ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ(Bangalore Medical College and Research Institute-BMCRI) ಹಾಸ್ಟೆಲ್‌ನಲ್ಲಿ ಅತಿಸಾರ ಮತ್ತು ನಿರ್ಜಲೀಕರಣದರಿಂದ 47 ವಿದ್ಯಾರ್ಥಿನಿಯರು ಶುಕ್ರವಾರ ಅಸ್ವಸ್ಥಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
47 ವಿದ್ಯಾರ್ಥಿನಿಯರ ಪೈಕಿ 28 ವಿದ್ಯಾರ್ಥಿನಿಯರು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ಮಂದಿ ಎಚ್ ಬ್ಲಾಕ್‌ನಲ್ಲಿ ಹಾಗೂ 4 ವಿದ್ಯಾರ್ಥಿನಿಯರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಸದ್ಯ ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಉತ್ತಮವಾಗಿದೆ. ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬಿಎಂಸಿಆರ್‌ಐ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ತಿಳಿಸಿದ್ದಾರೆ.
ಇದನ್ನೂ ಓದಿ | Murder: ಕಪಾಟಿನಲ್ಲಿತ್ತು ಯುವತಿಯ ಶವ; ಲಿವ್ ಇನ್ ಸಂಬಂಧದಲ್ಲಿದ್ದ ಗೆಳೆಯ ನಾಪತ್ತೆ!
ನೀರಿನಲ್ಲಿ ಕೊಚ್ಚಿ ಹೋದ ತಾಯಿ; ರಕ್ಷಿಸಲು ಹೋದ ಮಕ್ಕಳಿಬ್ಬರು ನೀರುಪಾಲು
ಚಾಮರಾಜನಗರ: ಬಟ್ಟೆ ತೊಳೆಯಲು ಹೋಗಿ ಮೂವರು ನೀರುಪಾಲಾದ (Drowned in water) ಘಟನೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದೂರು ಗ್ರಾಮದ ನಿವಾಸಿ ಮೀನಾ(33), ಪವಿತ್ರ (13), ಕೀರ್ತಿ(12) ಮೃತಪಟ್ಟ ದುರ್ದೈವಿಗಳು.
ಶುಕ್ರವಾರ ಮಧ್ಯಾಹ್ನ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಅವಘಡ ನಡೆದಿದೆ. ಮೀನಾ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ತಾಯಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನ್ನು ಕಂಡ ಮಕ್ಕಳು ಸಹಾಯಕ್ಕೆ ಧಾವಿಸಿದ್ದರು.
ತಾಯಿಯನ್ನು ರಕ್ಷಿಸಲು ತೆರಳಿದ್ದ ಪವಿತ್ರ, ಕೀರ್ತಿ ಇಬ್ಬರು ನೀರಿನ ಸೆಲೆಗೆ ಸಿಲುಕಿದ್ದರು. ಹೊರಬರಲು ಆಗದೇ ತಾಯಿ ಜತೆ ಮಕ್ಕಳಿಬ್ಬರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹನೂರು ತಾಲೂಕಿನ ಗೋಪಿನಾಥಂನಲ್ಲಿ ತಾಯಿ-ಇಬ್ಬರು ಮಕ್ಕಳಿಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.