Site icon Vistara News

Bearys Mall | ಬ್ಯಾರೀಸ್ ಮಾಲ್ ಲೀಸ್​ ಪ್ರಕರಣ:‌ ಪಾಲಿಕೆ ಆಡಳಿತ ಪಕ್ಷದ ನಾಯಕನ ರಾಜೀನಾಮೆಗೆ ಆಗ್ರಹ

Barrys Mall Municipal Corporation

ಶಿವಮೊಗ್ಗ: ನಗರದ ಶಿವಪ್ಪ ನಾಯಕ ಮಾರುಕಟ್ಟೆಯ ಬ್ಯಾರೀಸ್ ಮಾಲ್‌ನ (Bearys Mall ) 99 ವರ್ಷಗಳ ಲೀಸ್‌​ ಪ್ರಕರಣಕ್ಕೆ ಸಂಬಂಧಿಸಿ ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಬುಧವಾರ (ಡಿ.೨೧) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೀಸ್ ಕುರಿತಾದ ಪ್ರಸ್ತಾವನೆಯನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಜೆಂಡಾಕ್ಕೆ ಸೇರಿಸಿರುವುದು ಆಡಳಿತ ಪಕ್ಷದ ನಾಯಕರೇ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

ಬ್ಯಾರೀಸ್ ಮಾಲ್ ಗೆ ಸಂಬಂಧಿಸಿದಂತೆ ಹಲವು ಗೊಂದಲಗಳು ಮೂಡಿದ್ದವು. 99 ವರ್ಷ ಲೀಸ್‌ಗೆ ಮುಂದುವರಿಸುವುದರ ವಿಚಾರ, ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಜೆಂಡಾಕ್ಕೂ ತರಲಾಗಿತ್ತು. ಈ ಸಂಬಂಧ ರಚಿಸಲಾದ ಸಮಿತಿಯು ವರದಿ ಬಿಡುಗಡೆ ಮಾಡಿತ್ತು, ತನಿಖೆಯ ವೇಳೆ ಚನ್ನಬಸಪ್ಪ ಅವರು ಅಜೆಂಡಾದಲ್ಲಿ ವಿಚಾರ ಸೇರಿಸುವಂತೆ ನನಗೆ ಫೋನ್ ಕರೆ ಮಾಡಿದ್ದರು. ನಾನು ಮೇಯ‌ರ್​ ಮತ್ತು ಆಯುಕ್ತರಿಗೆ ತಿಳಿಸಬೇಕು ಎಂದಿರುವುದಾಗಿ ಕಚೇರಿ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ನೀವು ಸೇರಿಸಿ ಎಂದು ಒತ್ತಡ ತಂದಿದ್ದರಿಂದ ನಾನು ಸೇರಿಸಿದೆ ಎಂದು ಕಚೇರಿ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಆದರೆ ಈಗ ಕಾಂಗ್ರೆಸ್​ ಮೇಲೆ ತಪ್ಪು ಹೊರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ | Cauvery Expressway | ಬೆಂ-ಮೈಸೂರು ಎಕ್ಸ್‌ಪ್ರೆಸ್‌ವೇಗೆ ʼಕಾವೇರಿ ಎಕ್ಸ್‌ಪ್ರೆಸ್‌ ವೇʼ ಹೆಸರಿಡಲು ಪ್ರತಾಪ್‌ ಸಿಂಹ ಮನವಿ

2015 ಮಾರ್ಚ್ 28 ರಂದು ನಡೆದಿದ್ದ ಸಭೆಯಲ್ಲಿ ಬ್ಯಾರೀಸ್ ಮಾಲ್​ ಲೀಸ್ ಆರವತ್ತು ವರ್ಷ ವಿಸ್ತರಣೆಗೆ ಕಾಂಗ್ರೆಸ್​ ವಿಚಾರ ಮುಂದಿಟ್ಟಿತ್ತು ಎಂದು ಆರೋಪಿಸಿದ್ದಾರೆ. ಆದರೆ ಅಂದಿನ ಮೇಯರ್​ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ಎಲ್ಲ ಸದಸ್ಯರು ತೀರ್ಮಾನ ಕೈಗೊಂಡು 60 ವರ್ಷ ಕೊಡಲು ಸಾಧ್ಯವಿಲ್ಲ. 32 ವರ್ಷ ಎಂದು ತೀರ್ಮಾನ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಹಿಂದೆ ತಿರಸ್ಕರಿಸಲ್ಪಟ್ಟ ಈ ವಿಷಯವನ್ನು ಅಜೆಂಡಾಕ್ಕೆ ತರಲು ಚೆನ್ನಬಸಪ್ಪ ಅವರೇ ಕಾರಣ. ಇದರ ಹಿಂದೆ ಕಿಕ್ ಬ್ಯಾಕ್ ಕೂಡ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ. ಹಾಗಾಗಿ ಇದು ಕೋಟ್ಯಂತರ ರೂ.ಗಳ ಹಗರಣ ಕೂಡ ಆಗಿದೆ ಎಂದು ರೇಖಾ ರಂಗನಾಥ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಸದಸ್ಯರಾದ ಎಚ್.ಸಿ.ಯೋಗೀಶ್, ರಮೇಶ್ ಹೆಗ್ಡೆ ಮತ್ತಿತರರು ಇದ್ದರು.

ಇದನ್ನೂ ಓದಿ | Cricket Tournament | ಹವ್ಯಕ ವಿಕಾಸ ವೇದಿಕೆಯಿಂದ ಕ್ರಿಕೆಟ್ ಪಂದ್ಯಾವಳಿ, ರಾಜ್ಯದೆಲ್ಲೆಡೆಯ 26 ಕ್ರಿಕೆಟ್‌ ತಂಡಗಳು ಭಾಗಿ

Exit mobile version