ಕಂಪ್ಲಿ: ಎರಡು ಕರಡಿಗಳು ಪ್ರತ್ಯಕ್ಷವಾದ ಘಟನೆ ತಾಲೂಕಿನ ದೇವಸಮುದ್ರ ಗ್ರಾಮದ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಮಂಗಳವಾರ ಬೆಳಗ್ಗೆ (Ballari News) ನಡೆದಿದೆ.
ಗ್ರಾಮದ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಗ್ರಾಮಕ್ಕೆ ಮರಳಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎರಡು ಕರಡಿಗಳು ಗ್ರಾಮದಲ್ಲೂ ಕಾಣಿಸಿಕೊಂಡಿವೆ.
ಇದನ್ನೂ ಓದಿ: Gold Rate Today: ಆಭರಣ ಖರೀದಿಸುವವರಿಗೆ ಗುಡ್‌ನ್ಯೂಸ್; ಮತ್ತೆ ಇಳಿದ ಚಿನ್ನದ ದರ
ಗ್ರಾಮಸ್ಥರು ಕೂಗಾಡುತ್ತ ಗಲಾಟೆ ಮಾಡಿದ್ದರಿಂದ ಒಂದು ದೇವಸಮುದ್ರ- ಕಂಪ್ಲಿ ಸಂಪರ್ಕಿಸುವ ಕ್ರಾಸ್ ಕಡೆ ಓಡಿ ಹೋದರೆ. ಮತ್ತೊಂದು ಕರಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ತುರಮಂದಿ ಬಸವೇಶ್ವರ ದೇವಸ್ಥಾನದ ಕಡೆಗೆ ಓಡಿ ಹೋಗಿದೆ. ಗ್ರಾಮದಲ್ಲಿ ಕರಡಿ ಕಂಡಂತಹ ಕೆಲ ಜನರು ದಿಕ್ಕಾಪಲಾಗಿ ಓಡಿ ಹೋದರೆ ಇನ್ನು ಕೆಲ ಜನರ ಗುಂಪು ಅಲ್ಲಿಂದ ಚದುರಿಸಲು ಪ್ರಯತ್ನಿಸಿದಾಗ ಗ್ರಾಮದ ಹೊರ ವಲಯದ ಗೋದಾಮು ಬಳಿ ಬೇಲಿಯಲ್ಲಿ ಅವಿತು ಕುಳಿತಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ಗ್ರಾಮಕ್ಕೆ ಆಗಮಿಸಿ ಕರಡಿ ಸೆರೆಗೆ ಬೋನ್ ಅಳವಡಿಸಿದ್ದಾರೆ.
ಇದನ್ನೂ ಓದಿ: Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್ ರಿಲೀಸ್!
ಹೊಸಪೇಟೆ ವಲಯ ಅರಣ್ಯ ಅಧಿಕಾರಿ ಭರತ್ ರಾಜ್ ತಂಡದವರು ಕರಡಿ ಸೆರೆಗಾಗಿ ಸದ್ಯ ಕಾರ್ಯಾಚರಣೆ ಮುಂದುವರಿಸಿದ್ದಾರೆ.