Site icon Vistara News

Ballari News: ಮೈಸೂರು ರಸ್ತೆ ಅಪಘಾತ; ಮೃತರ ಕುಟುಂಬಗಳಿಗೆ ಚೆಕ್ ವಿತರಿಸಿದ ಸಚಿವ ನಾಗೇಂದ್ರ

Minister Nagendra distributed checks at sanganakallu

ಬಳ್ಳಾರಿ: ಮೈಸೂರು ಸಮೀಪ ಟಿ.ನರಸೀಪುರದ ಕುರುಬೂರು ಬಳಿ (ಮೇ.29) ಭೀಕರ ರಸ್ತೆ ಅಪಘಾತದಲ್ಲಿ (Road Accident) ಮೃತರಾಗಿದ್ದ ಬಳ್ಳಾರಿ ಜಿಲ್ಲೆ ಸಂಗನಕಲ್ಲು ಗ್ರಾಮದ ಮೃತರ ಕುಟುಂಬಸ್ಥರಿಗೆ ಸಚಿವ ಬಿ. ನಾಗೇಂದ್ರ, ಪರಿಹಾರದ ಚೆಕ್ (checks) ವಿತರಣೆ ಮಾಡಿದರು.

ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು. ಅಪಘಾತದಲ್ಲಿ ಒಟ್ಟು ಈವರೆಗೆ 11 ಜನ ಮೃತರಾಗಿದ್ದು, ಮೃತರ ಪೈಕಿ ಸಂಗನಕಲ್ಲು ಗ್ರಾಮದ 10 ಜನರು ಮೃತರಾಗಿದ್ದರು. ಮೃತರಾದ 7 ಜನರ ಕುಟುಂಬಸ್ಥರಿಗೆ ಮಾತ್ರ ಸದ್ಯ ಚೆಕ್ ವಿತರಣೆ ಮಾಡಲಾಗಿದ್ದು, ಇನ್ನುಳಿದ ಮೃತ ಮೂರು ಜನರ ಕುಟುಂಬಸ್ಥರಿಗೆ ಶೀಘ್ರ ಚೆಕ್ ವಿತರಿಸಲಾಗುವುದು ಎಂದು ಸಚಿವ ನಾಗೇಂದ್ರ ತಿಳಿಸಿದರು.

ಇದನ್ನೂ ಓದಿ: Video: ಯಾವ ಉದ್ಯೋಗಿಯೂ ಹೊರಗೆ ಹೋಗಬಾರದು; ಕಂಪನಿ ಬಾಗಿಲಿಗೆ ಸರಪಳಿ ಬೀಗ ಹಾಕಿದ ವಾಚ್​ಮ್ಯಾನ್

ಮೇ 29ರಂದು ದೇವರ ದರ್ಶನಕ್ಕೆಂದು ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ 13 ಜನರು ಪ್ರವಾಸ ತೆರಳಿದ್ದರು. ಮೈಸೂರಿಗೆ ಹೋಗಿ ತಾಯಿಯ ದರ್ಶನ ಪಡೆದು ವಾಪಸ್ ಬರುವಾಗ ದುರ್ದೈವವಶಾತ್ ಅಪಘಾತ ಆಗಿ ಈವರೆಗೆ 11 ಜನ ಮೃತಪಟ್ಟಿದ್ದಾರೆ. ಸ್ಥಳದಲ್ಲೇ 10 ಜನರು ಮೃತರಾಗಿದ್ದರು, ಈ ಪೈಕಿ 10 ಜನ ಸಂಗನಕಲ್ಲು ಗ್ರಾಮದವರಾಗಿದ್ದರು. ಗಾಯಾಳುಗಳ ಪೈಕಿ ಸಂದೀಪ್ ಎಂಬುವವರನ್ನು ಬದುಕುಳಿಸಲು ಮೈಸೂರಿನ ಕೆ.ಆರ್.ಆಸ್ಪತ್ರೆಯ ವೈದ್ಯರು ಶಕ್ತಿ ಮೀರಿ ಪ್ರಯತ್ನಪಟ್ಟರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಸಚಿವ ನಾಗೇಂದ್ರ ಅವರು ತಿಳಿಸಿದರು.

