Site icon Vistara News

Bangalore To Belagavi Train: ಮೇ 6ರಂದು ಬೆಂಗಳೂರು-ಬೆಳಗಾವಿ ವಿಶೇಷ ರೈಲು ಸಂಚಾರ

Bangalore To Belagavi Train

ಹುಬ್ಬಳ್ಳಿ: ಮೇ 6ರಂದು ಬೆಂಗಳೂರಿನಿಂದ ಹುಬ್ಬಳ್ಳಿ- ಧಾರವಾಡ, ಬೆಳಗಾವಿಗೆ ವಿಶೇಷ ರೈಲು (Bangalore To Belagavi Train) ಸಂಚರಿಸಲಿದ್ದು, ಪ್ರಯಾಣಿಕರು ಈ ವಿಶೇಷ ರೈಲಿನ ಸೌಲಭ್ಯ ಪಡೆದುಕೊಳ್ಳಬಹುದು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಸೋಮವಾರ ರಾತ್ರಿ 9.55ಕ್ಕೆ ರೈಲು ನಂ. 07319/07320 ಬೆಂಗಳೂರಿನ ಯಶವಂತಪುರದಿಂದ ಹೊರಟು ತುಮಕೂರು-ಅರಸೀಕೆರೆ-ದಾವಣಗೆರೆ-ಹಾವೇರಿ ಮಾರ್ಗವಾಗಿ ಹುಬ್ಬಳ್ಳಿ-ಧಾರವಾಡಕ್ಕೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ನಂತರ ಗೋಕಾಕ್‌-ಘಟಪ್ರಭಾ-ರಾಯಭಾಗ-ಕುಡಚಿ ಮಾರ್ಗವಾಗಿ ಬೆಳಗ್ಗೆ 7.30ಕ್ಕೆ ಬೆಳಗಾವಿ ತಲುಪಲಿದೆ.

ಮೇ 7ರಂದು ರಾತ್ರಿ 9.10ಕ್ಕೆ ಧಾರವಾಡದಿಂದ 9.55ಕ್ಕೆ ಹುಬ್ಬಳ್ಳಿಯಿಂದ ಮರಳಿ ಬೆಂಗಳೂರಿಗೆ ಹೊರಡಲಿದೆ. ಪ್ರಯಾಣಿಕರು ಈ ವಿಶೇಷ ರೈಲಿನ ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

ಇದನ್ನೂ ಓದಿ | Train Ticket Cancellation: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಆರ್‌ಎಸಿ ಟಿಕೆಟ್‌ ರದ್ದು ಪಡಿಸಿದರೆ ಇನ್ನು ಮುಂದೆ ಕೇವಲ 60 ರೂ. ಕಡಿತ

ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

Mantralaya Tour

ಬೆಂಗಳೂರು: ಮಂತ್ರಾಲಯ ಅತ್ಯಂತ ಪ್ರಸಿದ್ಧ ಯಾತ್ರಾಸ್ಥಳ. ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಯಲ್ಲಿರುವ ತುಂಗಾಭದ್ರಾ ನದಿಯ ದಡದಲ್ಲಿದೆ. ಇಲ್ಲಿಗೆ ಹೋಗಿ ಶ್ರೀ ಗುರುರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಲು ಪ್ರತಿಯೊಬ್ಬರೂ ತವಕಿಸುತ್ತಾರೆ. ನೀವು ಒಂದೇ ದಿನದಲ್ಲೂ ಮಂತ್ರಾಲಯಕ್ಕೆ ಹೋಗಿಬರಲು ಸಾಧ್ಯವಿದೆ. ಆದರೆ ಎಲ್ಲಾ ಟ್ರೈನ್‌ಗಳು ಒಂದೇ ದಿನದಲ್ಲಿ ಮಂತ್ರಾಲಯಕ್ಕೆ (Mantralaya Tour) ಹೋಗಿ ಬರಲು ಅನುಕೂಲಕರವಾಗಿಲ್ಲ. ಹಾಗಾಗಿ ಒಂದೇ ದಿನದಲ್ಲಿ ಮಂತ್ರಾಲಯಕ್ಕೆ ಹೋಗಿ ಬರಲು ಯಾವ ಟ್ರೈನ್ ಸೂಕ್ತ ಎಂಬ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಲು ʼಬಸವ ಎಕ್ಸ್ ಪ್ರೆಸ್ʼ ಬಹಳ ಸೂಕ್ತ. ಇದು ಬೆಂಗಳೂರು ಕೆಂಪೇಗೌಡ ರೈಲು ನಿಲ್ದಾಣದಿಂದ ಸಂಜೆ 4.49ಕ್ಕೆ ಹೊರಟು ಮಧ್ಯರಾತ್ರಿ 12.09ಕ್ಕೆ ಮಂತ್ರಾಲಯಕ್ಕೆ ತಲುಪುತ್ತದೆ.

ನಾಂದೇಡ್ ಎಕ್ಸ್ ಪ್ರೆಸ್ ರೈಲು ರಾತ್ರಿ 11.39ಕ್ಕೆ ಹೊರಟು ಬೆಳಗ್ಗೆ 7.09ಕ್ಕೆ ಮಂತ್ರಾಲಯ ತಲುಪುತ್ತದೆ.

