ವಿಜಯನಗರ: ಇಲ್ಲಿನ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದ ಹೊರವಲಯದಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ರೈತನ ಮೇಲೆ ಕರಡಿಗಳು ದಾಳಿ (Bear attack) ನಡೆಸಿವೆ. ಮೂಷ್ಟರಪ್ಪ (58) ಕರಡಿಗಳ ದಾಳಿಗೆ ಒಳಗಾದ ರೈತ.
ಸಂಡೂರು ತಾಲೂಕಿನ ಜೋಗ ಗ್ರಾಮದ ರೈತ ಮೂಷ್ಟರಪ್ಪ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿವೆ. ಕರಡಿಯಿಂದ ತಪ್ಪಿಸಿಕೊಂಡ ರೈತ ಮೂಷ್ಟರಪ್ಪ ಅವರಿಗೆ ಗಂಭೀರ ಗಾಯಗಳಾಗಿದೆ. ಮೂಷ್ಟರಪ್ಪ ಅವರ ಕಿರುಚಾಟ ಕೇಳಿ ಅಕ್ಕಪಕ್ಕದ ರೈತರು ಓಡಿ ಬಂದು ಕರಡಿಗಳನ್ನು ಓಡಿಸಿದ್ದಾರೆ.
ತೀವ್ರ ಗಾಯಗೊಂಡಿದ್ದ ಮೂಷ್ಟರಪ್ಪರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೊಸಪೇಟೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಗ್ರಾಮದಲ್ಲಿ ಚಿರತೆ ಹಾವಳಿಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ | Leopard attack | ಮೈಸೂರು ನಗರಕ್ಕೇ ಬಂತು ಚಿರತೆ ದಂಡು; CFTRI ಶಾಲೆ ಬಳಿ ರಾತ್ರಿ ಸಂಚಾರ ಕಂಡು ಬೆಚ್ಚಿದ ಸಿಬ್ಬಂದಿ