Site icon Vistara News

Ballari News: ಬಳ್ಳಾರಿಯಲ್ಲಿ ಕಿಷ್ಕಿಂದ ವಿಶ್ವವಿದ್ಯಾಲಯ ಪ್ರಾರಂಭ: ಡಾ. ಎಸ್.ಜೆ.ವಿ. ಮಹಿಪಾಲ್

New Kishkinda University started in Ballari says Dr S J V Mahipal

ಬಳ್ಳಾರಿ: ತುಂಗಭದ್ರ ಎಜುಕೇಶನ್, ಹೆಲ್ತ್ (Health) ಮತ್ತು ರೂರಲ್ ಡೆವಲಪ್ಮೆಂಟ್ (Rural Development) ಟ್ರಸ್ಟ್ ನ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಕಲ್ಯಾಣ ಕರ್ನಾಟಕದ (Kalyana Karnataka) ಬಳ್ಳಾರಿಯಲ್ಲಿ (Ballari) 2023-24 ನೇ ಶೈಕ್ಷಣಿಕ ವರ್ಷದಿಂದ ಕಿಷ್ಕಿಂದ ವಿಶ್ವವಿದ್ಯಾಲಯ (Kishkinda University) ಪ್ರಾರಂಭಿಸಲಾಗುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ್ ಹೇಳಿದರು.

ನಗರದ ಖಾಸಗಿ ಬಿಬಿಸಿ ಕಾಲೇಜಿನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಈ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಡಾ. ಯಶವಂತ್ ಭೂಪಾಲ್ ಅವರನ್ನು ನೇಮಕ ಮಾಡಲಾಗಿದೆ. ಬಳ್ಳಾರಿಯ ಸಿರುಗುಪ್ಪ ರಸ್ತೆಯ ಸಿಂಧಗೇರಿ ಗ್ರಾಮದ ಬಳಿ ಐವತ್ತು ಎಕರೆ ವಿಸ್ತಿರ್ಣದಲ್ಲಿ ನೂರು ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಯುನಿವರ್ಸಿಟಿ ಕ್ಯಾಂಪಸ್ ನಿರ್ಮಾಣ ಮಾಡಲಾಗುವುದು.

ಇದನ್ನೂ ಓದಿ: Arecanut Price : ಭೂತಾನ್‌ನಿಂದ 17 ಸಾವಿರ ಟನ್‌ ಅಡಿಕೆ ಆಮದು; ಬೆಲೆಗೆ ಪೆಟ್ಟು, ಬೆಳೆಗಾರರಿಗೆ ಇಕ್ಕಟ್ಟು

ಕಟ್ಟಡ, ಪ್ರಯೋಗಾಲಯ, ಆಡಳಿತ ಭವನ, ಗ್ರಂಥಾಲಯ, ವಸತಿ ಸೌಕರ್ಯ, ಆಟದ‌ ಮೈದಾನ‌ ಹಾಗೂ ಇತರೆ ಸೌಕರ್ಯಗಳನ್ನು ನಿರ್ಮಿಸಲಾಗುವುದು. ಈಗ ತಾತ್ಕಾಲಿಕವಾಗಿ ಕಿಷ್ಕಿಂದ ವಿಶ್ವವಿದ್ಯಾಲಯವನ್ನು ಎರಡು ವರ್ಷದವರೆಗೆ ಬಿಐಟಿಎಂ ಮತ್ತು ಬಿಬಿಸಿ ಕಾಲೇಜಿನಲ್ಲಿ ನಡೆಸಲು ಸರ್ಕಾರ ಅನುಮತಿ ‌ನೀಡಲಾಗಿದೆ ಎಂದು ತಿಳಿಸಿದರು.

ಈ ವರ್ಷದಿಂದ ಎಂಜನಿಯರಿಂಗ್ ಮತ್ತು ಟೆಕ್ನಾಲಜಿ ಸ್ಟ್ರೀಮ್‌ನಿಂದ ನಾಲ್ಕು ವರ್ಷದ ಪದವಿ ಕೋರ್ಸ್‌ಗಳಾದ ಬಿಟೆಕ್ ಕಂಪ್ಯೂಟರ್ ಸೈನ್ಸ್ ಎಂಜನಿಯರಿಂಗ್, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್ಸ್ , ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜನಿಯರಿಂಗ್ ಹಾಗೂ ಮೂರು ವರ್ಷದ ಪದವಿ ಬಿಸಿಎ ಮತ್ತು ಸ್ನಾತಕೋತ್ತರ ಪದವಿಗಳಾದ ಎಂಬಿಎ, ಎಂಸಿಎ ಕೋರ್ಸುಗಳನ್ನು ಪ್ರಾರಂಭಿಸಲು ಅನುಮೋದನೆ ದೊರೆತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Pro Kabaddi: ಮತ್ತೆ ಬೆಂಗಳೂರು ಬುಲ್ಸ್​ ಸೇರಲಿದ್ದಾರೆ ಪವನ್ ಸೆಹ್ರಾವತ್​!

40% ಸಿಇಟಿ, 15% ಮ್ಯಾನೆಜ್‌ಮೆಂಟ್‌ ಹಾಗೂ 45% ವಿಶ್ವವಿದ್ಯಾಲಯದ ಅರ್ಹತಾ ಪರೀಕ್ಷೆ ‌ಮೂಲಕ ಸೀಟ್‌ಗಳನ್ನು ನೀಡಲಾಗುವುದು. ಕರ್ನಾಟಕ ಸಿಇಟಿ ಮುಖಾಂತರ ಭರ್ತಿ ಮಾಡಲು ಸಿಇಟಿ ಕೌನ್ಸಲಿಂಗ್ ಕೋಡ್ ಇ_301 ನೀಡಲಾಗಿದೆ ಎಂದು ‌ಹೇಳಿದರು‌.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಪೃಥ್ವಿರಾಜ್ ಭೂಪಾಲ್, ಡಾ.ಯಶವಂತ್ ಭೂಪಾಲ್, ಡಾ. ಬಿ.ಜೆ. ಭರತ್ ಹಾಗೂ ಇತರರಿದ್ದರು.

Exit mobile version