ಬಳ್ಳಾರಿ: ಲಾಳಗೊಂಡ ಸಮಾಜವನ್ನು ಸಂಬಂಧಪಟ್ಟ ಸಚಿವರೊಂದಿಗೆ (Minister) ಚರ್ಚಿಸಿ ಉಪಜಾತಿ ಪಟ್ಟಿಯಲ್ಲಿ (Subcaste list) ಸೇರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ತಿಳಿಸಿದರು.
ಅಖಿಲ ಕರ್ನಾಟಕ ಲಿಂಗಾಯತ ಲಾಳಗೊಂಡರ ಸಂಘ ಜಿಲ್ಲಾ ಘಟಕದ ವತಿಯಿಂದ ಬಸವಭವನದಲ್ಲಿ ಏರ್ಪಡಿಸಿದ್ದ ಲಾಳಗೊಂಡರ ಸಮಾಜದ ಎಸ್ಎಸ್ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಾಳಗೊಂಡ ಸಮಾಜವನ್ನು ಉಪಜಾತಿ ಪಟ್ಟಿಯಲ್ಲಿ ಸೇರಿಸುವವರೆಗೆ ಬಿಡುವುದಿಲ್ಲ ಎಂದರು.
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕು, ಲಾಳಗೊಂಡ ಸಮಾಜದ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತಿಯೊಬ್ಬರ ಸಹಕಾರದಿಂದ ಗೆದ್ದು ಸಚಿವನಾಗಿದ್ದೇನೆ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಇದನ್ನೂ ಒದಿ: National Mango Day: ಮಾವಿಗೊಂದು ದಿನವೇಕೆ?: ಸುಲಿದು ಸವಿದರೆ ಸಾಲದೇ!
ಸಮಾಜದ ಮುಖಂಡ ಸಿರಿಗೇರಿ ಪನ್ನರಾಜ್ ಮಾತನಾಡಿ, ಆದಾಯ ಕೊರತೆ ಮತ್ತು ಆರ್ಥಿಕವಾಗಿ ಹಿಂದುಳಿದ ಜನರು ನಮ್ಮ ಸಮಾಜದಲ್ಲಿ ಇದ್ದಾರೆ. ಅವರನ್ನು ಕೂಡ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ. ಕಷ್ಟದಿಂದ ಮುಂದೆ ಬಂದಿದೆ ಲಾಳಗೊಂಡ ಸಮಾಜ ಎಂದು ತಿಳಿಸಿದರು.
ವೀರಶೈವ ಜನಾಂಗದಲ್ಲಿ ನಾವಿದ್ದರೂ ನಾವು ಮುಖ್ಯ ವಾಹಿನಿಗೆ ಬಂದಿಲ್ಲ ಎಂಬ ಕೊರಗು ಇದ್ದು, ಇದನ್ನು ಹೋಗಲಾಡಿಸುವ ಪ್ರಯತ್ನ ಆಗಬೇಕಾಗಿದೆ ಎಂದರು.
ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ಶ್ರೀ ವಾಮದೇವ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಮನೆಯಲ್ಲಿ ಧನಸಂಪತ್ತು ಇದ್ದರೆ ಕಳ್ಳತನದ ಭಯದಿಂದ ನಿದ್ದೆ ಬರುವುದಿಲ್ಲ, ವಿದ್ಯಾಸಂಪತ್ತು ಇದ್ದರೆ ಯಾರಿಗೂ ಹೆದರುವುದಿಲ್ಲ. ಜಗತ್ತಿನಲ್ಲಿ ಜ್ಞಾನದ ಬಲದಿಂದ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ. ಮಕ್ಕಳಿಗೆ ಕೊರಳಲ್ಲಿ ಸುವರ್ಣ ಹಾಕಿದರೆ ಕಳುವಾಗುತ್ತದೆ, ಆದರೆ ಕಂಠದಲ್ಲಿ ವರ್ಣಮಾಲೆ ಹಾಕಿದರೆ ಕಳುವಾಗುವುದಿಲ್ಲ ಎಂದರು.
ಇದನ್ನೂ ಓದಿ: World Brain Day : ವಿಶ್ವ ಮೆದುಳು ದಿನ: ಮೆದುಳಿಗೆ ಕಸರತ್ತು ತಪ್ಪಿಸಬೇಡಿ!
ಬಳಿಕ ಕೆಎಎಸ್ ಅಧಿಕಾರಿ ಚೆನ್ನಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಲಾಳಗೊಂಡ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು. ಶಂಕರಬಂಡೆ ಯಲ್ಲನಗೌಡ ತಂಡದವರಿಂದ ಸಂಗೀತ ಕಾರ್ಯಕ್ರಮ, ಜಿಲಾನ್ ಭಾಷಾ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಇದನ್ನೂ ಓದಿ: Emerging Asia Cup Final: ನಾಳೆ ಇಂಡೋ-ಪಾಕ್ ಫೈನಲ್ ಸಮರ
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಲಾಳಗೊಂಡ ಸಮಾಜದ ರಾಜ್ಯಾಧ್ಯಕ್ಷ ಅರವಿ ಬಸವನಗೌಡ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೌಡ, ವೀ.ವಿ.ಸಂಘದ ಅಧ್ಯಕ್ಷ ಆರ್. ರಾಮನಗೌಡ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಮೇಲ್ಸಿಮೆ ಪೊಂಪನಗೌಡ, ಕಾರ್ಯಪಾಲಕ ಅಭಿಯಂತರ ಗಂಗಾಧರಗೌಡ, ಮೀನಳ್ಳಿ ಚೆನ್ನಬಸವನ ಗೌಡ ಮತ್ತು ಘನಮಲ್ಲನಗೌಡ, ತಿಮ್ಮನಗೌಡ ಸಿದ್ದಮ್ಮನಹಳ್ಳಿ, ಡಾ.ಎಸ್.ಬಿ.ರಾಜಶೇಖರಗೌಡ, ಯಾಳ್ಪಿ ಮೇಟಿ ಪೊಂಪನಗೌಡ, ಮಸೂದಿಪುರ ಸಿದ್ಧರಾಮನಗೌಡ, ಆಲ್ದಾಳ್ ವೀರಭದ್ರಪ್ಪ, ಬಸವರಾಜ್ ಹೊಸಗೇರಿ, ಆರ್.ಜೆ.ಪೊಂಪನಗೌಡ, ಮಹಾರುದ್ರಗೌಡ, ಪಿ.ಎಸ್.ಸೋಮಲಿಂಗನಗೌಡ, ಎಸ್. ಗುರುಲಿಂಗನ ಗೌಡ, ಅರವಿ ತಿಮ್ಮನಗೌಡ, ಮುದ್ದ ಬಸವನಗೌಡ, ಪಾಟೀಲ್ ಸಿದ್ದಲಿಂಗನಗೌಡ, ಕೆ.ನಾಗನಗೌಡ, ನಾಗರಾಜಗೌಡ ಸೇರಿದಂತೆ ಹಲವು ಮುಖಂಡರು, ಇತರರು ಪಾಲ್ಗೊಂಡಿದ್ದರು.