ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ವಿಶ್ವಕ್ಕೆ ಪರಿಚಯಿಸುವಂತಹ ಕದಂಬೋತ್ಸವ (Banavasi Kadambhotsava) ಸ್ತಬ್ಧ ಚಿತ್ರ ಮೆರವಣಿಗೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಚಾಲನೆ ನೀಡಿದರು.
ಶಾಲಾ ವಿದ್ಯಾರ್ಥಿಗಳಿಂದ ಕುಂಭ ಮೇಳ ಹಾಗೂ ಭಾರತ ಸೇವದಳ, ಸ್ಕೌಟ್ಸ್ ಮತ್ತು ಗೈಡ್ ಸಮ ವಸ್ತ್ರದೊಂದಿಗೆ ಆಕರ್ಷಕ ಪಥ ಸಂಚಲನ, ವಿವಿಧ ಸರ್ಕಾರದ ಇಲಾಖೆಗಳಿಂದ ಅತ್ಯಾಕರ್ಷಕ ಸ್ತಬ್ಧ ಚಿತ್ರಗಳು, ವಾದ್ಯ ತಂಡಗಳೊಂದಿಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯು ಮಧುಕೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡು ಕದಂಬ ವೃತ್ತದ ಮೂಲಕ ಸಾಗಿ ಕದಂಬೋತ್ಸವ ಮೈದಾನದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ರಾಜ ಮಹಾರಾಜರ ವೇಷಭೂಷಣಗಳು, ಸಿದ್ದರ ಕುಣಿತ, ಗೌಳಿ ಕುಣಿತ, ವೀರಗಾಸೆ, ಲಮಾಣಿ ನೃತ್ಯ, ಕಲಾಮೇಳ, ರಾಧೆ ಕೃಷ್ಣರ ವೇಷ, ತೆಕ್ಕೆ ಕುಣಿತ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಗೆ ಭವ್ಯ ಆಕರ್ಷಣೆ ನೀಡಿದವು.
ಇದನ್ನೂ ಓದಿ: ಎನ್ಐಎ ಹೇಳಿದ್ದ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ಬಂಧಿಸಿದ ಇಂದೋರ್ ಪೊಲೀಸರು; ವಿಚಾರಣೆ ನಡೆಸಿದ ಮಹಾರಾಷ್ಟ್ರ ಎಟಿಎಸ್
ಜಾನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ವಸಂತ ಕುಮಾರ ಆರ್ ಅವರ ಪುರವಂತಿಕೆ, ಶಿವಮ್ಮ ಎಚ್.ಇ. ಅವರ ಸೋಮನ ಕುಣಿತ, ಮಾರುತಿ ಭಜಂತಿ ಅವರ ಪಂಚವಾದ್ಯ, ಚಂದ್ರಶೇಖರ ಆಗೇರ ಅವರ ಗಾರುಡಿ ಕುಣಿತ, ರಘು ಸಾಂಬ್ರೇಕರ ಅವರ ಹಿಂದಯಸ್ಥಾನ್ ಡೋಲ್ ತಾಸ್, ಮಂಗೇಶ ಗವಚಡ ಅಂಕೋಲಾ ತಂಡದ ಮರಕಾಲು ಕುಣಿತ, ರಾಘವೇಂದ್ರ ನಾಯ್ಕ ಭಟ್ಕಳ ತಮನಡದ ಸದಸ್ಯರಿಂದ ಚಂಡೆ ವಾದ್ಯ, ಹೆಗ್ಗರಣಿ ಯುವತಿ ಮಂಡಳದ ಸದಸ್ಯೆಯರಿಂದ ಡೊಳ್ಳು ಕುಣಿತ, ನಿಖಿಲ್ ನಾಯ್ಕ ಅವರಿಂದ ಮರಕಾಲು ಕುಣಿತ, ದೀಪಾ ಸಿದ್ದಿ ಅವರಿಂದ ಸಿದ್ದಿ ಕುಣಿತ, ಕೃಷ್ಣ ಭಂಡಾರಿ ಕುಮಟಾ ಸುಗ್ಗಿ ಕುಣಿತ, ಬಸವೇಶ್ವರ ಡೊಳ್ಳಿನ ಮೇಳ, ನಾಗಪ್ಪ ಗೊಂಡ ಢಕ್ಕೆ ಕುಣಿತ, ಆನಂದ ಜೋಗಿ ಕೀಲು ಕುದುರೆ, ಫಕೀರಪ್ಪ ಭಜಂತಿ ಅವರಿಂದ ವಾದ್ಯ ನಡೆಯಿತು.
ಇದನ್ನೂ ಓದಿ: Viral News: ಉದ್ಯೋಗಿಯ ಹುಟ್ಟುಹಬ್ಬವನ್ನು ಖಾಸಗಿ ಜೆಟ್‌ನಲ್ಲಿ ಆಚರಿಸಿದ ಅನಂತ್ ಅಂಬಾನಿ!