ಬನವಾಸಿ: ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಮೈಸೂರು ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ ಹೇಳಿದರು.
ಇಲ್ಲಿಯ ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಶ್ರೀ ಜಯಂತಿ ಪ್ರೌಢಶಾಲೆ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ (ಜ.೬) ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ನಮಗಾಗಿ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕಾಗಿ ನಾವು-ನೀವು ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಗ್ರಾಮೀಣ ಭಾಗದ ಮಕ್ಕಳು ಐಎಎಸ್, ಕೆಎಎಸ್‌ನಂತಹ ಪರೀಕ್ಷೆಗಳಲ್ಲಿ ಪಾಸಾಗಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ಈ ಶಾಲೆಯಲ್ಲಿ ಕಲಿತ ಮಕ್ಕಳು ಸಾಧಕರ ಸಾಲಿನಲ್ಲಿ ನಿಲ್ಲಬೇಕು. ಸಮಾಜವೂ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಶಿಕ್ಷಣ ಅತ್ಯಗತ್ಯ. ಪ್ರತಿಯೊಬ್ಬರೂ ಒಗ್ಗಟ್ಟಾಗಿ ಒಂದಾಗಿ ಮಕ್ಕಳ ಶಿಕ್ಷಣದ ಅಭಿವೃದ್ಧಿಗೋಸ್ಕರ ಶ್ರಮಿಸೋಣ ಎಂದರು.
ಇದನ್ನೂ ಓದಿ | Ram Mandir | ದ್ವೇಷದ ನೆಲದ ಮೇಲೆ ರಾಮ ಮಂದಿರ ನಿರ್ಮಾಣ: ಆರ್‌ಜೆಡಿ ನಾಯಕ
ಮುಖ್ಯ ಅತಿಥಿಯಾದ ನಿವೃತ್ತ ಉಪನ್ಯಾಸಕಿ ವಿಜಯ ನಳಿನಿ ರಮೇಶ ಮಾತನಾಡಿ, ವಿದ್ಯಾರ್ಥಿಗಳು ಸಮಾಜದ ಕಣ್ಣುಗಳಾಗಿದ್ದಾರೆ. ನಾವೆಲ್ಲರೂ ಕನ್ನಡ ಮಾಧ್ಯಮದ ಶಾಲೆಯ ಬಗ್ಗೆ ಕೀಳರಿಮೆಯನ್ನು ಬಿಡಬೇಕು. ಶ್ರೀಮಂತಿಕೆಯಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಪೋಷಕರು ಮಕ್ಕಳ ಬಗ್ಗೆ ಗಮನಹರಿಸುತ್ತಾ ಅವರ ಭಾವನೆಗೆ ಒತ್ತು ನೀಡುವುದರ ಜತೆಗೆ ಉತ್ತಮ ಸಂಸ್ಕಾರದ ಪಾಠ ಕಲಿಸಬೇಕು ಎಂದರು.
ಇದನ್ನೂ ಓದಿ | DK Shivakumar | ಡಿಕೆಶಿಗೆ ನೋಟಿಸ್ ಕೊಟ್ಟಿದ್ದಕ್ಕೆ ಐಟಿ ಕಚೇರಿ ಎದುರು ಪ್ರತಿಭಟನೆ: ಕಾಂಗ್ರೆಸ್ ನಾಯಕರಿಗೆ ನೋಟಿಸ್!
ಡಾ. ಪ್ರಮೋದ ನರಬೋಲಿ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ, ಪ್ರಧಾನ ಕಾರ್ಯದರ್ಶಿ ಶಿವಯೋಗಿ ಉಳ್ಳಾಗಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮಕ್ಕಳ ಅನುಕೂಲಕ್ಕಾಗಿ ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಹಳೆಯ ವಿದ್ಯಾರ್ಥಿ ಡಾ. ಪ್ರಮೋದ ನರಬೋಲಿ 5 ಲಕ್ಷ ರೂ. ಹಾಗೂ ಮೈಸೂರು ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ ಅವರು ಶಾಲೆಗೆ ಒಂದು ಕೊಠಡಿಯನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಮಕ್ಕಳಿಂದ ಆಕರ್ಷಕ ಮನೋರಂಜನಾ ಕಾರ್ಯಕ್ರಮಗಳು ಜರುಗಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪದಕಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ರಾಜಶೇಖರ ಗೌಡ್ರು, ಮೃತ್ಯುಂಜಯ ಚೌದರಿ, ಸದಸ್ಯರಾದ ಎನ್.ಜಿ.ರಾಯ್ಸದ್, ಇಂದೂಧರ ಗೌಡ, ಗಜಾನನ ಗೌಡ, ಕೆ.ಪಿ.ಕಾನಳ್ಳಿ ಇದ್ದರು. ಶಿಕ್ಷಕಿ ಅಶ್ವಿನಿ ಶೇಟ್ ನಿರೂಪಿಸಿದರು. ಮುಖ್ಯೋಪಾಧ್ಯಾಯ ಪುಟ್ಟಸ್ವಾಮಿ ಸ್ವಾಗತಿಸಿದರು. ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯನಿ ರೇಷ್ಮಾ ಸುಣಗಾರ, ವಿದ್ಯಾ ಮುರುಡೇಶ್ವರ ವರದಿ ವಾಚನ ಮಾಡಿದರು. ದೈಹಿಕ ಶಿಕ್ಷಕ ಪ್ರಸನ್ನ ಗುಣಗಾ ವಂದಿಸಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶಿವಶರಣರು ಹೊಸ ಧರ್ಮ ಸ್ಥಾಪಿಸಿದರು ಎನ್ನುವುದು ತಲೆಬುಡವಿಲ್ಲದ ವಾದ: ಡಾ. ಸಂಗಮೇಶ ಸವದತ್ತಿಮಠ ಆಕ್ರೋಶ