ಬಳ್ಳಾರಿ: ಆದಾಯಕ್ಕೂ ಮೀರಿ ಅಕ್ರಮ (Illegal) ಆಸ್ತಿ ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಹುಸೇನ್ ಸಾಬ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ನಗರದ ಜೆಸ್ಕಾಂ ಅಧಿಕಾರಿ ಹುಸೇನ್ ಸಾಬ್ ಕಚೇರಿ, ರಾಘವೇಂದ್ರ ಕಾಲೋನಿಯ ನಿವಾಸ ಹಾಗೂ ಹುಟ್ಟೂರು ತಾಲೂಕಿನ ಶಿಡಿಗಿನಮೊಳ ಗ್ರಾಮದ ನಿವಾಸ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ನಾಲ್ಕು ತಂಡಗಳಾಗಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Govt Employees News : ಸರ್ಕಾರಿ ನೌಕರರಿಗೆ ಶೇ.17 ರಷ್ಟು ವೇತನ ಹೆಚ್ಚಳ ಜಾರಿಗೆ ಅನುದಾನ; ಆರ್ಥಿಕ ಇಲಾಖೆಯಿಂದ ಸೂಚನೆ
ಅಗತ್ಯ ದಾಖಲೆ ವಶ
ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಜೆಸ್ಕಾಂ ಅಧಿಕಾರಿ ಹುಸೇನ್ ಸಾಬ್ ಅವರ ಕೆಇಬಿ ಕಚೇರಿ ಹಾಗೂ ಅವರ ಮನೆಯಲ್ಲಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಶೋಧ ಕಾರ್ಯ ಇನ್ನು ಮುಂದುವರಿದಿದೆ.