Site icon Vistara News

Bangalore Hotels: ಹೋಟೆಲ್‌ಗಳಲ್ಲಿ ಗಂಟೆಗಟ್ಟಲೇ ಕೂರಂಗಿಲ್ಲ; ಟೈಮ್‌ಪಾಸ್‌ ಮಾಡೋರಿಗೆ ಬೀಳಲಿದೆ ಕಡಿವಾಣ

Hotel

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಂತಹ ಮಹಾನಗರದಲ್ಲಿ ಮನೆಯೂಟಕ್ಕಿಂತ ಹೋಟೆಲ್‌ ಊಟವನ್ನೇ ನಂಬಿಕೊಂಡವರೇ ಜಾಸ್ತಿ. ಈ ನಿಟ್ಟಿನಲ್ಲಿ ಹೋಟೆಲ್‌ ಮಾಲೀಕರೂ ಸಹ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದಾರೆ. ಆದರೆ, ಹೋಟೆಲ್ & ರೆಸ್ಟೋರೆಂಟ್‌‌ಗಳಲ್ಲಿ (Bangalore Hotels) ಅನವಶ್ಯಕ ಕಾಲಹರಣ ಮಾಡುವ ಕೆಲ ಗ್ರಾಹಕರಿಂದ ಹೋಟೆಲ್‌ ಮಾಲೀಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಹೋಟೆಲ್‌ ಮಾಲೀಕರ ಸಂಘ ನಿರ್ಧರಿಸಿದೆ.

ಹೌದು, ಕೋಟ್ಯಂತರ ಮಂದಿಗೆ ಜೀವನ ನೀಡಿರುವ ಬೆಂಗಳೂರಿನಲ್ಲಿ ಹೋಟೆಲ್‌‌ ಊಟವನ್ನು ನಂಬಿಕೊಂಡವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಅದೇ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಹೋಟೆಲ್‌ಗಳೂ ತಲೆ ಎತ್ತಿದ್ದು, ಕಾಫಿ, ತಿಂಡಿ, ಊಟ ಸೇರಿದಂತೆ ಹಲವು ರೀತಿಯ ಆಹಾರ ಪದಾರ್ಥಗಳನ್ನು ಪೂರೈಸುತ್ತಿವೆ. ಆದರೆ, ಕೆಲ ಗ್ರಾಹಕರು ಹೋಟೆಲ್‌‌ಗಳಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡುತ್ತಿರುವುದು ಸಮಸ್ಯೆಯಾಗಿದೆ.

ತಿಂಡಿ, ಊಟ ಮಾಡಲು ಹೋಟೆಲ್‌ಗಳಿಗೆ ಭೇಟಿ ನೀಡುವ ಕೆಲ ಗ್ರಾಹಕರು, ವ್ಯವಹಾರ, ರಿಯಲ್‌ ಎಸ್ಟೇಟ್‌‌, ಮದುವೆ ಕುರಿತ ಮಾತುಕತೆಗಳಲ್ಲಿ ನಿರತರಾಗುತ್ತಾರೆ. ಊಟ ಮಾಡುವುದಕ್ಕಿಂತಲೂ ಚರ್ಚೆಗಳಲ್ಲಿಯೇ ಸಮಯ ಕಳೆಯುವುದರಿಂದ ಇತರೆ ಗ್ರಾಹಕರಿಗೆ ಕುಳಿತು ಊಟ ಮಾಡಲು ಆಗುತ್ತಿಲ್ಲ. ಅದರಲ್ಲಿಯೂ ಕೆಲವೆಡೆ ಕಾಫಿ, ಟೀಗೆ ಬಂದವರೂ ಗಂಟೆಗಟ್ಟಲೆ ಸಮಯ ಕಳೆಯುತ್ತಿರುವುದೂ ಹೆಚ್ಚಾಗುತ್ತಿದೆ. ಹೀಗಾಗಿ ಇಂತಹ ಪ್ರಸಂಗಗಳಿಗೆ ಕಡಿವಾಣ ಹಾಕಲು ಹೋಟೆಲ್‌ ಮಾಲೀಕರ ನಿರ್ಧಾರ ಮಾಡಿದೆ.

ಇದನ್ನೂ ಓದಿ | Money plus : ವಾಹನ ಅಪಘಾತದ ಸಂದರ್ಭ ವಿಮೆ ಪರಿಹಾರ ಕ್ಲೇಮ್‌ ಮಾಡೋದು ಹೇಗೆ?

ಒಂದಷ್ಟು ಬೋರ್ಡ್‌ಗಳನ್ನು ಅಳವಡಿಕೆ ಮಾಡುವುದು, ಅನವಶ್ಯಕ ಮಾತುಕತೆಗಳು ಬೇಡ ಎಂದು ಅರಿವು ಮೂಡಿಸಲು ಸಂಘವು ಮುಂದಾಗಲಿದೆ. ಒಟ್ಟಾರೆ ಇದಕ್ಕೆ ಗ್ರಾಹಕರು ಯಾವ ರೀತಿ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬುವುದನ್ನು ಕಾದುನೋಡಬೇಕಿದೆ.

Exit mobile version