Site icon Vistara News

ಜಮೀನಿಗೆ ತೆರಳಿದ ರೈತನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಕರಡಿ

ಕರಡಿ ದಾಳಿ

ವಿಜಯನಗರ : ರಾಜ್ಯದಲ್ಲಿ ಕರಡಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜಮೀನಿಗೆ ತೆರಳಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದೆ. ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ (ಆ.12) ರೈತ ಕೇಶವ್ (40) ಎನ್ನುವವರ ಮೇಲೆ ಕರಡಿ ದಾಳಿ ಮಾಡಿದೆ.

ತೀವ್ರವಾಗಿ ಗಾಯಗೊಂಡ ರೈತ ಕೇಶವ್‌ ಅವರು ಬಳ್ಳಾರಿ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬೆಳಗಿನ ಜಾವ ಜಮೀನಿಗೆ ಹೋಗಿ ಮರಳುವ ವೇಳೆ ರೈತನ ಮೇಲೆ ಕರಡಿ ದಾಳಿ ಮಾಡಿರುವುದಾಗಿ ತಿಳಿದು ಬಂದಿದೆ. ಇದೀಗ ಕರಡಿ ಹಾವಳಿಗೆ ಕಡಿವಾಣ ಹಾಕುವಂತೆ ರೈತರು ಒತ್ತಾಯಿಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಇದನ್ನೂ ಓದಿ | ವಿಜಯನಗರದಲ್ಲಿ ಮತ್ತೆ ಕಾಣಿಸಿದ ಕರಡಿ ಹಾವಳಿ

ಈ ಹಿಂದೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು ಕಂಡುಬಂದಿತ್ತು. ರೈತರ ಜಮೀನಿಗೆ ದಾಳಿ ನಡೆಸಿ ಬೆಳೆ ನಾಶ ಮಾಡಿದ್ದು ಕಂಡಿತ್ತು. ಪೆಟ್ರೋಲ್‌ ಬಂಕ್‌ನ ಸಿಸಿ ಕ್ಯಾಮರಾದಲ್ಲಿ ಕರಡಿ ಓಡಾಡುವ ದೃಶ್ಯ ಸೆರೆಯಾಗಿತ್ತು. ಇನ್ನೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದೇವನಳ್ಳಿ ವ್ಯಾಪ್ತಿಯ ಸರಗುಪ್ಪ ಅರಣ್ಯ ಪ್ರದೇಶದಲ್ಲಿ ಕರಡಿ ದಾಳಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದರು. ಕಾಡಿನಲ್ಲಿ ಉಪ್ಪಂಗಿ ಹುಳಿಯನ್ನು ತರಲು ಹೋಗಿದರು ಎನ್ನಲಾಗಿದೆ.

ಇದನ್ನೂ ಓದಿ | Bear attack | ಕರಡಿ ದಾಳಿಗೆ ಶಿರಸಿಯಲ್ಲಿ ವ್ಯಕ್ತಿ ಬಲಿ; ಸ್ಥಳೀಯರಲ್ಲಿ ಆತಂಕ

Exit mobile version