ಬೆಂಗಳೂರು: ಕಾವೇರಿ ನೀರಿನಲ್ಲಾದ ಅನ್ಯಾಯ ಪ್ರತಿಭಟಿಸಿ ಹಲವು ಸಂಘಟನೆಗಳು ನೀಡಿರುವ ಬೆಂಗಳೂರು ಬಂದ್‌ಗೆ (Bangalore bandh) ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಹ್ಮದ್ ಹುಸೇನ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ತಿಳಿಸಿದ್ದಾರೆ.
ಕಾವೇರುತ್ತಿರುವ ಕಾವೇರಿ ಕಿಚ್ಚು; ಇಂದು ಮಳವಳ್ಳಿ, ಕೆ.ಆರ್.ಪೇಟೆ ಬಂದ್
ಕಾವೇರಿ ನೀರು ಬಿಡುಗಡೆ (Cauvery water dispute) ವಿಚಾರವಾಗಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕಾವೇರುತ್ತಿದೆ. ಸೆ.26 ರಂದು ಮಳವಳ್ಳಿ ಪಟ್ಟಣಕ್ಕೆ ಬಂದ್‌ಗೆ ಕರೆ ನೀಡಲಾಗಿದ್ದು, ಎಲ್ಲವೂ ಸ್ತಬ್ಧವಾಗಿವೆ. ಇತ್ತ ಕೆ.ಆರ್.ಪೇಟೆ ಬಂದ್ ಮಾಡಲಾಗಿದೆ.
Malavalli bandh : ಕಾವೇರುತ್ತಿರುವ ಕಾವೇರಿ ಕಿಚ್ಚು; ಇಂದು ಮಳವಳ್ಳಿ, ಕೆ.ಆರ್.ಪೇಟೆ ಬಂದ್
ಪ್ರತಿಭಟನಾಕಾರನಿಂದ ಆತ್ಮಹತ್ಯೆ ಯತ್ನ
ಬೆಂಗಳೂರು: ಫ್ರೀಡಂ ಪಾರ್ಕ್ ಬಳಿ ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟಕಾರರೊಬ್ಬರು ಆತ್ಮಹತ್ಯೆ ಗೆ ಯತ್ನಿಸಿದ್ದು, ಕೂಡಲೇ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಧರಿಸಿದ್ದ ಹಸಿರು ಶಾಲುವಿನಿಂದಲೇ ಮರಕ್ಕೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅವರನ್ನು ಪೊಲೀಸರು ಬಂಧಿಸಿದರು.
ಉತ್ತರ ಕರ್ನಾಟಕದಲ್ಲಿ ಮಳೆ ಚುರುಕು; ಬೆಂಗಳೂರಲ್ಲಿ ಹೇಗೆ?
ಉತ್ತರ ಒಳನಾಡಿನ ಹಲವು ಕಡೆ ಭಾರಿ ಮಳೆಯಾಗುವ (Rain News) ಮುನ್ಸೂಚನೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಲಘುವಾಗಿ, ಬೆಂಗಳೂರಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆ (Weather report) ಸುರಿಯಲಿದೆ. ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
Weather Report : ಉತ್ತರ ಕರ್ನಾಟಕದಲ್ಲಿ ಮಳೆ ಚುರುಕು; ಬೆಂಗಳೂರಲ್ಲಿ ಹೇಗೆ?
ಟೌನ್ಹಾಲ್ನತ್ತ ಹೊರಟ ರ್ಯಾಲಿ
ಬೆಂಗಳೂರು: ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರೆದ ವಾಹನದಲ್ಲಿ ಟೌನ್ಹಾಲ್ನತ್ತ ರ್ಯಾಲಿ ಹೊರಟಿದ್ದಾರೆ. ಕನ್ನಡ ಪ್ರಕಾಶ್ ನೇತೃತ್ವದಲ್ಲಿ ರ್ಯಾಲಿ ನಡೆಯುತ್ತಿದೆ.
ಬಂದ್‌ಗೆ ಪೂರ್ಣ ಬೆಂಬಲ: ಕುಮಾರಸ್ವಾಮಿ
ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್‌ಗೆ ನನ್ನ ಪೂರ್ಣ ಬೆಂಬಲವಿದೆ. ಹೋರಾಟ ಶಾಂತಿಯುತವಾಗಿರಲಿ, ಬಂದ್ ಯಶಸ್ವಿ ಆಗಲಿ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಕೂಡ ಬಂದ್ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.