ಘಟನೆ ನಡೆಯುತ್ತಿದ್ದಂತೆ ಸಿಎಂ ಅವರ ಸೂಚನೆಯಂತೆ ನಾನು ಮೈಸೂರಿನ ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೆ. ಇಂತಹ ಘಟನೆ ಯಾರ ಜೀವನದಲ್ಲೂ ನಡೆಯಬಾರದು ಎಂದು ಹೇಳಿದ ಸಚಿವ ನಾಗೇಂದ್ರ, ಅಲ್ಲಿ ಹೋಗಿ ನಾನು ನೋಡಿದಾಗ ಹೃದಯವಿದ್ರಾವಕ ದೃಶ್ಯ ಇತ್ತು. ಗಾಯಾಳು ಸಂದೀಪ್ ಉಳಿಯಬಹುದೆಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ ಎಂದರು.

ಇದನ್ನೂ ಓದಿ: Kollam Sudhi: ಮಲಯಾಳಂ ಖ್ಯಾತ ಕಿರುತೆರೆ ನಟ ಕಾರು ಅಪಘಾತದಲ್ಲಿ ನಿಧನ; ಕಾರು ನಜ್ಜುಗುಜ್ಜು!

ಸಿಎಂ ಅವರು ಸಿಎಂ ಪರಿಹಾರ ನಿಧಿಯಿಂದ ತಲಾ ಒಬ್ಬರಿಗೆ 2 ಲಕ್ಷ ರೂ. ಚೆಕ್ ನೀಡುವಂತೆ ಘೋಷಣೆ ಮಾಡಿದ್ದರು. ಜತೆಗೆ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳುವಂತೆ ಸಿಎಂ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಾನು ಸಂಗನಕಲ್ಲು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ಸಿಎಂ ಪರಿಹಾರ ನಿಧಿಯ ಚೆಕ್ ವಿತರಿಸಿದ್ದೇನೆ ಎಂದರು.

ಕೇಂದ್ರ ಸರ್ಕಾರ ಕೂಡ ಪರಿಹಾರ ನೀಡಲಿ ಎಂದು ನಾನು ಕೂಡ ಒತ್ತಾಯ ಮಾಡುತ್ತೇನೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುವೆ ಎಂದು ಹೇಳಿದ ಅವರು, ಸರ್ಕಾರದಿಂದ ಉದ್ಯೋಗ ಹಾಗೂ ಇತರ ನೆರವು ದೊರಕಿಸಿ ಕೊಡಲು ಪ್ರಯತ್ನಿಸುವೆ ಎಂದರು.

ಇದನ್ನೂ ಓದಿ: Mukhtar Ansari: 32 ವರ್ಷದ ಹಿಂದಿನ ಕೊಲೆ ಕೇಸಿನಲ್ಲಿ ಮುಖ್ತಾರ್ ಅನ್ಸಾರಿ ದೋಷಿ, ಇಂದೇ ಶಿಕ್ಷೆ ಪ್ರಕಟ

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ವೆಂಕಟೇಶ್ ಪ್ರಸಾದ್, ಮುರಳಿಕೃಷ್ಣ, ಬೆಣಕಲ್ ಬಸವರಾಜಗೌಡ, ಪಿ.ಜಗನ್, ಮುದಿಮಲ್ಲಯ್ಯ, ಪ್ರಭು ರೆಡ್ಡಿ, ಕೆ,ರಾಮಕೃಷ್ಣ, ಈಶ್ವರಪ್ಪ, ಯುದಿಷ್ಟರ, ಈರಪ್ಪ, ಭೀಮ, ಭಾಷ, ಶಿವು, ವಿಜಯ್‍ ಕುಮಾರ್, ಜೋಗಿನ್ ಚಂದ್ರ, ಪುನೀತ್, ದುರುಗಣ್ಣ ಸೇರಿದಂತೆ ಹಲವರು ಹಾಜರಿದ್ದರು.

Exit mobile version