Site icon Vistara News

Bannerghatta National Park: ಇಸ್ರೇಲ್‌ನಿಂದ ತಂದಿದ್ದ ಎರಡು ಝೀಬ್ರಾ ಈಗ ಮೂರಾದವು; ಬನ್ನೇರುಘಟ್ಟಕ್ಕೆ ಹೊಸ ಅತಿಥಿ ಆಗಮನ

#image_title

ಆನೇಕಲ್: ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ, ತನ್ನ ಮುದ್ದಾದ ಕಣ್ಣಿನ ನೋಟದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ಮರಿ ಝೀಬ್ರಾ ಬನ್ನೇರುಘಟ್ಟ ಜೈವಿಕ ಉದ್ಯಾನವನದ (Bannerghatta National Park) ಹೊಸ ಅತಿಥಿ ಆಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾವೇರಿ ಎಂಬ ಝೀಬ್ರಾವು (zebras) ಮರಿಯೊಂದಕ್ಕೆ ಜನ್ಮ ನೀಡಿದೆ.

2014ರಲ್ಲಿ ಇಸ್ರೇಲ್ ದೇಶದಿಂದ ತನ್ನಿಂದ ಕಾವೇರಿ ಹಾಗೂ ಭರತ್‌ ಹೆಸರಿನ ಝೀಬ್ರಾಗೆ ಮರಿ ಜನಿಸಿದೆ. ಸದ್ಯ ಮರಿ ಝೀಬ್ರಾ ಸೇರ್ಪಡೆಯೊಂದಿಗೆ, ಮೃಗಾಲಯದಲ್ಲಿ ಒಟ್ಟು ಝೀಬ್ರಾಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ತಾಯಿ ಮತ್ತು ಮರಿ ಜೀಬ್ರಾ ಎರಡೂ ಆರೋಗ್ಯಕರವಾಗಿದ್ದು, ಪಾರ್ಕ್‌ಗೆ ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರು ಹೆಚ್ಚಿನ ಆರೈಕೆಯನ್ನು ಮಾಡುತ್ತಿದ್ದಾರೆ.

ಪಾರ್ಕ್‌ನಲ್ಲಿ ತಾಯಿಯೊಂದಿಗೆ ಜೀಬ್ರಾ ಮರಿಯ ತುಂಟಾಟವು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. 12 ವರ್ಷದ ಕಾವೇರಿ ಜೀಬ್ರಾಗೆ ಇದು ಐದನೇ ಮರಿಯಾಗಿದೆ. ಸದ್ಯ ಬೇಸಿಗೆ ಕಾಲವಾಗಿರುವುದರಿಂದ ತಾಯಿ ಹಾಗೂ ಮರಿ ಜೀಬ್ರಾವನ್ನು ವಿಶೇಷ ಕಾಳಜಿಯೊಂದಿಗೆ ನೋಡಿಕೊಳ್ಳಲಾಗುತ್ತಿದೆ. ಪೋಷಕಾಂಶಗಳ ಹಣ್ಣುಹಂಪಲನ್ನು ತಾಯಿ ಜೀಬ್ರಾಗೆ ನೀಡಲಾಗುತ್ತಿದೆ.

ಇದನ್ನೂ ಓದಿ: Weather Report: ರಾಜ್ಯಾದ್ಯಂತ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ; ವೀಕೆಂಡ್‌ ಮೋಜಿಗೆ ಬ್ರೇಕ್‌

ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ವನ್ಯ ಜೀವಿಗಳ ತಾಣವಾಗಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ವನ್ಯಜೀವಿಗಳನ್ನು ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಪಾರ್ಕ್‌ಗೆ ಹೊಸ ಅತಿಥಿಯೊಂದು ಆಗಮನವಾದಂತೆ ಆಗಿದೆ.

Exit mobile version