ಕರ್ನಾಟಕ ಎಕ್ಸ್ ಪ್ರೆಸ್  ಟ್ರೈನ್ ಕೆಂಪೇಗೌಡ ರೈಲು ನಿಲ್ದಾಣದಿಂದ ಸಂಜೆ 7.20ಕ್ಕೆ ಹೊರಟು ಬೆಳಗಿನ ಜಾವ 2.24ರ ಹೊತ್ತಿಗೆ ಮಂತ್ರಾಲಯ ತಲುಪಲಿದೆ.

ಲಾತೂರ್ ಎಕ್ಸ್ ಪ್ರೆಸ್ ಟ್ರೈನ್ ಯಶವಂತಪುರ ಟ್ರೈನ್ ಸ್ಟೇಷನ್ ನಿಂದ ಸಂಜೆ 7.15ಕ್ಕೆ ಹೊರಟು ಬೆಳಗಿನ ಜಾವ 1.20ಕ್ಕೆ ಮಂತ್ರಾಲಯ ತಲುಪಲಿದೆ.

ಎಲ್ಲೆಲ್ಲಿ ಹೋಗಬಹುದು?

ಈ ಎಲ್ಲಾ ಟ್ರೈನ್ ಗಳು ಮಂತ್ರಾಲಯ ರೋಡ್ ರೈಲ್ವೇ ಸ್ಟೇಷನ್ ತಲುಪುತ್ತದೆ. ಅಲ್ಲಿಂದ ಮಂತ್ರಾಲಯ ಮಠಕ್ಕೆ 15 ಕಿ.ಮೀ ದೂರವಿದೆ. ಹಾಗಾಗಿ ನೀವು  ರೈಲ್ವೇ ಸ್ಟೇಷನ್ ನಿಂದ ಆಟೋ, ಕ್ಯಾಬ್ ಮಾಡಿಕೊಂಡು ಮಂತ್ರಾಲಯದ ಮಠಕ್ಕೆ ತಲುಪಬಹುದು. ಹಾಗೇ ಮಂತ್ರಾಲಯದಲ್ಲಿ ನಿಮಗೆ ವಿಶ್ರಾಂತಿ ಪಡೆಯಲು ರೂಂಗಳ ವ್ಯವಸ್ಥೆ ಇದೆ. ಹಾಗಾಗಿ ನೀವು ರೂಂ ಬುಕ್ ಮಾಡಿ ಅಲ್ಲಿ ಸ್ನಾನಾದಿಗಳನ್ನು ಮುಗಿಸಿ ನಂತರ ರಾಯರ ದರ್ಶನ ಪಡೆಯಬಹುದು. ಅಲ್ಲಿ ರಾಯರ ಬೃಂದಾವನ ದರ್ಶನ ಮಾಡಿ. ಮಂತ್ರಾಲಯದಿಂದ ಸ್ವಲ್ಪ ದೂರದಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಬಹುದು.

ವಾಪಸ್‌ ಬರಲು ಯಾವ ರೈಲು?:

ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿದ ಬಳಿಕ ವಾಪಸ್ ಬೆಂಗಳೂರು ತಲುಪಲು ಮಂತ್ರಾಲಯದಿಂದ ಟ್ರೈನ್ ವ್ಯವಸ್ಥೆ ಇದೆ. ನಾಂದೇಡ್ ಎಕ್ಸ್ ಪ್ರೆಸ್ ರೈಲು ರಾತ್ರಿ 8.45ಕ್ಕೆ ಮಂತ್ರಾಲಯದಿಂದ ಹೊರಟು ಬೆಳಗ್ಗೆ 4 ಗಂಟೆಗೆ ಕೆಂಪೇಗೌಡ ರೈಲು ನಿಲ್ದಾಣವನ್ನು ತಲುಪಲಿದೆ. ಅಲ್ಲದೇ ಉದ್ಯಾನ ಎಕ್ಸ್ ಪ್ರೆಸ್ ರಾತ್ರಿ 8.45ಕ್ಕೆ ಮಂತ್ರಾಲಯ ರೈಲ್ವೇ ಸ್ಟೇಷನ್ ನಿಂದ ಹೊರಟು ಬೆಳಗ್ಗೆ 6 ಗಂಟೆಗೆ ಕೆಂಪೇಗೌಡ ರೈಲು ನಿಲ್ದಾಣ ತಲುಪುತ್ತದೆ.

ಇದನ್ನೂ ಓದಿ:

ಹಾಗಾಗಿ ನೀವು ಈ ರೈಲುಗಳ ಮೂಲಕ ಒಂದೇ ದಿನದಲ್ಲಿ ಮಂತ್ರಾಲಯಕ್ಕೆ ಪ್ರಯಾಣ ಮಾಡಬಹುದು. ರಜಾ ದಿನಗಳಲ್ಲಿ ನಿಮ್ಮ ಕುಟುಂಬದವರು, ಸ್ನೇಹಿತರ ಜೊತೆಯಲ್ಲಿ ಮಂತ್ರಾಲಯದ ರಾಯರ ದರ್ಶನ ಪಡೆಯಬಹುದು.

Exit mobile version