ಕಾರವಾರ: ವೃದ್ಧನ ಮೇಲೆ ಕರಡಿಯೊಂದು (Bear Attack) ಎರಗಿ ಕಣ್ಣು ಗುಡ್ಡೆ ಕಿತ್ತುಹಾಕಿರುವ ಘಟನೆ ನಡೆದಿದೆ. ಕರಡಿಯಿಂದ ತಪ್ಪಿಸಿಕೊಂಡ ವೃದ್ಧ ಗಂಭೀರವಾಗಿ ಗಾಯಗೊಂಡರೂ 2 ಕಿ.ಮೀ. ವರೆಗೆ ನಡೆದು ಬಂದು ಜೀವ ಉಳಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ತಿಂಬೋಲಿ ಗ್ರಾಮದ ಕಾಡಿನಲ್ಲಿ ಕರಡಿ ದಾಳಿ ಮಾಡಿದೆ. ಮಹಾರಾಷ್ಟ್ರ ಮೂಲದ ವಿಠ್ಠು ಶೆಳಕೆ (70) ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಠ್ಠು ಶೆಳಕೆ ರಾಮನಗರದಿಂದ ತಿಂಬೋಲಿ ಗ್ರಾಮಕ್ಕೆ ಕಾಡಿನ ಹಾದಿಯಲ್ಲಿ ನಡೆದು ಹೊರಟಿದ್ದರು. ಏಕಾಏಕಿ ಬಂದ ಕರಡಿ ಮೈ ಮೇಲೆ ಎರಗಿದೆ. ತಲೆಗೆ ಹಾಗೂ ಕಣ್ಣುಗಳನ್ನು ಕಿತ್ತು ಹಾಕಿದೆ. ಕರಡಿಯಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆಗದೇ ಇದ್ದಾಗ, ಜೋರಾಗಿ ಕಿರುಚಿಕೊಂಡಿದ್ದಾರೆ. ಈ ವೇಳೆ ಕರಡಿ ಗಾಬರಿಯಾಗಿ ಓಡಿದೆ. ಗಂಭೀರವಾಗಿ ಗಾಯಗೊಂಡು ರಕ್ತ ಸುರಿಯುತ್ತಿದ್ದರೂ 2 ಕಿ.ಮೀವರೆಗೆ ನಡೆದುಕೊಂಡು ಬಂದು ಜೀವ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: Weather Report: ಉತ್ತರದಿಂದ ದಕ್ಷಿಣಕ್ಕೆ ಮಳೆ ಪ್ರದಕ್ಷಿಣೆ; ಮೈಸೂರಲ್ಲಿ ನೀರುಪಾಲಾದ ಜಮೀನು
ಗಂಭೀರ ಗಾಯಗೊಂಡಿರುವ ವಿಠ್ಠು ಶೆಳಕೆ ಅವರನ್ನು ರಾಮನಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ರವಾನೆ ಮಾಡಲಾಗಿದೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಡಿ ದಾಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