Site icon Vistara News

Bangalore University : ನಾಳೆ ಬೆಂಗಳೂರು ವಿವಿ ಬಂದ್‌! ತರಗತಿ ಬಾಯ್ಕಾಟ್‌

Bangalore University Students Strike

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ (Bangalore University) ಜ್ಞಾನಭಾರತಿ ಆವರಣದಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ವಿವಿ ಬಂದ್‌ಗೆ (Student Strike) ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ಕರೆ ನೀಡಿದೆ. ಹೀಗಾಗಿ ಜು.11ರಂದು ಬೆಂಗಳೂರು ವಿಶ್ವವಿದ್ಯಾಲಯವು ಸಂಪೂರ್ಣ ಸ್ತಬ್ಧ ಆಗುವ ಸಾಧ್ಯತೆ ಇದೆ.

ಬೆಂಗಳೂರು ವಿವಿಗೆ ನ್ಯಾಕ್ ಎ ಡಬಲ್ ಪ್ಲಸ್ (A++) ಬಂದಿದೆ. ವಿದ್ಯಾರ್ಥಿಗಳ ಹಿತ ರಕ್ಷಣೆ ಕಾಯಬೇಕಾಗಿರುವ ಬೆಂಗಳೂರು ವಿವಿ ಆಡಳಿತ ವಿಭಾಗ ಉದ್ದೇಶಪೂರ್ವಕವಾಗಿ ಮೂಲಭೂತ ಸೌಲಭ್ಯಗಳನ್ನು ತಡೆಯುತ್ತಿದೆ ಎನ್ನಲಾಗುತ್ತಿದೆ. ಬೇಡಿಕೆಗಳ ಪಟ್ಟಿಯನ್ನು ಆಡಳಿತ ಮಂಡಳಿಯವರಿಗೆ ಸಲ್ಲಿಸುತ್ತಾ ಬಂದರೂ ಅದಕ್ಕೂ ವಿವಿಯ ಅಧಿಕಾರಿಗಳಿಗೂ ಸಂಬಂಧವಿಲ್ಲದ ರೀತಿಯಲ್ಲಿ ನಡೆದುಕೊಂಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಮೂಲ ಕಾರಣವಾಗಿದೆ.

ಹೀಗಾಗಿ ವಿವಿಯ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳನ್ನು ಈ ಕೂಡಲೇ ನೀಡಬೇಕೆಂದು ವಿವಿಗೆ ಸೂಚಿಸಲು ಉನ್ನತ ಶಿಕ್ಷಣ ಇಲಾಖೆಗೆ ಆಗ್ರಹಿಸಿ ಮಂಗಳವಾರದಂದು ( ಜು.11) ವಿವಿ ಬಂದ್‌ಗೆ ಕರೆ ನೀಡಲಾಗಿದೆ. ತರಗತಿಗಳಿಗೆ ಹಾಜರಾಗದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Gelatin Sticks : ಕಟ್ಟಡ ಕಾಮಗಾರಿಯಲ್ಲಿ ಜಿಲೆಟಿನ್‌ ಸ್ಫೋಟ; ಮೂವರು ಕಾರ್ಮಿಕರು ಗಂಭೀರ

ಬೆಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳ ಪಟ್ಟಿಯನ್ನು ಮಾಡಿದ್ದಾರೆ. ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳು, ಹಾಸ್ಟೆಲ್ ವ್ಯವಸ್ಥೆ, ಸ್ಮಾರ್ಟ್‌ ಕ್ಲಾಸ್‌, ಗುಣಮಟ್ಟದ ಶೌಚಾಲಯಗಳು, ಕಂಪ್ಯೂಟರ್‌ ಕ್ಲಾಸ್‌, ಕ್ಯಾಂಟಿನ್‌ ವ್ಯವಸ್ಥೆ, ಲ್ಯಾಬ್‌ ಸೇರಿ ಸುಸಜ್ಜಿತ ಹೊರ ಕ್ರೀಡಾಂಗಣ ಹಾಗೂ ಒಳ ಕ್ರೀಡಾಂಗಣ ವ್ಯವಸ್ಥೆ ಮತ್ತು ಕ್ರೀಡೊಪಕರಣಗಳು ಉತ್ತಮ ದೈಹಿಕ ವ್ಯಾಯಾಮ ಶಾಲೆ ಬೇಕೆಂದು ಆಗ್ರಹಿಸಿದ್ದಾರೆ.

ಇನ್ನೂ ಹಲವಾರು ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ಮಾಡದೆ ವಿದ್ಯಾರ್ಥಿಳನ್ನು ದಿಕ್ಕು ತಪ್ಪಸುವ ಹಾಗೂ ವಿದ್ಯಾರ್ಥಿ ಸಮೂಹನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಮೋಸ ಮಾಡುತ್ತಿದೆ. ವಿದ್ಯಾರ್ಥಿಗಳ ಮನವಿಗೆ ಆಡಳಿತಾಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version