Site icon Vistara News

Bbmp Voter list | ವೋಟರ್‌ ಐಡಿ ಪರಿಷ್ಕರಣೆಗೆ ಇನ್ನೂ ಇದೆ ಅವಕಾಶ! ಬಿಬಿಎಂಪಿ ವಿಶೇಷ ಅಭಿಯಾನ

Voter List

ಬೆಂಗಳೂರು: ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆ ಸಂಬಂಧ ವಾರ್ಡ್‌ವಾರು ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು/ಮತದಾರರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು (Bbmp Voter list) ಸಲ್ಲಿಸಲು ಬಿಬಿಎಂಪಿ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.

ಮತದಾರರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್‌ 9ರಿಂದ ಡಿಸೆಂಬರ್‌ 8ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಈ ಸಂಬಂಧ ಮತದಾರರು ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಹಾಗೂ ತಿದ್ದುಪಡಿ, ಸ್ಥಳಾಂತರಗೊಂಡಿದ್ದಲ್ಲಿ ನಮೂನೆ 6, 6ಎ,7, 8 ಅರ್ಜಿಗಳನ್ನು ಸಲ್ಲಿಸಲು ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. ನವೆಂಬರ್‌ 20 ಹಾಗೂ ಡಿಸೆಂಬರ್‌ 3, 8ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಪ್ರಕಟಣೆ ಹೊರಡಿಸಿದೆ.

ಪಾಲಿಕೆಯ 243 ವಾರ್ಡ್‌ಗಳಲ್ಲಿ ಒಟ್ಟು 79,19,563 ಮತದಾರರಿದ್ದು, ಅದರಲ್ಲಿ 41,14,383 ಪುರುಷರು, 38,03,747 ಮಹಿಳೆಯರು ಹಾಗೂ 1433 ಇತರೆ ಮತದಾರರಿದ್ದಾರೆ. ಸಾರ್ವಜನಿಕರು ತಮ್ಮ ಹಾಗೂ ಕುಟುಂಬ ಸದಸ್ಯರ ಮಾಹಿತಿಯನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.

ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ BBMP Website: bbmp.gov.in ನಲ್ಲಿ Upload ಮಾಡಲಾಗಿದೆ. ಎಲ್ಲಾ ಮತದಾರರ ನೋಂದಣಾಧಿಕಾರಿ/ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮಾಹಿತಿ ಲಭ್ಯವಿರಿಸಲಾಗುತ್ತದೆ. ಹೊಸದಾಗಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಮೊಬೈಲ್ ಆ್ಯಪ್ Voter Helpline App ಮತ್ತು NVSP Portal ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಮತದಾರರು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ | Jeff Bezos | ಸದ್ಯಕ್ಕೆ ಹೊಸ ಕಾರ್, ಫ್ರಿಡ್ಜ್, ಟಿವಿ ಖರೀದಿಸಬೇಡಿ ಎಂದ ಅಮೆಜಾನ್ ಸಂಸ್ಥಾಪಕ ಬೆಜೋಸ್

Exit mobile version