Site icon Vistara News

Ballari News: ಕೊಲೆ ಮಾಡಿದ ಸಿರುಗುಪ್ಪದ ಆಪಾದಿತರಿಗೆ ಜೀವಾವಧಿ ಶಿಕ್ಷೆ

Life imprisonment for accused of murder

ಬಳ್ಳಾರಿ: ಆಸ್ತಿ (Property) ವಿಷಯವಾಗಿ ಕೊಲೆ (Murder) ಮಾಡಿದ ಆಪಾದಿತರಿಗೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವವಾಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಸಿರುಗುಪ್ಪ ತಾಲೂಕಿನ ಬಂಡ್ರಾಳ್ ಗ್ರಾಮದ ವಿರುಪಾಕ್ಷ ಗೌಡ ಮೃತ ವ್ಯಕ್ತಿ. 2020ರ ಜೂನ್‌ 16ರಂದು ಮೃತ ವ್ಯಕ್ತಿಯು ಮಗನೊಂದಿಗೆ ಬೈಕ್‌ನಲ್ಲಿ ಹೊಲಕ್ಕೆ‌ ಹೋಗುವ ವೇಳೆ‌ ಇಬ್ಬರು ಆಪಾದಿತರು ದಾಳಿ‌ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು, ಅವರ ವಿರುದ್ಧ ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: Team India : ಐರ್ಲೆಂಡ್ ಸರಣಿಗೆ ಜಸ್ಪ್ರೀತ್ ಬುಮ್ರಾ ಅಲ್ಲ ನಾಯಕ, ಸ್ಫೋಟಕ ಬ್ಯಾಟರ್​ಗೆ ನೇತೃತ್ವ

ಠಾಣೆ ಪಿಎಸ್ಐ ಎಚ್. ಸೂರ್ಯನಾರಾಯಣ ತನಿಖೆ ಆರಂಭಿಸಿದ್ದರು. ಸಿರುಗುಪ್ಪ ಸಿಪಿಐ ಟಿ. ಆರ್. ಪವಾರ್ ತನಿಖೆ ನಡೆಸಿ, ಇಬ್ಬರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ: Josephine Chaplin: ಕಾಮಿಡಿ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫಿನ್ ಚಾಪ್ಲಿನ್ ನಿಧನ

ವಿಚಾರಣೆ ನಡೆಸಿದ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ಅವರು ಆಪಾದಿತರಿಗೆ 25 ಸಾವಿರ ರೂ.‌ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಲಕ್ಷ್ಮಿದೇವಿ ಪಾಟೀಲ್ ಸಾಕ್ಷಿ ವಿಚಾರಣೆ ನಡೆಸಿ ಅಭಿಯೋಜನಾ ಪರವಾಗಿ ವಾದ ಮಂಡಿಸಿದ್ದರು.

Exit mobile version