Site icon Vistara News

Ballari News: ಏಷ್ಯನ್ ಗೇಮ್ಸ್‌ನಲ್ಲಿ ನಂದಿನಿಗೆ ಕಂಚು, ಸಿರುಗುಪ್ಪದ ಧೋಬಿ ಕುಟುಂಬದಲ್ಲಿ ಬೆಳಗಿದ ಪ್ರತಿಭೆ

Nandini Agasara from Siruguppa taluk wins bronze medal in Asian Games

ಬಳ್ಳಾರಿ: ಏಷ್ಯನ್‌ ಗೇಮ್ಸ್‌ (Asian Games) ಕ್ರೀಡಾಕೂಟದ ಹೆಪ್ಟಥ್ಲಾನ್‌ನಲ್ಲಿ (Heptathlon) ಜಿಲ್ಲೆಯ ಸಿರುಗುಪ್ಪ (Siruguppa) ತಾಲೂಕಿನ ನಂದಿನಿ ಅಗಸರ ಅವರು ಕಂಚಿನ ಪದಕ (Bronze Medal) ವಿಜೇತಳಾಗಿ ವಿಶ್ವದ ಗಮನ ಸೆಳೆದಿದ್ದಾರೆ. ಅವರು ಪದಕ ಗೆಲ್ಲುತ್ತಲೇ ಅವರ ಹುಟ್ಟೂರಿನಲ್ಲಿ ಸಂಭ್ರಮ ಮೇರೆ ಮೀರಿತ್ತು.

ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮಕ್ಕೆ ಸೇರಿರುವ ಯಲ್ಲಪ್ಪ ದಂಪತಿಯು ಕುಟುಂಬ ಕುಟುಂಬ ನಿರ್ವಹಣೆಗಾಗಿ ಅದೋನಿ ರಸ್ತೆಯಲ್ಲಿರುವ ಶ್ರೀನಗರ ಕ್ಯಾಂಪ್‌ಗೆ ಸ್ಥಳಾಂತರವಾಗಿದ್ದರು.

ನಂದಿನಿ ತಂದೆ ಯಲ್ಲಪ್ಪ ಅವರ ಕುಟುಂಬ ಈ ಮೊದಲು ಬಳ್ಳಾರಿ ತಾಲೂಕಿನ ಬಗ್ಗೂರು ಕ್ಯಾಂಪ್‌, ನಂತರ ಸಿರುಗುಪ್ಪ-ಆದೋನಿ ರಸ್ತೆಯಲ್ಲಿರುವ ಶ್ರೀನಗರ ಕ್ಯಾಂಪ್‌ನಲ್ಲಿಯೇ ನೆಲೆ ಕಂಡು, ಅಲ್ಲಿ ವಾಸವಾಗಿದ್ದ ಮನೆಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ, ಶುಭ್ರಗೊಳಿಸಿ ಇಸ್ತ್ರಿ ಮಾಡಿ ಕೊಡುವ ಮೂಲಕ ಜೀವನ ನಡೆಸುತ್ತಿದ್ದರು.

ಇದನ್ನೂ ಓದಿ: NIELIT Recruitment: ಎನ್‌ಐಇಎಲ್‌ಐಟಿಯಲ್ಲಿ 80 ಹುದ್ದೆ: ಎಸ್ಸೆಸ್ಸೆಲ್ಸಿ, ಐಟಿಐ ಪಾಸಾಗಿದ್ದರೆ ಸಾಕು

ಬಳಿಕ ಜೀವನ ನಿರ್ವಹಣೆಗಾಗಿ ಯಲ್ಲಪ್ಪ ಅವರು ನಂದಿನಿ ಜನಿಸಿ 3 ತಿಂಗಳ ನಂತರ ಹೈದ್ರಾಬಾದ್‌ಗೆ ತೆರಳಿ ಜೀವನ ನಡೆಸಿದರು. ನಂದಿನಿ ಅಲ್ಲಿಯೇ ಶಿಕ್ಷಣ ಪಡೆದಳು.

ನಿರಂತರ ಶ್ರಮದ ಮೂಲಕ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದಿರುವ ನಂದಿನಿ ಅಗಸರ ಅವರು ಚೀನಾದಲ್ಲಿ ನಡೆಯುತ್ತಿರುವ ಏಷ್ಯಾನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಹೆಪ್ಟಥ್ಲಾನ್‌ನಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ತುಸು ಏರಿಕೆ, ಹಬ್ಬದ ಸೀಸನ್‌ ಎಫೆಕ್ಟ್

ಏನಿದು ಹೆಪ್ಟಥ್ಲಾನ್ ?

ಹೆಪ್ಟಥ್ಲಾನ್ ಎಂದರೆ 100 ಹರ್ಡಲ್ಸ್, ಹೈ ಜಂಪ್, ಶಾಟ್ ಪುಟ್, 200 ಮೀ ರನ್ನಿಂಗ್, ಲಾಂಗ್ ಜಂಪ್, ಜಾವಲಿನ್ ಥ್ರೋ ಮತ್ತು 800 ಮೀಟರ್ ರನ್ನಿಂಗ್ ಒಟ್ಟು ಏಳು ಈವೆಂಟ್ ಗಳಲ್ಲಿ ಪಾಲ್ಗೊಳ್ಳುವುದಾಗಿದೆ. ಈ ಎಲ್ಲಾ ಏಳು ಈವೆಂಟ್ ಗಳಲ್ಲಿ ತೆಗೆದುಕೊಂಡ ಅಂಕಗಳ ಮೇಲೆ ಪದಕ ನಿರ್ಧಾರವಾಗಲಿದೆ.

Exit mobile version