿಗೆ (Public) ಪೊಲೀಸರಿಂದ (Police) ತೊಂದರೆಯಾದರೆ ಸಹಾಯವಾಣಿ (Helpline) ಸಂಖ್ಯೆ 9480803083 ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಈ ಸಹಾಯವಾಣಿ ಸಂಖ್ಯೆಯನ್ನು ಅಳವಡಿಸಲಾಗುವುದು ಎಂದರು.
ಇದನ್ನೂ ಓದಿ: Edible oil prices : ಅಡುಗೆ ಎಣ್ಣೆ ದರದಲ್ಲಿ ಶೀಘ್ರ 8-12 ರೂ. ಇಳಿಕೆ
ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರು ದೂರು ನೀಡಲು ಆಗಮಿಸಿದ ವೇಳೆ ಸೇರಿದಂತೆ ವಿವಿಧ ವಿಷಯಗಳಿಗೆ ಪೊಲೀಸರು ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂಬ ಆರೋಪವಿದ್ದು, ಹೀಗಾಗಿ ಹೀಗಾಗಿ ಪ್ರತ್ಯೇಕ ಸಹಾಯವಾಣಿ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಂದ ಸಹಾಯವಾಣಿ ಸಂಖ್ಯೆ 9480803083 ಗೆ ದೂರು ಬಂದಲ್ಲಿ ಬಂದ ದೂರಿನ ಅನ್ವಯ ಮಾಹಿತಿ ಪಡೆದು ಪೊಲೀಸರ ಮೇಲೆ ಕ್ರಮ ವಹಿಸಲಾಗುವುದು. ನಗರದಲ್ಲಿ ಟ್ರಾಫಿಕ್ ಪೊಲೀಸರು ಅನಾವಶ್ಯಕ ವಾಗಿ ಮಾಹಿತಿ ಸಂಗ್ರಹಣೆಗಾಗಿ ವಾಹನ ಸವಾರರ ಮೇಲೆ ಕಿರುಕುಳ ನೀಡಬಾರದು ಎಂದು ಎಸ್ಪಿ ಎಚ್ಚರಿಕೆ ನೀಡಿದರು.
ಜಿಲ್ಲಾದ್ಯಂತ ಅಕ್ರಮ ಚಟುವಟಕೆ, ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು 300 ಸಿಸಿ ಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Kannada Film Industry: 3 ವರ್ಷದಿಂದ ಬೇಡಿಕೆ ಈಡೇರಿಲ್ಲ! ಜೂನ್ 5ರಿಂದ ಸಿನಿಮಾ ಶೂಟಿಂಗ್ ಬಂದ್
ಇತ್ತೀಚೆಗೆ ಕಳೆದುಕೊಂಡಿದ್ದ ನಾಲ್ಕು ನೂರಕ್ಕೂ ಅಧಿಕ ಮೊಬೈಲ್ ಗಳನ್ನು ಪತ್ತೆ ಹಚ್ಚಿ ಮೊಬೈಲ್ ಪೋನ್‌ಅನ್ನು ಮರಳಿ ಕೊಡಲಾಗದೆ ಎಂದು ಇದೇ ವೇಳೆ ತಿಳಿಸಿದರು.