Site icon Vistara News

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Karnataka bandh Majestic

Karnataka bandh Majestic

ಬೆಂಗಳೂರು: ಕಾವೇರಿ ನೀರಿನಲ್ಲಾದ ಅನ್ಯಾಯ ಪ್ರತಿಭಟಿಸಿ ಹಲವು ಸಂಘಟನೆಗಳು ನೀಡಿರುವ ಬೆಂಗಳೂರು ಬಂದ್‌ಗೆ (Bangalore bandh) ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಕೆಪಿಸಿಸಿ ಪ್ರಧಾನ ‌ಕಾರ್ಯದರ್ಶಿ ಸಯ್ಯದ್‌ ಅಹ್ಮದ್ ಹುಸೇನ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ತಿಳಿಸಿದ್ದಾರೆ.

Harish Kera

ಕುರುಬೂರು ಶಾಂತಕುಮಾರ್‌ ಪೊಲೀಸ್‌ ವಶಕ್ಕೆ

ಬೆಂಗಳೂರು: ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಕುರುಬೂರು ಶಾಂತಕುಮಾರ್ ಅವರನ್ನು ವಶಕ್ಕೆ ಪಡೆದರು. ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕುರುಬೂರು ಶಾಂತಕುಮಾರ್  ಆಕ್ರೋಶ ವ್ಯಕ್ತಪಡಿಸಿದರು.

Harish Kera

ಏರ್‌ಪೋರ್ಟ್‌ನಲ್ಲಿ ಜನಸಂದಣಿ

ದೇವನಹಳ್ಳಿ: ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. 9 ಗಂಟೆ ನಂತರ ಪ್ರತಿಭಟನೆ ಕಾವು ಹೆಚ್ಚಳವಾಗುವ ಹಿನ್ನಲೆಯಲ್ಲಿ ಬೆಳಗ್ಗೆಯೇ ಟ್ಯಾಕ್ಸಿಗಳನ್ನು ಹಿಡಿದು ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದರು.

Harish Kera

ಸರ್ಕಾರಿ ಬಸ್‌ ಸಂಚಾರ ಯಥಾಪ್ರಕಾರ

ಬೆಂಗಳೂರು: ಜನರ ಓಡಾಟ ವಿರಳವಾಗಿದ್ದರೂ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರ ಯಥಾಪ್ರಕಾರ ಮುಂದುವರಿದಿದೆ. ಬೆಂಗಳೂರಿನಿಂ ಕರ್ನಾಟಕದ ವಿವಿಧೆಡೆಗಳಿಗೆ ಹೋಗುವ ಹಾಗೂ ಹೊರರಾಜ್ಯಗಳಿಂದ ಆಗಮಿಸುತ್ತಿರುವ ಬಸ್‌ಗಳು ಸಂಚರಿಸುತ್ತಿವೆ. ಹಾಗೇ ಹೊರರಾಜ್ಯಗಳಿಗೆ ಹೋಗುವ ಬಸ್‌ ಸಂಚಾರದಲ್ಲೂ ವ್ಯತ್ಯಯ ಆಗಿಲ್ಲ. ಆಟೋ ಹಾಗೂ ಮೆಟ್ರೋ ಸೇವೆಗಳಲ್ಲೂ ಬದಲಾವಣೆಯಾಗಿಲ್ಲ.

Harish Kera

ಕೆ ಆರ್ ಮಾರ್ಕೆಟ್ ನಲ್ಲಿ ಬಂದ್ ಎಫೆಕ್ಟ್

ಕೆ ಆರ್ ಮಾರ್ಕೆಟ್ ನಲ್ಲಿ ಬಂದ್‌ ಕಾರಣ ಜನರ ಸಂಖ್ಯೆ ವಿರಳವಾಗಿದೆ. ನಿನ್ನೆ ಬಂದ ಲೋಡುಗಳನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದು, ಜನರೇ ಇಲ್ಲದ ಕಾರಣ 8 ಗಂಟೆವರೆಗೆ ವ್ಯಾಪಾರ ಮಾಡಿ, ಸಂಪೂರ್ಣ ಬಂದ್ ಮಾಡಲಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. 10 ಗಂಟೆಗೆ ಕೆ‌ಆರ್ ಮಾರ್ಕೆಟ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ್ಯಾಲಿ ಸಾಧ್ಯತೆ ಇದೆ.

Harish Kera

ಬೆಂಗಳೂರು ವಿವಿ ರಸ್ತೆಯಲ್ಲಿ ಬಸ್‌ ತಡೆ ಯತ್ನ, ಪೊಲೀಸರಿಂದ ತಡೆ

ಬೆಂಗಳೂರು ವಿಶ್ವವಿದ್ಯಾಲಯದ ರಸ್ತೆಯಲ್ಲಿ ರಸ್ತೆ ತಡೆ ಮಾಡಲು ಪ್ರಯತ್ನಿಸಿದ ಹೋರಾಟಗಾರರನ್ನು ಪೊಲೀಸರು ತಡೆದರು. ಬಿಎಂಟಿಸಿ ಬಸ್ ತಡೆದ ಕನ್ನಡ ಹೋರಾಟಗಾರರು ರಸ್ತೆ ತಡೆ ಮಾಡಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

Exit mobile version