Site icon Vistara News

Rain News | ಶಿವಮೊಗ್ಗದ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತ; ಜೀವ ಪಣಕ್ಕಿಟ್ಟು ದೋಣಿಯಲ್ಲಿ ಸಂಚಾರ

ಬೀಸನಗದ್ದೆ

ಶಿವಮೊಗ್ಗ: ಭಾರಿ ಮಳೆಯಿಂದ ಜಿಲ್ಲೆಯ ಸಾಗರ ತಾಲೂಕಿನ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮಸ್ಥರು ಹೊರಪ್ರಪಂಚಕ್ಕೆ ಬರಬೇಕಾದರೆ ದೋಣಿಯೇ ಇವರಿಗೆ ಆಸರೆಯಾಗಿದೆ.

ಸುಮಾರು 25ಕ್ಕೂ ಹೆಚ್ಚು ಕುಟುಂಬ ಕಳೆದೊಂದು ವಾರದಿಂದ ನಡುಗಡ್ಡೆಯಲ್ಲಿವೆ. ಸಾಗರ ತಾಲೂಕು ಆಡಳಿತವು ಗ್ರಾಮಸ್ಥರಿಗೆ ಸಂಚರಿಸಲು ದೋಣಿ ವ್ಯವಸ್ಥೆ ಮಾಡಿದ್ದರೂ ದೋಣಿ ಚಲಾಯಿಸಲು ಅನುಭವಿ ಅಂಬಿಗನನ್ನು ನೇಮಿಸಿಲ್ಲ. ಬೀಸನಗದ್ದೆ ಗ್ರಾಮಸ್ಥರೇ ಜೀವ ಪಣಕ್ಕಿಟ್ಟು ಅನಿವಾರ್ಯವಾಗಿ ದೋಣಿ ಚಲಾವಣೆ ಮಾಡುತ್ತಿದ್ದಾರೆ.

ಲೈಫ್ ಸೇವಿಂಗ್‌ ಜಾಕೆಟ್‌ ಕೂಡ ನೀಡದೆ ಇರುವುದು ಶಿವಮೊಗ್ಗ ಜಿಲ್ಲಾ ಆಡಳಿತದ ಬೇಜವಾಬ್ದಾರಿತನವನ್ನು ತೋರಿಸುತ್ತಿದೆ. ಅಪ್ರಾಪ್ತ ಬಾಲಕರೇ ಲೈಫ್ ಸೇವಿಂಗ್ ಜಾಕೆಟ್‌ ಬಳಸದೇ ದೋಣಿ ಚಲಾಯಿಸುತ್ತಿದ್ದಾರೆ. ಮುಂದೇನಾದರೂ ಅವಘಡ ಸಂಭವಿಸಿ ಪ್ರಾಣಹಾನಿಯಾದರೆ ಯಾರು ಜವಾಬ್ದಾರರು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಗ್ರಾಮಸ್ಥರ ಓಡಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Rain News | ಕೇಂದ್ರಕ್ಕೆ ಕಾಯದೇ ಮಳೆ ಹಾನಿ ಪರಿಹಾರ ಕೊಡುತ್ತೇವೆ; ಸಚಿವ ಆರ್‌.ಅಶೋಕ್

Exit mobile version