Site icon Vistara News

Ballari News: ಬಳ್ಳಾರಿಯಲ್ಲಿ ಜ.13ರಂದು ಕರ್ಪೂರಿ‌ ಠಾಕೂರ್ ಜನ್ಮ ಶತಮಾನೋತ್ಸವ, ಪುಸ್ತಕ ಲೋಕಾರ್ಪಣೆ

Lohiya prakashana channabasavanna pressmeet at Ballari

ಬಳ್ಳಾರಿ: ಲೋಹಿಯಾ ಪ್ರಕಾಶನದಿಂದ ಜನನಾಯಕ ಕರ್ಪೂರಿ ಠಾಕೂರ್ (Karpuri Thakur) ಜನ್ಮ ಶತಮಾನೋತ್ಸವ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು (Book Release Programme) ಜ.13 ರಂದು ಸಂಜೆ 5.30ಕ್ಕೆ ನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಲೋಹಿಯ ಪ್ರಕಾಶನದ ಚೆನ್ನಬಸವಣ್ಣ ತಿಳಿಸಿದರು.

ಇದನ್ನೂ ಓದಿ: Gujarat Summit: ನಿಮ್ಮ ಕನಸಿಗೆ ನಮ್ಮ ಸಂಕಲ್ಪ ಜತೆಗಿದೆ; ವಿಶ್ವದ ಹೂಡಿಕೆಗೆ ಮೋದಿ ಕರೆ

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಠಾಕೂರ್ ಅವರು ತಮ್ಮ ಅವಧಿಯಲ್ಲಿ ಶಿಕ್ಷಣ- ಉದ್ಯೋಗದಲ್ಲಿ ಹಿಂದುಳಿದ ಜಾತಿಗಳಿಗೆ, ಬಡವರಿಗೆ, ಮಹಿಳೆಯರಿಗಾಗಿ ಬಿಹಾರದಲ್ಲಿ ಮೀಸಲಾತಿ ತಂದರು, ಭೂ ಸುಧಾರಣೆ ಕಾಯ್ದೆಯ ಕ್ರಾಂತಿ‌ ಉಂಟು ಮಾಡಿದರು. ಲೋಹಿಯಾ ಅವರ ಮೂಸೆಯಿಂದ ಬೆಳೆದು ಬಂದವರು ಕರ್ಪೂರು ಠಾಕೂರ್ ಎಂದರು.

ಪುಸ್ತಕ ಲೋಕಾರ್ಪಣೆ

ಹಸನ್ ನಯೀಂ ಸುರಕೋಡ್ ಅವರು ಅನುವಾದಿಸಿದ ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ, ಮಂಗ್ಳೂರ ವಿಜಯ ಅವರು ರಚಿಸಿದ ಅಪ್ಪಟ ಸಮಾಜವಾದಿ ಮಧು ಲಿಮಯೆ ಕೃತಿ, ಡಾ.ಎನ್. ಜಗದೀಶ್ ಕೊಪ್ಪ ರಚಿಸಿದ ಮಾನವತಾವಾದಿ ಮಧು ದಂಡವತೆ ಕೃತಿ ಮತ್ತು ಸವಿತಾ ನಾಗಭೂಷಣ ಅವರ ದಿನದ ಪ್ರಾರ್ಥನೆ (ನುಡಿ‌ ಶಿವಮೊಗ್ಗ ಅವರ ಪ್ರಕಟಣೆ) ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.

ಶಾಸಕ ಬಿ.ಆರ್.ಪಾಟೀಲ್ ಅವರಿಂದ ಚಾಲನೆ

ಹಿರಿಯ ಸಮಾಜವಾದಿ ಮತ್ತು ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಶಿವಮೊಗ್ಗದ ಹಿರಿಯ‌ ಚಿಂತಕ ಡಾ. ರಾಜೇಂದ್ರ ಚೆನ್ನಿ ಅವರು ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ – ಒಂದು ಅವಲೋಕನ ಕುರಿತು ಮಾತನಾಡಲಿದ್ದಾರೆ.

ಹಿರಿಯ ಕವಯಿತ್ರಿ ಸವಿತಾ ನಾಗಭೂಷಣ ಮತ್ತು ಸಾಹಿತಿ ಡಾ. ದಸ್ತಗಿರಿ‌ಸಾಬ್ ದಿನ್ನಿ ಅವರು ಕೃತಿಗಳ ಪರಿಚಯ ಮಾಡಿ ಕೊಡಲಿದ್ದಾರೆ. ಹಿರಿಯ ಸಾಹಿತಿ ಮತ್ತು ಸಂಸದ ಡಾ. ಎಲ್. ಹನುಮಂತಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಎನ್‌.ಜಗದೀಶ್ ಕೊಪ್ಪ ಮತ್ತು ಮಂಗ್ಳೂರು ವಿಜಯ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Tax saving fixed deposit : ತೆರಿಗೆ ಉಳಿಸಿಕೊಡುವ ಬ್ಯಾಂಕ್‌ ಫಿಕ್ಸೆಡ್‌ ಡಿಪಾಸಿಟ್‌ ಸ್ಕೀಮ್‌ ಯಾವುದು?

ಸಭಾಂಗಣಕ್ಕೆ ಗೋಪಾಲಗೌಡ ಸಭಾಂಗಣ ಎಂದು ಹೆಸರಿಡಲಾಗಿದೆ. ವೇದಿಕೆಗೆ ರಾಚಪ್ಪ ಹಡಪದ ಹೆಸರಿಡಲಾಗಿದೆ. ದ್ವಾರಕ್ಕೆ ದಾಸನ್ ಸಾಲೊಮನ್ ಹಾಗೂ ವೀರಣ್ಣ ತಿಮ್ಮಾಜಿ ಮಹಾದ್ವಾರ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.

Exit mobile version