Site icon Vistara News

Ballari News: ಸಂಬಂಧಿ ಜತೆ ಅಕ್ರಮ ಸಂಬಂಧ ಶಂಕೆ; ಕೊಡಲಿಯಿಂದ ಕೊಚ್ಚಿ ಕೊಂದವನಿಗೆ ಜೀವಾವಧಿ ಶಿಕ್ಷೆ

Life imprisonment for accused of murder

ಬಳ್ಳಾರಿ: ತಮ್ಮ ಸಂಬಂಧಿಯೊಂದಿಗೆ ಅಕ್ರಮ ಸಂಬಂಧ (Illicit Relationship) ಹೊಂದಿರುವ ಶಂಕೆಯಲ್ಲಿ ಕೊಲೆ ಮಾಡಿದ ಆರೋಪಿತನಿಗೆ ಎರಡು ವರ್ಷದ ಅವಧಿಯಲ್ಲಿಯೇ ವಿಚಾರಣೆ ನಡೆಸಿ ಆಪಾದಿತ ಶೇಖರನಿಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ ಬಳ್ಳಾರಿಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ಶನಿವಾರ (ಏ.29ರಂದು) ತೀರ್ಪು ನೀಡಿದ್ದಾರೆ.

ಸಿರುಗುಪ್ಪ ತಾಲೂಕಿನ ಬೂದಗುಪ್ಪ ಗ್ರಾಮದಲ್ಲಿ ಮಹದೇವ ಎನ್ನುವ ವ್ಯಕ್ತಿಯು ತಮ್ಮ ಸಂಬಂಧಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆಪಾದಿತ ಶೇಖರ್‌ ಶಂಕಿಸಿದ್ದು, ಬಹಿರ್ದೆಸೆಗೆ ಹೋಗಿದ್ದ ಮಹದೇವನ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದ. ಗಾಯಗೊಂಡ ಮಹದೇವ 2020ರ ಮೇ 27ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ಇದನ್ನೂ ಓದಿ: Karnataka Election 2023: ದಿಲ್ಲಿ ಕುಟುಂಬದ ಮುಂದೆ ಅಡ್ಡಡ್ಡ ಬೀಳುತ್ತಾರೆ ಕಾಂಗ್ರೆಸ್ ನಾಯಕರು; ಪ್ರಧಾನಿ ಮೋದಿ ಲೇವಡಿ

ಘಟನೆಗೆ ಸಂಬಂಧಿಸಿದಂತೆ ಸಿರಿಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಅಮರೇಗೌಡ ಪ್ರಕರಣ ದಾಖಲಿಸಿದ್ದರೆ, ಸಿಪಿಐ ಕಾಳಿಕೃಷ್ಣ ಅವರು ತನಿಖೆ ಮಾಡಿ, ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯವು ಅಭಿಯೋಜನೆ ಪರ 19 ಜನ ಸಾಕ್ಷಿದಾರರನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು, ಎರಡು ಕಡೆಯಿಂದ ವಾದ ಮತ್ತು ಪ್ರತಿವಾದವನ್ನು ಆಲಿಸಿ, ಆರೋಪಿಯ ವಿರುದ್ಧ ಭಾರತ ದಂಡ ಪ್ರಕ್ರಿಯೆ ಸಂಹಿತೆ ಕಲಂ 302 ಅಡಿಯಲ್ಲಿ ಆರೋಪ ಸಾಬೀತಾಗಿದ್ದರಿಂದ ಆಪಾದಿತ ಶೇಖರನಿಗೆ ಕಠಿಣ ಜೀವಾವಧಿ‌ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ, ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಇದನ್ನೂ ಓದಿ: Congress Guarantee: ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ; ಇದು ಕಾಂಗ್ರೆಸ್‌ 6ನೇ ಗ್ಯಾರಂಟಿ

ಸರ್ಕಾರದ ಪರವಾಗಿ ಲಕ್ಷ್ಮಿದೇವಿ ಪಾಟೀಲ್ ಸರ್ಕಾರ ಅಭಿಯೋಜಕರಾಗಿ ಸಾಕ್ಷಿಗಳ ವಿಚಾರಣೆ ನಡೆಸಿ, ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು.

Exit mobile version